ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?

Untitled design (32)

ಪದ್ಮಭೂಷಣ ಡಾ. ಅನಂತ್ ನಾಗ್ ಸಿಕ್ಕಾಪಟ್ಟೆ ಸೈಲೆಂಟ್.. ಆದ್ರೆ ಒಮ್ಮೊಮ್ಮೆ ವಿಷಯಗಳ ಚರ್ಚೆಗೆ ಬಂದ್ರೆ ಸಖತ್ ವೈಲೆಂಟ್ ಆಗ್ತಾರೆ. ಆದ್ರೀಗ ಅದೇ ಸೈಲೆಂಟ್ ನಟ ಆಡಿದ ಒಂದು ಮಾತು ಇಡೀ ರಾಜ್ಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿದೆ. ನೀಟ್ ಅವಾಂತರದ ವಿರುದ್ಧ ರೋಡ್‌ಗಿಳಿದಿದ್ದ Gen-Z ಪಡೆ ವಿರುದ್ಧ ಹಿರಿಯ ನಟ ಅನಂತ್ ನಾಗ್ ಫೈಯರ್ ಆಗಿದ್ದು, ಇದ್ದಕ್ಕಿದ್ದಂತೆ ಅನಂತ್ ಈ ರೇಂಜ್‌ಗೆ ಗರಂ ಆಗಿದ್ದೇಕೆ..? ಪ್ರಧಾನಿ ಮೋದಿಯನ್ನ ಹೊಗಳೋ ಭರದಲ್ಲಿ ಅನಂತ್ ಏನು ಹೇಳಿದ್ರು ಅಂತ ಹೇಳ್ತೀವಿ ಈ ಸ್ಟೋರಿ ನೋಡಿ.

ಕನ್ನಡ ಚಿತ್ರರಂಗದ ಮೋಸ್ಟ್ ರೆಸ್ಪೆಕ್ಟೆಡ್ ಆ್ಯಕ್ಟರ್, ವಿವಾದಗಳಿಂದ ಎಷ್ಟೋ ಮೈಲಿ ದೂರ ಇರೋ ಪದ್ಮಭೂಷಣ ಡಾ. ಅನಂತ್ ನಾಗ್, ಇದೀಗ ಕಾಂಟ್ರವರ್ಸಿ ಒಂದಕ್ಕೆ ನೇರವಾಗಿ ಎಂಟ್ರಿ ಕೊಟ್ಟಿದ್ದಾರೆ. ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ಬೀದಿಗಿಳಿದಿದ್ದ ಇಂದಿನ ಝೆನ್-ಝೀ ಯುವಪಡೆಯ ವಿರುದ್ಧ ಹಿರಿಯ ನಟ ಅನಂತ್ ನಾಗ್ ಕಂಟ್ರೋಲ್ ತಪ್ಪಿ ಮಾತನಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋಗೆ ಕಾಮೆಂಟ್ಸ್ ಬರ್ತಿವೆ. ಇಷ್ಟು ದಿನ ತಾವಾಯಿತು, ತಮ್ಮ ಸಿನಿಮಾಗಳಾಯಿತು ಅಂತಿದ್ದ ಅನಂತ್ ಅವರು, ಇದ್ದಕ್ಕಿದ್ದಂತೆ

ಯುವಜನತೆಯನ್ನೇ ಅಂಟುರೋಗ ಅಂತ ಕರೆದಿದ್ದೇಕೆ ಅನ್ನೋದು ಈಗ ಇಡೀ ಗಾಂಧಿನಗರ ಹಾಗೂ ರಾಜಕೀಯ ಅಂಗಳದಲ್ಲಿ ಬೆಂಕಿ ಹೊತ್ತಿಸಿದೆ.

ವಿಷಯ ಏನೆಂದರೆ, ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅನಂತ್ ನಾಗ್ ಭಾಗಿಯಾಗಿದ್ದರು. ಅಲ್ಲಿ ಮೈಕ್ ಹಿಡಿದ ಅವರು, ಇಂದಿನ ಜನ್-ಝೀ ಯುವಕರ ಹೋರಾಟದ ವೈಖರಿಯನ್ನು ಕಟುವಾಗಿ ಟೀಕಿಸಿದರು. ಈ ದೇಶಕ್ಕೆ ಈ ಝೆನ್-ಝೀ ಹುಡುಗರು ಒಂಥರಾ ಅಂಟುರೋಗ ಇದ್ದಂತೆ ಕಷ್ಟಪಟ್ಟು ಬಡತನದಿಂದ ಬಂದ ಮಕ್ಕಳು ಯಾವತ್ತೂ ಈ ರೀತಿ ಬೀದಿಗೆ ಇಳಿಯಲ್ಲ. ಬಡತನ ಅಂದ್ರೆ ಏನು ಅನ್ನೋದೇ ಗೊತ್ತಿಲ್ಲದ ಪಟ್ಟಣದ ಹಾಯಾದ ಯುವಕರಿಂದಲೇ ಈ ದೇಶದಲ್ಲಿ ದುರಂತಗಳು ಸಂಭವಿಸ್ತಿವೆ ಅಂತ ವೇದಿಕೆಯಲ್ಲೇ ಖಾರವಾಗಿ ಮಾತನಾಡಿದ್ದಾರೆ.

ಇಷ್ಟಕ್ಕೇ ಅನಂತ್ ನಾಗ್ ಅವರ ಕೋಪ ತಣ್ಣಗಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇನ್ನಷ್ಟು ಬೋಲ್ಡ್ ಹೇಳಿಕೆ ನೀಡಿದರು. ಇಂಥ ಯುವಕರ ಹೋರಾಟಕ್ಕೆ ಹೆದರಿ ದೇಶದ ಪ್ರಧಾನಿಗಳೇ ಕ್ಷಮೆ ಕೇಳಿದ್ದಾರೆ ಅಂದಾಗ, ನನಗಂತೂ ತಡೆಯೋಕೆ ಆಗಲಿಲ್ಲ ಅಂತ ತನ್ನ ಕೆನ್ನೆಗೆ ಹೊಡೆದುಕೊಳ್ಳೋ ಮೂಲಕ ಬಹಿರಂಗವಾಗಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ಪ್ರಧಾನಿಯವರನ್ನ ಹೊಗಳೋ ಭರದಲ್ಲಿ ಹಿರಿಯ ನಟ ಜನ್-ಝೀ ಕಿಡ್ಸ್‌ಗೆ ಅತಿಯಾಗಿಯೇ ಕ್ಲಾಸ್ ತಗೊಂಡ್ರಾ ಅನ್ನೋ ಅನುಮಾನ ಈಗ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚೆ ಆಗ್ತಿದೆ.

ಅನಂತ್ ನಾಗ್ ಅವರ ಈ ಹಾಟ್ ಸ್ಟೇಟ್‌ಮೆಂಟ್ ಹೊರಬೀಳ್ತಿದ್ದಂತೆಯೇ, ಇಂಟರ್ನೆಟ್‌ನಲ್ಲಿ ಜನ್-ಝೀ ಪಾರ್ಟಿಸ್ ಮತ್ತು ಯುವಪಡೆ ಫುಲ್ ಕ್ರಾಂತಿ ಎಬ್ಬಿಸಿದ್ದಾರೆ. ಭವಿಷ್ಯದ ಪ್ರಶ್ನೆ ಬಂದಾಗ, ಪ್ರಶ್ನೆ ಪತ್ರಿಕೆ ಲೀಕ್ ಆದಾಗ ತಮ್ಮ ಹಕ್ಕಿಗಾಗಿ ಹೋರಾಟ ಮಾಡುವುದು ಅಂಟುರೋಗನಾ..?ಅಂತ ಅನಂತ್ ನಾಗ್ ಅವರಿಗೆ ಯುವಜನತೆ ಪ್ರಶ್ನೆ ಮಾಡ್ತಿದ್ದಾರೆ. ಹಿರಿಯ ನಟರ ಅನುಭವಕ್ಕೆ ಗೌರವ ಇದೆಯಾದರೂ, ಯುವಕರ ನ್ಯಾಯಯುತ ಹೋರಾಟವನ್ನು ಈ ರೀತಿ ಹಗುರವಾಗಿ ಕಾಣುವುದು ಸರಿಯೇ ಅಂತ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಯೇ ಹರಿಯುತ್ತಿದೆ.

ಒಟ್ಟಿನಲ್ಲಿ, ಯಾವುದೇ ವಿವಾದ ಇಲ್ಲದೆ ಶಾಂತವಾಗಿದ್ದ ಅನಂತ್ ನಾಗ್ ಅವರ ಇಮೇಜ್‌ಗೆ ಈ ಒಂದು ಹೇಳಿಕೆ ದೊಡ್ಡ ಮಟ್ಟದ ಸವಾಲನ್ನೇ ತಂದಿಟ್ಟಿದೆ. ಯುವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರೋ ಅನಂತ್ ಅವರ ಹೇಳಿಕೆಯ ವಿವಾದ ಇಲ್ಲಿಗೆ ತಣ್ಣಗಾಗುತ್ತೋ ಅಥವಾ ಇನ್ಯಾವ ಹಂತಕ್ಕೆ ಹೋಗಿ ಮುಟ್ಟುತ್ತೋ..?gen z ಆಕ್ರೋಶ ಹೆಚ್ಚಾಗ್ತಿರೋ ಬೆನ್ನಲ್ಲೇ ಹಿರಿಯ ನಟ ಅನಂತ್ ನಾಗ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡ್ತಾರಾ ಅಥವಾ ಸೈಲೆಂಟ್ ಆಗಿರ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version