ರಾಜ್ ಬಿ ಶೆಟ್ಟಿ ಸದ್ಯ ಸ್ಯಾಂಡಲ್‌ವುಡ್‌ನ ಮೋಸ್ಟ್ ಸೆನ್ಸೇಷನಲ್ ಸ್ಟಾರ್. ತರಹೇವಾರಿ ಪಾತ್ರಗಳು, ಕಥೆಗಳ ಮೂಲಕ ಚಿತ್ರಪ್ರೇಮಿಗಳಿಗೆ ಮಸ್ತ್ ಮನರಂಜನೆ ನೀಡ್ತಿದ್ದಾರೆ. ರಕ್ಕಸಪುರದೋಳ್ ಚಿತ್ರ ಸದ್ಯ ಎರಡನೇ ವಾರ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣ್ತಿದ್ದು, ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಕೂಡ ಚಿತ್ರವನ್ನ ಪ್ರಶಂಸಿಸಿದ್ದಾರೆ.
ರಾಜ್ ಬಿ ಶೆಟ್ಟಿಯ ಹೆಸರು ಸದ್ಯ ಕರುನಾಡಿನಲ್ಲಷ್ಟೇ ಅಲ್ಲ, ಪರಭಾಷಾ ಸ್ಟಾರ್‌ಗಳು, ಫಿಲ್ಮ್ ಮೇಕರ್ಸ್ ಹಾಗೂ ಚಿತ್ರಪ್ರೇಮಿಗಳ ಬಾಯಲ್ಲೂ ಮೊಳಗುವಂತಾಗಿದೆ. ಅದಕ್ಕೆ ಕಾರಣ ಅವ್ರಲ್ಲಿರೋ ಟ್ಯಾಲೆಂಟ್. ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿರ್ವಹಿಸುವ ರಾಜ್ ಶೆಟ್ಟಿ, ಮಮ್ಮುಟ್ಟಿ ಅಂತಹ ಮೆಗಾಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು.
ರಾಜ್ ಬಿ ಶೆಟ್ಟಿ ರಕ್ಕಸಪುರದೋಳ್ ಮೆಚ್ಚಿದ ಸಲ್ಮಾನ್ ಖಾನ್
ಯಶಸ್ವಿ 2ನೇ ವಾರಕ್ಕೆ ಕಾಲಿಟ್ಟಿರೋ ಕ್ರೈಂ ಥ್ರಿಲ್ಲರ್ ವೆಂಚರ್..!!
ಅಜಯ್ ದೇವಗನ್, ಅಕ್ಷಯ್ ಕುಮಾರ್ ಅಂತಹ ಬಾಲಿವುಡ್ ಸ್ಟಾರ್‌ಗಳು ಸು ಫ್ರಮ್ ಸೋ ನೋಡಿ ಮನೆಗೆ ಕರೆಸಿ, ಒಳ್ಳೆಯ ಕಥೆ ಇದ್ರೆ ಹೇಳಿ ಒಟ್ಟಿಗೆ ಮಾಡೋಣ ಅಂದಿದ್ರು. ಇದೀಗ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರೇ ರಾಜ್ ಶೆಟ್ರ ರಕ್ಕಸಪುರದೋಳ್ ಚಿತ್ರವನ್ನ ಮೆಚ್ಚಿದ್ದಾರೆ. ಟೀಸರ್ ಹಾಗೂ ಟ್ರೈಲರ್ ನಲ್ಲಿರೋ ಒಂದೊಂದು ಸೀಕ್ವೆನ್ಸ್‌ನ ಕೂಡ ಹುಬ್ಬೇರಿಸಿ ನೋಡಿದ್ದಾರೆ. ಅಲ್ಲದೆ, ಇದು ಯಾವ ಜಾನರ್..? ಹೋ.. ರಾಜ್ ಬಿ ಶೆಟ್ಟಿ ಅವ್ರಾ ಲೀಡ್ ಅಂತೆಲ್ಲಾ ಕ್ಯೂರಿಯಾಸಿಟಿಯಿಂದ ಕೇಳಿದ್ದಾರೆ.
ಇದೆಲ್ಲಾ ಹೇಗೆ ಸಾಧ್ಯವಾಯ್ತು ಅಂದ್ರೆ ಅದಕ್ಕೆ ಕಾರಣ ರಕ್ಕಸಪುರದೋಳ್ ಚಿತ್ರದ ನಿರ್ಮಾಪಕರು. ಸ್ಟಂಟ್ ಮಾಸ್ಟರ್ ರವಿವರ್ಮಾ ಅವರು ಸಲ್ಮಾನ್ ಖಾನ್ ಅಚ್ಚು ಮೆಚ್ಚಿನ ಸಾಹಸ ನಿರ್ದೇಶಕ. ಅವ್ರ ಸಾಕಷ್ಟು ಚಿತ್ರಗಳಿಗೆ ರವಿವರ್ಮಾ ಮಾಸ್ಟರ್ ಸ್ಟಂಟ್ಸ್ ಮಾಡಿಸಿದ್ದಾರೆ. ಹಾಗಾಗಿ ಇತ್ತೀಚೆಗೆ ಗಲ್ವಾನ್ ಸಿನಿಮಾದ ಸೆಟ್‌ನಲ್ಲಿ ಫೈಟ್ ಕಂಪೋಸ್ ಬಳಿಕ ಬಿಡುವಿನ ವೇಳೆ ಅವರಿಗೆ ರಕ್ಕಸಪುರದೋಳ್ ಗ್ಲಿಂಪ್ಸ್ ತೋರಿಸಿದ್ದಾರೆ. ಆಗ ಸಲ್ಲು ಎಂಜಾಯ್ ಮಾಡ್ತಾ ಕಣ್ತುಂಬಿಕೊಂಡಿದ್ದಾರೆ.
ಗಲ್ವಾನ್ ಶೂಟಿಂಗ್ ವೇಳೆ ಟೀಸರ್, ಟ್ರೈಲರ್ ನೋಡಿ ಥ್ರಿಲ್
ಜಾನರ್ ಜೊತೆ ರಾಜ್ ಶೆಟ್ಟಿ ಬಗ್ಗೆ ಭಾಯಿಜಾನ್ ಏನಂದ್ರು..?!
ಅಂದಹಾಗೆ ರಾಜ್ ಬಿ ಶೆಟ್ಟಿ ಅವ್ರ ಕ್ರೈಂ ಥ್ರಿಲ್ಲರ್ ಜಾನರ್ ರಕ್ಕಸಪುರದೋಳ್ ಸಿನಿಮಾ ಫೆಬ್ರವರಿ 6ಕ್ಕೆ ತೆರೆಕಂಡಿತ್ತು. ಎಲ್ಲೆಡೆಯಿಂದ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿರೋ ಈ ಸಿನಿಮಾ, ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋ ರಕ್ಕಸಪುರದೋಳ್ ನೋಡುಗರ ನಿರೀಕ್ಷೆಗೂ ಮೀರಿದಂತಹ ಮನರಂಜನೆ ನೀಡ್ತಿದೆ. ಒಟ್ಟಾರೆ ರವಿ ಸಾರಂಗ ನಿರ್ದೇಶನದ ರಕ್ಕಸಪುರದೋಳ್ ಈ ವರ್ಷದ ಸಕ್ಸಸ್‌ಫುಲ್ ಸಿನಿಮಾಗಳ ಲಿಸ್ಟ್ ಸೇರಿದೆ.





