ನೀವು ನಾವು ಅಂದುಕೊಂಡಷ್ಟು ಚಿಕ್ಕದಾಗಿಲ್ಲ ಕಿಚ್ಚನ ಬಿಆರ್‌ಬಿ ವರ್ಲ್ಡ್. ಇಲ್ಲಿಯವರೆಗೂ ಅಂತೆ ಕಂತೆಯಾಗಿದ್ದ ಬಿಲ್ಲ ರಂಗ ಬಾಷ ದುನಿಯಾ ಇದೀಗ ಕೊಂಚ ರಿವೀಲ್ ಆಗಿದೆ. ದಿ ವೆಯ್ಟ್ ಈಸ್ ಓವರ್. ಸಣ್ಣದೊಂದು ಮೇಕಿಂಗ್ ಝಲಕ್‌ನಿಂದ ನೋಡುಗರ ಹುಬ್ಬೇರಿಸಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್. ಇಷ್ಟಕ್ಕೂ ಹೇಗಿದೆ BRB ಮೇಕಿಂಗ್ ಅಂತೀರಾ..?
ಇದೇ ಮೊದಲ ಬಾರಿಗೆ ಚಿತ್ರತಂಡ ಸಿನಿಮಾದ ಮೇಕಿಂಗ್ ವಿಡಿಯೋನ ಅಧಿಕೃತವಾಗಿ ರಿವೀಲ್ ಮಾಡಿದೆ. ಇತ್ತೀಚೆಗೆ ಶೂಟಿಂಗ್ ಶುರುವಾದ ಮಾಹಿತಿಯನ್ನ ಸ್ವತಃ ಚಿತ್ರತಂಡ ಅನೌನ್ಸ್ ಮಾಡಿತ್ತು. ಆದ್ರೆ ಅದ್ರ ರೇಂಜ್ ಎಂಥದ್ದು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಆದ್ರೀಗ ಬಿಆರ್‌ಬಿ ಪ್ರಪಂಚ ಎಷ್ಟು ದೊಡ್ಡದಾಗಿದೆ ಅನ್ನೋದ್ರ ಹಿಂಟ್ ಬಿಟ್ಟುಕೊಟ್ಟಿದೆ ಟೀಂ.
ಬಾದ್‌ಷಾ ಕಿಚ್ಚ ಸುದೀಪ್ ಲೀಡ್‌ನಲ್ಲಿ ನಟಿಸ್ತಿರೋ ಬಿಲ್ಲ ರಂಗ ಬಾಷ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಇಂಡಿಯನ್ ಮೂವಿ. ಅದಕ್ಕೆ ಕಾರಣ ಅವ್ರ ಈ ಹಿಂದಿನ ಮ್ಯಾಕ್ಸ್ ಮ್ಯಾಕ್ಸಿಮಮ್ ಬ್ಲಾಕ್ ಬಸ್ಟರ್ ಹಿಟ್ ಆಗಿರೋದು. ಕಿಚ್ಚನ ಹೈಟು, ವೆಯ್ಟು, ಸ್ಟೈಲು- ಮ್ಯಾನರಿಸಂಗೆ ತಕ್ಕನಾಗಿ ಸಿನಿಮಾದಲ್ಲಿನ ಪಾತ್ರ ಹಾಗೂ ಕಥೆ ಬ್ಲೆಂಡ್ ಆಗಲಿದ್ದು, ಸ್ವತಃ ಸುದೀಪ್ ಅವರೇ ಬಿಲ್ಲ ರಂಗ ಬಾಷ ಕಥೆಯನ್ನ ಮೆಚ್ಚಿಕೊಂಡು ಅಪ್ಪಿಕೊಂಡು ಬಣ್ಣ ಹಚ್ಚಿದ್ದಾರೆ.
ವಿಕ್ರಾಂತ್ ರೋಣ ಚಿತ್ರದ ಬಳಿಕ ಬೇರೆ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶಗಳಿದ್ದರೂ ಸಹ, ಅವೆಲ್ಲವನ್ನ ಕೈಬಿಟ್ಟು ಇದೊಂದೇ ಸಿನಿಮಾಗಾಗಿ ಹಗಲಿರುಳು ದುಡಿದ ಅನೂಪ್ ಭಂಡಾರಿ, ಈ ಬಾರಿ ಕಿಚ್ಚನ ಫ್ಯಾನ್ಸ್‌ಗೆ ನಿರಾಸೆ ಪಡಿಸಲ್ಲ ಅನ್ನೋ ಭರವಸೆ ನೀಡಿದ್ದಾರೆ. ಅದೇ ಕಾರಣದಿಂದ ಕೆಜಿಎಫ್ ಆರ್ಟ್ ಡೈರೆಕ್ಟರ್ ಶಿವಕುಮಾರ್ ಕಲಾಕುಂಚದಲ್ಲಿ ಅರಳಿದ ಬೃಹತ್ ಸೆಟ್‌ಗಳಲ್ಲಿ ಬಿಲ್ಲ ರಂಗ ಬಾಷ ಪ್ರಪಂಚ ಸೆರೆಯಾಗ್ತಿದೆ.
ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಬಿಆರ್‌ಬಿಗೆ ಇರಲಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಪ್ರತೀ ದಿನ ನೂರಾರು ಮಂದಿ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡ್ತಿದ್ದು, ಚಿತ್ರದ ದೃಶ್ಯಗಳು ಸೋರಿಕೆ ಆಗದಂತೆ ತಡೆಯೋ ನಿಟ್ಟಿನಲ್ಲಿ ಚಿತ್ರೀಕರಣದ ಸೆಟ್‌ಗೆ ಮೊಬೈಲ್‌ಗಳನ್ನ ನಿಷೇಧಿಸಲಾಗಿದೆ. ಕಂಪ್ಲೀಟ್ ಚೆಕಪ್ ಮಾಡಿ ಸೆಟ್ ಒಳಗೆ ಬಿಡಲಾಗ್ತಿದ್ದು, ಐಡಿ ಕಾರ್ಡ್‌ಗಳನ್ನು ಕಡ್ಡಾಯವಾಗಿ ಧರಿಸಿರಬೇಕು.
ನಾಲ್ಕು ಕ್ಯಾರವಾನ್‌ಗಳು ಶೂಟಿಂಗ್ ಸೆಟ್ ಬಳಿ ನಿಂತಿದ್ದು, ಹೀರೋ ಕಿಚ್ಚ ಸುದೀಪ್, ಡೈರೆಕ್ಟರ್ ಅನೂಪ್, ಪ್ರೊಡ್ಯೂಸರ್ ಹಾಗೂ ಉಳಿದ ಕಲಾವಿದರುಗಳಿಗೆ ಬಳಸಲಾಗುತ್ತಿದೆ. ಸೆಟ್‌ಗೆ ಕಿಚ್ಚನ ಎಂಟ್ರಿ ಸ್ಟೈಲಿಶ್ ಆಗಿದ್ದು, ಕ್ಯಾರವಾನ್ ಒಳಹೊಕ್ಕ ಬಳಿಕ, ಮೇಕಪ್‌ಗೆ ಕೂತ ಬಾದ್‌ಷಾ ಸುದೀಪ್ ಕುತ್ತಿಗೆ ಮೇಲೆ ಟ್ಯಾಟೂ ಹಾಗೂ ಗಾಯದ ಮಾರ್ಕ್ ಒಂದು ಕ್ಯೂರಿಯಾಸಿಟಿ ಹುಟ್ಟಿಸಿದೆ.
ಹೈ ವೋಲ್ಟೇಜ್ ಮಾಸ್ ಫ್ಯಾಂಟಸಿ ಎಂಟರ್‌ಟೈನರ್ ನೀಡೋಕೆ ಸಜ್ಜಾಗಿರೋ ಅನೂಪ್ ಭಂಡಾರಿ, ಕಿಚ್ಚನನ್ನ ಹಿಂದೆಂದೂ ತೋರಿಸಿರದ ರೀತಿಯಲ್ಲಿ ಸ್ಕ್ರೀನ್ ಮೇಲೆ ಪ್ರೆಸೆಂಟ್ ಮಾಡಲಿದ್ದಾರಂತೆ. ಪ್ರತೀ ಸಿನಿಮಾದಲ್ಲೂ ಕಿಚ್ಚನಿಗೊಂದು ಖಡಕ್ ಲುಕ್ ಇರಲಿದೆ. ಈ ಬಾರಿ ಸುದೀಪ್ ಎಂತಹ ಗೆಟಪ್‌ಗಳಲ್ಲಿ ಮಿಂಚು ಹರಿಸ್ತಾರೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.