ಬಿಗ್‌ಬಾಸ್ ಸ್ಪರ್ಧಿಗಳಾದ ವಿನಯ್‌ಗೌಡ ಹಾಗೂ ರಜತ್ ಕಿಶನ್ ಅವರಿಗೆ ಸಂಕಷ್ಟ ಎದುರಾಗಿದೆ. ಇವರಿಬ್ಬರು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಬಿಗ್ ಬಾಸ್’ ಕಾರ್ಯಕ್ರಮದಿಂದ ಖ್ಯಾತಿ ಪಡೆದ ರಜತ್ ಮತ್ತು ವಿನಯ್, ರೀಲ್ಸ್ ಮಾಡಲು ಲಾಂಗ್ ಪ್ರದರ್ಶನ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು. ನಂತರ ಇಬ್ಬರು, ನಾಪತ್ತೆಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ಪೊಲೀಸರ ಬಲೆ ಬೀಸಿ, ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.
ಮಾಚೋಮ್ಯಾನ್ ದರ್ಶನ್ ಅವರ ಅಭಿಮಾನಿಗಳಾದ ಈ ಇಬ್ಬರು ನಟರು, ತಮ್ಮ ಪ್ರೀತಿಯ ನಟನ ಚಿತ್ರಗಳ ಟೈಟಲ್ಸ್ ಅನ್ನು ತಮ್ಮ ಶರ್ಟ್ ಮತ್ತು ಪ್ಯಾಂಟ್ ಮೇಲೆ ಬರೆಸಿಕೊಂಡಿದ್ದರು. ‘ಡಿ ಬಾಸ್’ ಎಂಬ ಶಬ್ದದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದ ನಟ ರಜತ್ ಎಲ್ಲರ ಗಮನ ಸೆಳೆದಿದ್ದರು. ಆದರೆ, ಈ ರೀತಿ ಕಾನೂನು ಬಾಹಿರವಾಗಿ ಅಸ್ತ್ರ ಪ್ರದರ್ಶನ ಮಾಡುವ ಮೂಲಕ ಸಮಸ್ಯೆ ತಂದಿಟ್ಟುಕೊಂಡಿದ್ದಾರೆ.
ಕರ್ನಾಟಕದಲ್ಲಿ ಎಚ್ಛೆಯಿಲ್ಲದೆ ಅಸ್ತ್ರ ಪ್ರದರ್ಶನ ಮಾಡುವುದು ಕಾನೂನಾತ್ಮಕ ಅಪರಾಧವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ರಜತ್ ಮತ್ತು ವಿನಯ್ ವಿರುದ್ಧ IPC ಸೆಕ್ಷನ್ 144 ಮತ್ತು 188ರಡಿಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.
ರಜತ್ ಮತ್ತು ವಿನಯ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಈ ಪ್ರಕರಣದ ಬಗ್ಗೆ ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಪೊಲೀಸರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.





