ರೀಲ್ಸ್ ಮಾಡುವಾಗ ಲಾಂಗ್ ಪ್ರದರ್ಶನ: ಬಿಗ್ ಬಾಸ್ ಸ್ಪರ್ಧಿಗಳಾದ ರಜತ್, ವಿನಯ್ ಪೊಲೀಸರ ವಶಕ್ಕೆ

Untitled design 2025 03 24t175604.863

ಬಿಗ್‌ಬಾಸ್‌ ಸ್ಪರ್ಧಿಗಳಾದ ವಿನಯ್‌ಗೌಡ ಹಾಗೂ ರಜತ್‌ ಕಿಶನ್‌ ಅವರಿಗೆ ಸಂಕಷ್ಟ ಎದುರಾಗಿದೆ. ಇವರಿಬ್ಬರು ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ್ದಕ್ಕೆ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಬಿಗ್ ಬಾಸ್’ ಕಾರ್ಯಕ್ರಮದಿಂದ ಖ್ಯಾತಿ ಪಡೆದ ರಜತ್ ಮತ್ತು ವಿನಯ್, ರೀಲ್ಸ್ ಮಾಡಲು ಲಾಂಗ್ ಪ್ರದರ್ಶನ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು. ನಂತರ ಇಬ್ಬರು,  ನಾಪತ್ತೆಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ಪೊಲೀಸರ ಬಲೆ ಬೀಸಿ, ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಮಾಚೋಮ್ಯಾನ್ ದರ್ಶನ್ ಅವರ ಅಭಿಮಾನಿಗಳಾದ ಈ ಇಬ್ಬರು ನಟರು, ತಮ್ಮ ಪ್ರೀತಿಯ ನಟನ ಚಿತ್ರಗಳ ಟೈಟಲ್ಸ್ ಅನ್ನು ತಮ್ಮ ಶರ್ಟ್ ಮತ್ತು ಪ್ಯಾಂಟ್ ಮೇಲೆ ಬರೆಸಿಕೊಂಡಿದ್ದರು. ‘ಡಿ ಬಾಸ್’ ಎಂಬ ಶಬ್ದದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದ ನಟ ರಜತ್ ಎಲ್ಲರ ಗಮನ ಸೆಳೆದಿದ್ದರು. ಆದರೆ, ಈ ರೀತಿ ಕಾನೂನು ಬಾಹಿರವಾಗಿ ಅಸ್ತ್ರ ಪ್ರದರ್ಶನ ಮಾಡುವ ಮೂಲಕ ಸಮಸ್ಯೆ ತಂದಿಟ್ಟುಕೊಂಡಿದ್ದಾರೆ.

ಕರ್ನಾಟಕದಲ್ಲಿ ಎಚ್ಛೆಯಿಲ್ಲದೆ ಅಸ್ತ್ರ ಪ್ರದರ್ಶನ ಮಾಡುವುದು ಕಾನೂನಾತ್ಮಕ ಅಪರಾಧವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ರಜತ್ ಮತ್ತು ವಿನಯ್ ವಿರುದ್ಧ IPC ಸೆಕ್ಷನ್ 144 ಮತ್ತು 188ರಡಿಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.

ರಜತ್ ಮತ್ತು ವಿನಯ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಈ ಪ್ರಕರಣದ ಬಗ್ಗೆ ಗಂಭೀರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಪೊಲೀಸರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Exit mobile version