ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಜೀವನದಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದೆ. ಮದುವೆ ಇಲ್ಲ ಆದ್ರೂ ತಾಯಿತನದ ಸೌಭಾಗ್ಯ ಪಡೆದ ಈ ಸ್ಟ್ರಾಂಗ್ ವುಮನ್, ಈಗ ತಮ್ಮ ಮುದ್ದು ಮಗಳಿಗೆ ಅದ್ಧೂರಿ ನಾಮಕರಣ ಮಾಡಿಸಿ ಸಂಭ್ರಮಿಸಿದ್ದಾರೆ. ಕ್ಯೂಟ್ ಬೇಬಿಗೆ ಇಟ್ಟಿರುವ ಹೆಸರು ಏನು ಗೊತ್ತಾ? ಈ ಸ್ಟೋರಿ ಕ್ರವಾಳ ಸೆಲೆಬ್ರೇಷನ್ ಅಲ್ಲ ಇದು ಒಬ್ಬ ಮಹಿಳೆಯ ಧೈರ್ಯ, ಸ್ವಾಭಿಮಾನ ಮತ್ತು ತಾಯಿತನದ ಎಮೋಶನಲ್ ಜರ್ನಿ.
- ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಶಾಸ್ತ್ರ..!
- ಮಗಳಿಗೆ ಅಜ್ಜಿಯ ಹೆಸರು…ರುಕ್ಮಿಣಿ ಎಂದು ನಾಮಕರಣ
- ಸಿಂಗಲ್ ಮದರ್ ಭಾವನಾ… ಶಕ್ತಿಯ ಪ್ರತಿರೂಪ..!
- ಐವಿಎಫ್ ತಾಯಿತನ ಗೆಲುವು…ಭಾವನಾ ಎಮೋಶನಲ್ ಲೈಫ್ ಟರ್ನ್
ಸ್ಯಾಂಡಲ್‌ವುಡ್‌ನಲ್ಲಿ ಒಮ್ಮೆ ಗ್ಲಾಮರ್, ಟ್ಯಾಲೆಂಟ್ ಮತ್ತು ಪವರ್‌ಫುಲ್ ಪಾತ್ರಗಳ ಮೂಲಕ ಸದ್ದು ಮಾಡಿದ ನಟಿ ಭಾವನಾ ರಾಮಣ್ಣ ಹಲವು ಹಿಟ್ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದವರು. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮದೇ ಗುರುತು ಮೂಡಿಸಿದ ಈ ನಟಿ ಈಗ ರಿಯಲ್ ಲೈಫ್‌ನಲ್ಲಿ ಇನ್ನೊಂದು ಸ್ಪೆಷಲ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಅದು ‘ತಾಯಿ’ ಎಂಬ ಪಾತ್ರ. ಹೌದು 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ತಾಯಿಯಾದ ಭಾವನಾ ರಾಮಣ್ಣ ಸಮಾಜದ ರೂಲ್ಸ್‌ಗಿಂತ ತಮ್ಮ ಹೃದಯದ ಮಾತು ಕೇಳಿಕೊಂಡವರು. ಮದುವೆ ಇಲ್ಲದೆ ಸಿಂಗಲ್ ಪೇರೆಂಟ್ ಆಗಿ ತಾಯಿತನವನ್ನು ಸ್ವೀಕರಿಸಿದ ಭಾವನಾ ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಕಳೆದ ವರ್ಷ ಆಗಸ್ಟ್ 20ರಂದು ಜನ್ಮ ನೀಡಿದ ತಮ್ಮ ಮುದ್ದು ಮಗಳಿಗೆ ಈಗ ಬದುಕಿನ ಸಂಪೂರ್ಣ ಪ್ರೀತಿಯನ್ನು ಸುರಿಸುತ್ತಿದ್ದಾರೆ.
ಆದರೆ ಭಾವನಾ ಈ ಪ್ರಯಾಣ ಸುಲಭವಾಗಿರಲಿಲ್ಲ ಡೆಲಿವರಿ ಸಮಯದಲ್ಲಿ ಜೋಡಿ ಮಕ್ಕಳಿಗೆ ಜನ್ಮ ನೀಡಿದ ಭಾವನಾ, ಅದರಲ್ಲಿ ಒಂದು ಮಗುವನ್ನು ಕಳೆದುಕೊಂಡ ನೋವನ್ನೂ ಅನುಭವಿಸಿದ್ದಾರೆ. ಆದ್ರೂ ಕುಗ್ಗದೆ ಮತ್ತೊಂದು ಮಗಳೊಂದಿಗೆ ಜೀವನವನ್ನು ಮತ್ತೆ ಕಟ್ಟಿಕೊಂಡಿದ್ದಾರೆ. ಈ ಸ್ಟ್ರಾಂಗ್ ನಿರ್ಧಾರವೇ ಭಾವನಾ ಅವರನ್ನು ಇನ್ನಷ್ಟು ಸ್ಪೆಷಲ್ ಮಾಡಿದೆ.
ಇದೀಗ ಏಳು ತಿಂಗಳ ನಂತರ ತಮ್ಮ ಮುದ್ದು ಮಗಳಿಗೆ ಭಾವನಾ ಅದ್ಧೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ. ಕುಟುಂಬದವರ, ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಈ ಸಮಾರಂಭದಲ್ಲಿ ಮಗು ತಾಯಿಯ ಮಡಿಲಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿತ್ತು. ಕಾರ್ಯಕ್ರಮಕ್ಕೆ ಬಂದ ಎಲ್ಲರೂ ಕ್ಯೂಟ್ ಬೇಬಿಯನ್ನು ಮುದ್ದಾಡುತ್ತಾ ಸಂಭ್ರಮಿಸಿದರು. ಈ ಕ್ಷಣಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈಗಿನ ಟ್ರೆಂಡ್‌ಗೆ ತಕ್ಕಂತೆ ಸ್ಟೈಲಿಷ್ ಹೆಸರು ಇಡುವುದನ್ನು ಬಿಟ್ಟು ಭಾವನಾ ತಮ್ಮ ಕುಟುಂಬದ ಪರಂಪರೆಯನ್ನು ಗೌರವಿಸಿ ಮುಂದುವರೆಸಲು ಮಗಳಿಗೆ ‘ರುಕ್ಮಿಣಿ’ ಎಂದು ಹೆಸರಿಟ್ಟಿದ್ದಾರೆ. ಅಜ್ಜಿಯ ನೆನಪಿಗಾಗಿ ಇಟ್ಟ ಈ ಹೆಸರು ಈಗ ಎಲ್ಲರ ಮನ ಗೆದ್ದಿದೆ. ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ಕಾಲ ತಮ್ಮ ಅಭಿನಯದಿಂದ ಕೊಡುಗೆ ನೀಡಿದ ಭಾವನಾ ಈಗ ಜೀವನದಲ್ಲೂ ಒಂದು ಸ್ಪೂರ್ತಿದಾಯಕ ಪಾತ್ರ ಮಾಡುತ್ತಿದ್ದಾರೆ. ಪರದೆಯ ಮೇಲೆ ನಟಿಯಾಗಿ ಗೆದ್ದವರು ಜೀವನದಲ್ಲೂ ತಾಯಿಯಾಗಿ ಗೆದ್ದಿದ್ದಾರೆ.
ಒಟ್ಟಿನಲ್ಲಿ ಭಾವನಾ ರಾಮಣ್ಣ ಲೈಫ್ ಸ್ಟೈಲ್, ಧೈರ್ಯ ಮದುವೆ ಇಲ್ಲದೇ ಸಮಾಜದ ಮಾತುಗಳನ್ನು ಮೀರಿ ತನ್ನ ಕನಸನ್ನು ನಿಜ ಮಾಡಿದ ಈ ಮಹಿಳೆ ಇಂದು ಅನೇಕ ಜನರಿಗೆ ರೋಲ್ ಮಾದಲ್ ಆಗಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
