ಕಿಚ್ಚ ಸುದೀಪ್-ಪ್ರಿಯಾ ಆದರ್ಶ ದಂಪತಿ..25 ವರ್ಷ ಸಹ ಜೀವನ

ರೇಷ್ಮೆ ಪಂಚೆಯಲ್ಲಿ ಕಿಚ್ಚ.. ವಧುವಿನಂತೆ ಕಂಗೊಳಿಸಿದ ಪ್ರಿಯಾ

Untitled design 2026 10 19T181030.758

ಆಲ್ ಇಂಡಿಯಾ ಕಟೌಟ್, ಆ್ಯಂಗ್ರಿ ಯಂಗ್ ಮ್ಯಾನ್, ಬಾದ್‌ಷಾ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿಯ ರೊಮ್ಯಾಂಟಿಕ್ ರಿಯಲ್ ಲೈಫ್ ಜರ್ನಿಗೆ ಈಗ ಸಿಲ್ವರ್ ಜ್ಯುಬಿಲಿ ಸಂಭ್ರಮ. ಮಲಯಾಳಿ ಚೆಲುವೆ ಪ್ರಿಯಾ ಕೈ ಹಿಡಿದ ಕಿಚ್ಚ.. ಆಕೆಯನ್ನ ಕರುನಾಡ ಸೊಸೆಯಾಗಿಸಿಕೊಂಡು ಬರೋಬ್ಬರಿ 25 ವರ್ಷಗಳಾಗಿದೆ. ತೆರೆಮೇಲೆ ವಿಲನ್‌ಗಳನ್ನು ಸದೆಬಡಿಯುವ ಕಿಚ್ಚ.. ಹೆಂಡ್ತಿ ಮುಂದೆ ಮಾತ್ರ ರೊಮ್ಯಾಂಟಿಕ್ ಹೀರೋ. ಈ ಸ್ಪೆಷಲ್ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಷನ್‌‌ನ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ…

ದೇವರನಾಡು ಕೇರಳದಿಂದ ಬಂದು, ಕನ್ನಡ ನಾಡಿನ ಮನೆಮಗಳಾಗಿ, ಸುದೀಪ್ ಅವರ ಏಳು-ಬೀಳುಗಳ ಪ್ರತಿ ಹಂತದಲ್ಲೂ ಬಂಡೆಯಂತೆ ಬೆನ್ನೆಲುಬಾಗಿ ನಿಂತವರು ಪತ್ನಿ ಪ್ರಿಯಾ ಸುದೀಪ್. ಸಿನಿಮಾರಂಗದ ಗ್ಲಾಮರ್ ಜಗತ್ತಿನಾಚೆಗೆ ಈ ಆದರ್ಶ ಜೋಡಿ ಈಗ ತಮ್ಮ ವಿವಾಹ ಜೀವನದ 25ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದ ಈ ಜೋಡಿ.. ಬೆಂಗಳೂರಿನ ತಮ್ಮ ಜೆಪಿ ನಗರದ ನಿವಾಸದಲ್ಲಿ ಸ್ಪೆಷಲ್ ಹೋಮ-ಹವನ ಹಾಗೂ ಪೂಜೆ ನೆರವೇರಿಸಿದ್ದಾರೆ.

ಸದಾ ಸೂಟು-ಬೂಟು ಧರಿಸಿ ಡ್ಯಾಶಿಂಗ್ ಆಗಿ ಕಾಣುವ ಕಿಚ್ಚ, ಈ ಸ್ಪೆಷಲ್ ದಿನದಂದು ಟ್ರೆಡಿಷನಲ್ ರೇಷ್ಮೆ ಪಂಚೆ ಧರಿಸಿ ವರನಂತೆ ಕಂಗೊಳಿಸಿದ್ದಾರೆ. ಮದುವೆ ಶಾಸ್ತ್ರದ ರೀತಿಯಲ್ಲಿ ದಂಪತಿ ಹಾರ ಬದಲಾಯಿಸಿಕೊಂಡು ಸಂಭ್ರಮಿಸಿದ್ದಾರೆ. ಇನ್ನು ಹಾರ ಬದಲಾಯಿಸುವ ಆ ಶುಭ ಗಳಿಗೆಯಲ್ಲಿ, ಪ್ರಿಯಾ ಅವರು “ನಾನು ಮೊದಲು ಹಾರ ಹಾಕಲ್ಲ, ನೀವೇ ಹಾಕಿ” ಎಂದು ಕಿಚ್ಚನನ್ನು ಸತಾಯಿಸುತ್ತಿದ್ದ ದೃಶ್ಯ ಸಿಕ್ಕಾಪಟ್ಟೆ ಕ್ಯೂಟ್ ಆಗಿದೆ. ಅಲ್ಲದೆ, ಹಾರ ಬದಲಿಸಿ ಸುದೀಪ್ ಅವರ ತೊಡೆಯ ಮೇಲೆ ಕೂತ್ಕೊಂಡು ಪ್ರಿಯಾ ಕ್ಯೂಟ್ ಎಕ್ಸ್‌‌ಪ್ರೆಷನ್ ಕೂಡ ಕೊಟ್ಟಿದ್ದಾರೆ. ಕೇವಲ ಫ್ಯಾಮಿಲಿ ಮೆಂಬರ್ಸ್ ಅಷ್ಟೇ ಅಲ್ಲದೆ, ಸುದೀಪ್ ಆಪ್ತ ಬಳಗ ಹಾಗೂ ಕ್ಲೋಸ್ ಟೆಕ್ನಿಷಿಯನ್ಸ್ ಕೂಡ ಭಾಗಿಯಾಗಿ ಈ ಆದರ್ಶ ದಂಪತಿಗೆ ಶುಭ ಹಾರೈಸಿದ್ದಾರೆ.

ಇನ್ನು ಕಳೆದ ವರ್ಷದ ಇದೇ ದಿನದಂದು, ಮದುವೆ ವಾರ್ಷಿಕೋತ್ಸವದ ಅಸಲಿ ಕಿಕ್ ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ‘ಬಿಗ್ ಬಾಸ್’ ವೇದಿಕೆ ಮೇಲೆ ಸಂಭ್ರಮಿಸಿದ್ರು. ಅಂದು ನ್ಯಾಷನಲ್ ಟೆಲಿವಿಷನ್ ಮೇಲೆ ಪ್ರಿಯಾ ಅವರೇ ತಮ್ಮ ಬದುಕಿನ ಅತಿ ದೊಡ್ಡ ಭಾಗ್ಯ ದೇವತೆ ಎಂದು ಓಪನ್ ಆಗಿ ಒಪ್ಪಿಕೊಂಡಿದ್ದ ಕಿಚ್ಚ, ಅತಿ ಕ್ಯೂಟ್ ಆದ ಸ್ಪೆಷಲ್ ಉಡುಗೊರೆಯನ್ನ ಕೊಟ್ಟು ಎಲ್ಲರನ್ನ ದಂಗಾಗಿಸಿದ್ದರು. ಆ ಬ್ಯೂಟಿಫುಲ್ ಮೂಮೆಂಟ್ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಹಚ್ಚಹಸರಾಗಿದ್ದು, ಸುದೀಪ್ ಅವರ ರೊಮ್ಯಾಂಟಿಕ್ ಆ್ಯಂಗಲ್‌‌‌ಗೆ ಫ್ಯಾನ್ಸ್ ಫಿದಾ ಆಗಿದ್ರು.

ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚುವ ಕಿಚ್ಚ, ತಮ್ಮ ರಿಯಲ್ ಲೈಫ್ ರಾಣಿಗೆ ಈ ಬಾರಿ ಏನು ದುಬಾರಿ ಗಿಫ್ಟ್ ನೀಡಿದ್ದಾರೆ ಅನ್ನೋದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ. ತೆರೆಮೇಲೆ ಕೋಟ್ಯಂತರ ಅಭಿಮಾನಿಗಳನ್ನ  ರಂಜಿಸುವ ಕಿಚ್ಚ, ರಿಯಲ್ ಲೈಫ್‌ನಲ್ಲಿ ಬೆಸ್ಟ್ ಹಸ್ಬೆಂಡ್ ಅಂತ ಈ 25 ವರ್ಷಗಳ ಸುದೀರ್ಘ ದಾಂಪತ್ಯ ಪ್ರೂವ್ ಮಾಡಿದೆ. ಚಿತ್ರ ಜಗತ್ತಿನ ಹತ್ತಾರು ಗಾಳಿಸುದ್ದಿ, ಗಾಸಿಪ್‌ಗಳನ್ನ ಗಾಳಿಗೆ ತೂರಿ, ಕಾಲು ಶತಮಾನಕಾಲ ಕೈ ಕೈ ಹಿಡಿದು ಸಾಗಿರುವ ಈ ಜೋಡಿಯ ಕೆಮಿಸ್ಟ್ರಿ ನಿಜಕ್ಕೂ ಚಂದನವನ ಹಾಗೂ ಕರುನಾಡಿಗೆ ರೋಲ್ ಮಾಡೆಲ್. ಈಗಷ್ಟೇ ಸಿಲ್ವರ್ ಜ್ಯುಬಿಲಿ ಹಬ್ಬ ಮುಗಿಸಿರುವ ಈ ಕಪಲ್, ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರ್ಯಾಂಡ್ ಆಗಿ ತಮ್ಮ ಲವ್ ಜರ್ನಿಯನ್ನ ಮುಂದುವರೆಸುವುದ್ರಲ್ಲಿ ಯಾವುದೇ ಡೌಟ್ ಇಲ್ಲ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

 

Exit mobile version