ಕಲ್ಪವೃಕ್ಷ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪಿ.ಮುರಳಿ ಕೃಷ್ಣ ಅರ್ಪಿಸುತ್ತಿರುವ ತನುಜ ಮುರಳಿ ಕೃಷ್ಣರವರ ನಿರ್ಮಾಣದ ” ಬ್ಯೂಟಿ ” ಸಿನಿಮಾದ ಒಂದು ಹಾಡನ್ನು ಮೇಲುಕೋಟೆಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುವ ಮೂಲಕ ಕುಂಬಳಕಾಯಿ ಹೊಡೆದ ಚಿತ್ರತಂಡ, ಈ ಸಿನಿಮಾದ ಚಿತ್ರೀಕರಣ ಮುಗಿಸಿದೆ.
ಬ್ಯೂಟಿ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ’31 days’ ಸಿನಿಮಾ ನಿರ್ದೇಶಿಸಿದ ರಾಜ ರವಿಕುಮಾರ್. ಈ ಸಿನಿಮಾಗೆ ವಿ. ಮನೋಹರ್ ಸಂಗೀತ ನೀಡುತ್ತಿದ್ದು, 5 ಹಾಡುಗಳನ್ನು ಅದ್ಬುತವಾಗಿ ಮಾಡಿದ್ದೂ ಹಾಡುಗಳು ಟ್ರೆಂಡಿಂಗ್‌ಗೆ ಬರಲಿವೆ ಎಂದು ಚಿತ್ರತಂಡ ಹೇಳುತ್ತಿದ್ದಾರೆ. ಇನ್ನು ಈ ಸಿನಿಮಾದ ಎಲ್ಲ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿರುವುದು ವಿಶೇಷ. “ಬ್ಯೂಟಿ ” ಸಿನಿಮಾದ ಚಿತ್ರೀಕರಣವನ್ನು ಕೊಲ್ಲೂರು, ಮೂಡಗಲ್, ಕುಮುಟಾ, ಬೆಂಗಳೂರು, ಮೇಲುಕೋಟೆ ಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಸಿನಿಮಾಗೆ ನಾಯಕ ರವಿಕಾಂತ್, ನಾಯಕಿಯಾಗಿ ಮಹಾಲಕ್ಷ್ಮಿ ನಟಿಸುತ್ತಿದ್ದು, ವೇಣಿ. ವಿ. ಮನೋಹರ್, ಚಿಲ್ಲರ್ ಮಂಜ, ಆನೇಕಲ್ ಮುನಿಯಪ್ಪ, ಅನ್ನಪೂರ್ಣ, ಅಂಜನಾ, ಮಂಜಯ್ಯ, ದುಷ್ಯಂತ್, ಮನ ಮೋಹನ್, ಶಿವಮೊಗ್ಗ ರಾಮಣ್ಣ, ವೈಭವ್ ನಾಗರಾಜ್, ಪ್ರಸಿದ್ಧ ಕನ್ನಡಿಗ, ಮಣಿ, ಪಾಂಡು, ಬೇಬಿ ಆಯುಸ್ಕಾ, ಮಾಸ್ಟರ್ ಆರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಈ ಸಿನಿಮಾಗೆ ಛಾಯಾಗ್ರಾಹಣ ವಿರೇಶ್ ಕುಮಾರ್, ಸಂಕಲನ ಮಧು ತುಂಬಕೆರೆ, ಮಹೇಶ್ ರಾಜ್ ನೃತ್ಯ ನಿರ್ದೇಶನ, ಸಾಹಸ ಬಂಡೆ ಚಂದ್ರು, ನಿರ್ಮಾಣ ನಿರ್ವಹಣೆ ಹೇಮಂತ್ ಕುಮಾರ್, ಕಾರ್ಯಕಾರಿ ನಿರ್ಮಾಣ ರಾಗ್ವಿರ್ ಸುರಾಗ್, ನಿರ್ದೇಶನ ತಂಡ ಸಿದ್ದಾರ್ಥ್ ಕಾರತಗಿ, ಸುಧರ್ಶನ್, ಚೈತನ್ಯ, ಸ್ಥಿರ ಚಿತ್ರಣ ಜಗನಾಥ್, ವರ್ಣಲಂಕಾರ ನಾಗೇಶ್, ವಸ್ತ್ರಲಂಕಾರ ಕುಮಾರ್, ಕೇಶಲಂಕಾರ ತಾರಾದೇವಿ,ವಿನ್ಯಾಸ ಗಾಡ್, ಪ್ರಚಾರ ಶ್ರೀಧರ್ ಮಾಡುತ್ತಿದ್ದಾರೆ.
ಬ್ಯೂಟಿ ಸಿನಿಮಾ ಒಂದು ಹೊಸ ಜಾನರ್ ಸಿನಿಮಾ. ಈ ಸಿನಿಮಾದಲ್ಲಿ ಸಸ್ಪೆನ್ಸ್, ಹಾರರ್, ಕಾಮಿಡಿ, ಆಕ್ಷನ್, ಕೌಟುಂಬಿಕ, ಲವ್ ಸ್ಟೋರಿ, ಎಲ್ಲ ವಿಷಯಗಳಿದ್ದು ಸಂಪೂರ್ಣವಾಗಿ ಎಲ್ಲ ವರ್ಗದ ಪ್ರೇಕ್ಷಕರು ಕುಟುಂಬ ಸಮೇತರಾಗಿ ನೋಡುವಂಥ ಸಿನಿಮಾ ಇದಾಗಿದೆ.
