ವಿನಯ್ ಪ್ರೇಮಾಯಣ..ಸೀನು-ಕುಸುಮ ‘ಗ್ರಾಮಾಯಣ’

ಹಳ್ಳಿ ಸೊಬಗಿನಲ್ಲಿ ಮೇಘಾ ಶೆಟ್ಟಿ ಜೊತೆ ವಿನಯ್ ಲವ್ವಿ ಡವ್ವಿ

Untitled design 2026 06 16T184329.793

ವಿನಯ್ ರಾಜ್‌ಕುಮಾರ್ ಗ್ರಾಮಾಯಣ ಚಿತ್ರದಿಂದ ಮತ್ತೊಂದು ಸಾಂಗ್ ಹೊರಬಿದ್ದಿದೆ. ಹಳ್ಳಿ ಸೊಗಡು, ಸೊಬಗಿನಲ್ಲಿ ಮೇಘಾ ಶೆಟ್ಟಿ ಹಾಗೂ ವಿನಯ್ ಪ್ರೇಮಾಯಣ ಜೋರಿದೆ. ಇಂಟರೆಸ್ಟಿಂಗ್ ಅಂದ್ರೆ ಇದು ಪ್ರತಿಯೊಬ್ಬ ಸೀನು, ಕುಸುಮ ಹೆಸರಿನವರಿಗೆ ಬೇಗ ಕನೆಕ್ಟ್ ಆಗಲಿದೆ. ಹಾಗಾದ್ರೆ ಸಾಂಗ್ ಹೇಗಿದೆ..? ವಿಶೇಷತೆ ಏನು ಅಂತೀರಾ..? ಇಲ್ಲಿದೆ ನೋಡಿ ಇದರ ಫುಲ್‌ ಡಿಟೇಲ್ಸ್‌..

ಗ್ರಾಮಾಯಣ.. ಇದು ಇದೇ ಜುಲೈ 3ಕ್ಕೆ ಬಿಡುಗಡೆಗೆ ಸಜ್ಜಾಗಿರೋ ಕನ್ನಡದ ಬಹು ದಿನಗಳ ಕಾಯುವಿಕೆಯ ಸಿನಿಮಾ. ಯೆಸ್.. ದೊಡ್ಮನೆ ಹುಡ್ಗ ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಜೋಡಿ ಮೋಡಿ ಮಾಡಲಿರೋ ಆ್ಯಕ್ಷನ್, ರೊಮ್ಯಾಂಟಿಕ್ ಡ್ರಾಮಾ. ಸಿನಿಮಾ ಅಂದುಕೊಂಡಂತೆ ಆಗಿದ್ದಿದ್ರೆ ಇಷ್ಟೊತ್ತಿಗಾಗ್ಲೇ ರಿಲೀಸ್ ಆಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಸಿಕ್ಕಾಪಟ್ಟೆ ಲೇಟ್ ಆದ್ರೂ, ಲೇಟೆಸ್ಟ್ ಆಗಿ ತೆರೆಗೆ ಬರೋ ಮುನ್ಸೂಚನೆ ನೀಡಿದೆ.

ದೇವನೂರು ಚಂದ್ರು ನಿರ್ದೇಶನದ ಈ ಸಿನಿಮಾಗೆ ಲಹರಿ ಫಿಲಂಸ್ ನಿರ್ಮಾಣ ಮಾಡಿದ್ದು, ಉಪೇಂದ್ರ ಅವರ ಯುಐ ಚಿತ್ರದ ಬಳಿಕ ಲಹರಿ ಸಂಸ್ಥೆ ಬತ್ತಳಿಕೆಯ ನಿರೀಕ್ಷಿತ ಸಿನಿಮಾ ಅನಿಸಿಕೊಂಡಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದು, ನಿಹಾಲ್ ಹಾಗೂ ಸಾಕ್ಷಿ ಕಂಠದಲ್ಲಿ ಸಖತ್ ಮೆಲೋಡಿಯಸ್ ಆಗಿ ಮೂಡಿಬಂದಿದೆ.

ಶತಶತಮಾನಗಳಿಂದ, ತಡ್ಕ ತಡ್ಕ, ಸೋಲ್ ಆಫ್ ರಾಮಾಯಣ ಹಾಗೂ ಬೆಂಕಿ ಸಾಂಗ್ಸ್ ಬಿಡುಗಡೆ ಆಗಿದ್ದವು. ಅವುಗಳ ಸಾಲಿಗೆ ಏನೇ ಹೇಳು ಕುಸುಮ ಸಾಂಗ್ ಸೇರಿಕೊಂಡಿದ್ದು, ಕಣ್ಣಿಗೆ ಹಿತ ಎನಿಸೋ, ಕಿವಿಯನ್ನ ತಂಪಾಗಿಸೋ ಪ್ರೇಮಗೀತೆ ಇದಾಗಿದೆ. ಇಡೀ ಸಿನಿಮಾ ಹಳ್ಳಿ ಬ್ಯಾಕ್‌ಡ್ರಾಪ್‌‌ನಲ್ಲೇ ನಡೆಯೋ ಕಥಾನಕ ಆಗಿರೋದ್ರಿಂದ ಈ ಹಾಡನ್ನ ಕೂಡ ಚಿತ್ರದ ಕಥೆಗೆ ಪೂರಕವಾಗಿ ಗ್ರಾಮೀಣ ಸೊಗಡು, ಸೊಬಗಿನಲ್ಲೇ ಚಿತ್ರಿಸಿರೋದು ವಿಶೇಷ.

ವಿನಯ್ ರಾಜ್‌‌ಕುಮಾರ್- ಮೇಘಾ ಶೆಟ್ಟಿ ಜೋಡಿ ಈಗಾಗ್ಲೇ ಬೆಂಕಿ ಸಾಂಗ್‌ಗೆ ಮೈ ನವಿರೇಳಿಸುವ ರೇಂಜ್‌ಗೆ ಕುಣಿದು, ಕುಪ್ಪಳಿಸಿದ್ರು. ಆ ಹಾಡು ಸಿಕ್ಕಾಪಟ್ಟೆ ವೀವ್ಸ್ ಮೂಲಕ ಸಾಕಷ್ಟು ರೀಲ್ಸ್‌ಗೂ ಕಾರಣೀಭೂತವಾಗಿತ್ತು. ಇದೀಗ ಈ ಹಾಡು ಕೂಡ ಮೆಲೋಡಿ ಪ್ರಿಯರಿಗೆ ಮಸ್ತ್ ಕಿಕ್ ಕೊಡ್ತಿದೆ. ಜುಲೈ ಮೊದಲ ವಾರದಲ್ಲಿ ಸಿನಿಮಾ ಅದೃಷ್ಠಪರೀಕ್ಷೆಗೆ ಪ್ರೇಕ್ಷಕರ ಮುಂದೆ ಬರ್ತಿದ್ದು, ಎಷ್ಟು ಕೋಟಿ ದೋಚುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version