ಚೊಚ್ಚಲ ಚಿತ್ರದಲ್ಲೇ ಡಿಬಾಸ್ ದರ್ಶನ್ ಜೊತೆ ಮಿಂಚಿದ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಪುತ್ರಿ ಆರಾಧನಾ ರಾಮ್, ಅದಾದ ಬಳಿಕ ನಾಪತ್ತೆ ಆಗಿಬಿಟ್ಟಿದ್ದರು. ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಆಕೆಗೆ ಅದೃಷ್ಠ ಲಕ್ಷ್ಮೀ ಒಲಿದಿದ್ದಾಳೆ. ನೆಕ್ಸ್ಟ್ ಲೆವೆಲ್ ಪ್ರಾಜೆಕ್ಟ್ ಜೊತೆ ನಯಾ ಖಬರ್ ಹೊತ್ತು ಬಂದಿದ್ದಾರೆ. ಆ ಕುರಿತ ಇನ್‌ಸೈಡ್ ಸ್ಟೋರಿ ಇಲ್ಲಿದೆ.
- ಕಾಟೇರ ಕ್ವೀನ್‌ಗೆ ‘ನೆಕ್ಸ್ಟ್ ಲೆವೆಲ್’ ಅದೃಷ್ಠ.. ಉಪ್ಪಿಗೆ ಜೋಡಿ
- ಒಂದೂವರೆ ವರ್ಷದ ಬಳಿಕ 2ನೇ ಪ್ರಾಜೆಕ್ಟ್‌ಗೆ ಸಿಕ್ತು ಆಫರ್..!
- ರಚ್ಚು ಹಾದಿಯಲ್ಲಿ ಆರಾಧನಾ.. ಬಿಗ್ ಸ್ಟಾರ್ಸ್ ಬಿಗ್ ವೆಂಚರ್ಸ್
- ನವೆಂಬರ್‌ನಿಂದ ಉಪೇಂದ್ರ ಜೊತೆ ನ್ಯೂ ಇನ್ನಿಂಗ್ಸ್ ಕಿಕ್‌ಸ್ಟಾರ್ಟ್
ಕಾಟೇರ… 2023ರ ಡಿಸೆಂಬರ್ 29ರಂದು ತೆರೆಕಂಡ ಸಿನಿಮಾ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾಗಿ ಆರಾಧನಾ ರಾಮ್ ಮೋಡಿ ಮಾಡಿದ್ರು. ಯೆಸ್.. ಇದು ಆಕೆಯ ಚೊಚ್ಚಲ ಸಿನಿಮಾ ಕೂಡ ಹೌದು. ಮಾಲಾಶ್ರೀ-ರಾಮು ಜೊತೆಗಿನ ಬಾಂಧವ್ಯ, ಸ್ನೇಹಕ್ಕಾಗಿ ಖುದ್ದು ರಾಕ್‌ಲೈನ್ ನಟಿ ಆರಾಧನಾರನ್ನ ಇಂಟ್ರಡ್ಯೂಸ್ ಮಾಡಿದ್ರು.
ಮೊದಲ ಚಿತ್ರದಲ್ಲೇ ದೊಡ್ಡ ಸೂಪರ್ ಸ್ಟಾರ್ ಜೊತೆ ಬಿಗ್ ಬ್ಯಾನರ್‌ನೊಂದಿಗೆ ತನಗೆ ಸಿಕ್ಕ ಆ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು ಆರಾಧನಾ ರಾಮ್. ನೋಡಿದ ಜನ ಕೂಡ ಪಸಂದಾಗವ್ಳೆ ಅಂತ ಆಕೆಯ ಅಂದ ಚೆಂದದ ಜೊತೆ ನಟನೆಯನ್ನ ಕೂಡ ಕೊಂಡಾಡಿದ್ರು. ನಟನೆ ಅನ್ನೋದು ಬ್ಲಡ್‌ನಲ್ಲೇ ಇದ್ದ ಕಾರಣ, ಆರಾಧನಾ ಫುಲ್ ಮಾರ್ಕ್ಸ್ ಸ್ಕೋರ್ ಮಾಡಿದ್ರು. ಅದರಲ್ಲೂ ಸಾಯುವಂತಹ ಕ್ಯಾರೆಕ್ಟರ್ ಮಾಡಿ, ಎಲ್ಲರ ಹುಬ್ಬೇರಿಸಿದ್ರು.
ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿ, ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ಬೃಹತ್ ಮೊತ್ತ ಗಳಿಸಿ, ದಾಖಲೆ ಬರೆದಿತ್ತು. ಆದ್ರೆ ಆ ಚಿತ್ರದ ಬಳಿಕ ಸುಮಾರು ಒಂದೂವರೆ ವರ್ಷದ ಕಾಲ ಆರಾಧನಾ ಅವಕಾಶಗಳಿಲ್ಲದೆ ಕೈಕಟ್ಟಿ ಕೂತಿದ್ದಿದ್ದು ದುರಂತ. ಯೆಸ್.. ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದ್ರೆ ಆ ಚಿತ್ರದ ಕಲಾವಿದರು ಮತ್ತಷ್ಟು ಬ್ಯುಸಿ ಆಗಬೇಕಿತ್ತು. ಆದ್ರೆ ಆರಾಧನಾ ವಿಷಯದಲ್ಲಿ ಅದು ಉಲ್ಟಾ ಆಯ್ತು.
ಇದೀಗ ಮತ್ತೆ ಆಕೆಗೆ ಅದೃಷ್ಠ ಲಕ್ಷ್ಮೀ ಒಲಿದಿದ್ದಾಳೆ. ವರಮಹಾಲಕ್ಷ್ಮೀ ವಿಶೇಷ ಹಬ್ಬಕ್ಕೂ ಮೊದಲೇ ಮತ್ತೊಂದು ಬಿಗ್ ಬ್ಯಾನರ್‌ನ ಬಿಗ್ ಸ್ಟಾರ್ ಮೂವಿಗೆ ಆರಾಧನಾ ಆಯ್ಕೆ ಆಗಿದ್ದಾರೆ. ಅದೇ ನೆಕ್ಸ್ಟ್ ಲೆವೆಲ್. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ನೆಕ್ಸ್ಟ್ ಲೆವೆಲ್ ಅನ್ನೋ ಸಿನಿಮಾ ಇತ್ತೀಚೆಗೆ ಅನೌನ್ಸ್ ಆಗಿತ್ತು. ಅದಕ್ಕೀಗ ನಾಯಕನಟಿ ಕೂಡ ಫಿಕ್ಸ್ ಆಗಿದ್ದು, ಉಪ್ಪಿಯ ಜೊತೆ ಸ್ಕ್ರೀನ್ ಶೇರ್ ಮಾಡುವ ಅದೃಷ್ಠ ಆರಾಧನಾ ಪಾಲಾಗಿದೆ.
ಅರವಿಂದ್ ಕೌಶಿಕ್ ನಿರ್ದೇಶನದ ನೆಕ್ಸ್ಟ್ ಲೆವೆಲ್ ಸಿನಿಮಾಗೆ ತರುಣ್ ಶಿವಪ್ಪ ಬಂಡವಾಳ ಹೂಡುತ್ತಿದ್ದು, ಸಿನಿಮಾ ಇದೇ ನವೆಂಬರ್‌ನಿಂದ ಚಿತ್ರೀಕರಣ ಶುಭಾರಂಭ ಮಾಡ್ತಿದೆ. ಮುಂಬೈನಿಂದ ಆರಾಧಾನಾಗೆ ಮೇಕಪ್ ಆರ್ಟಿಸ್ಟ್ ಹಾಗೂ ಡಿಸೈನರ್ ಆಗಮಿಸಲಿದ್ದು, ಈ ಚಿತ್ರದ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತಯಾರಿ ನಡೆಸಿಕೊಳ್ತಿದ್ದಾರಂತೆ. ಇನ್ನು ಮಗಳಿಗೆ ಒಲಿದ ಈ ಅವಕಾಶಕ್ಕಾಗಿ ಮಾಲಾಶ್ರೀ ದಿಲ್‌ಖುಷ್ ಆಗಿದ್ದು, ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ ಸಿನಿಮಾ.
ಉಪೇಂದ್ರ ನಟನೆಯ ಮಲ್ಟಿ ಸ್ಟಾರರ್ ಕೂಲಿ ರಿಲೀಸ್ ಆಗ್ತಿದ್ದು, 45 ಚಿತ್ರ ಬಿಡುಗಡೆಗೆ ಸಜ್ಜಾಗ್ತಿದೆ. ಸೂರಪ್ಪ ಬಾಬು ಜೊತೆಗಿನ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಇಷ್ಟು ಬ್ಯುಸಿ ಇರೋ ಉಪ್ಪಿ, ಇದೇ ವರ್ಷಾಂತ್ಯಕ್ಕೆ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕಾಗಿ ಶೂಟಿಂಗ್ ಅಡ್ಡಾಗೆ ಇಳಿಯುತ್ತಿರೋದು ಇಂಟರೆಸ್ಟಿಂಗ್.
ಇನ್ನು ಆರಾಧನಾ ರಾಮ್ ನಟಿ ರಚಿತಾ ರಾಮ್ ರೀತಿ ಬಿಗ್ ಸ್ಟಾರ್ಸ್, ಬಿಗ್ ಬ್ಯಾನರ್ ಮೂವಿಗಳಿಂದ ಕರಿಯರ್‌ನ ಕಟ್ಟಿಕೊಳ್ತಿದ್ದಾರೆ. ರಚಿತಾ ಕೂಡ ಬುಲ್ ಬುಲ್ ಬಳಿಕ ಆಲ್ಮೋಸ್ಟ್ ಆಲ್ ಎಲ್ಲಾ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡ್ರು. ಬಹುತೇಕ ಎಲ್ಲವೂ ಹಿಟ್. ಅದೇ ಹಾದಿಯಲ್ಲಿ ಆರಾಧನಾ ಹೆಜ್ಜೆ ಇಡ್ತಿದ್ದು, ದರ್ಶನ್ ಬಳಿಕ ಉಪೇಂದ್ರ ಅವ್ರಿಗೆ ನಾಯಕಿಯಾಗ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್