ಸ್ಯಾಂಡಲ್‌ವುಡ್ ಅಂಗಳದಲ್ಲಿ ನಿರ್ಮಾಪಕರೊಬ್ಬರಿಂದ ಶ್ರೀರಾಮನ ಭಂಟ ಹನುಮಂತನಿಗೆ ಅಪಮಾನ ಆಗಿದೆ. ಆದ್ರೂ ಸಹ ಧಾರ್ಮಿಕ ಸಂಘಟನೆಗಳು ತುಟಿಕ್ ಪಿಟಿಕ್ ಅಂತಿಲ್ಲ. ಅಷ್ಟೇ ಯಾಕೆ..? ಧ್ರುವ ಸರ್ಜಾಗೆ ಆಡಬಾರದ ಮಾತುಗಳನ್ನ ಆಡಿ, ಅಣಕಿಸಿ, ಅವಮಾನಿಸಿದ್ದಾರೆ. ಅತ್ತ ಧ್ರುವ ಸರ್ಜಾ ಕೂಡ ಸೈಲೆಂಟ್. ಎಲುಬಿಲ್ಲದ ನಾಲಿಗೆಗೆ ಲಂಗು, ಲಗಾಮು ಹಾಕೋರು ಯಾರು..? ಈ ಸ್ಟೋರಿ ನೋಡಿ..
- ಹನುಮನಿಗೆ ಅಪಮಾನ.. ಧಾರ್ಮಿಕ ಸಂಘಟನೆಗಳು ಸೈಲೆಂಟ್
- ಆಂಜನೇಯನ ಮೂತಿ ಅಣಕಿಸಿದವ್ರ ಮೇಲೆ ಬೀಳುತ್ತಾ ಕೇಸ್..?
- ದಪ್ಪ, ಸಣ್ಣ ಆಗೋಕೆ ಇಂಜೆಕ್ಷನ್ ತಗೋತಾರಂತೆ ಧ್ರುವ..!!
- ಮಗುಗೆ 100 ಕೋಟಿ ಎಲ್ಲಿ ಗೊತ್ತು..? ಸಲ್ಲುನೇ ಕೇಳೋರಿಲ್ಲ
ಶಕ್ತಿ ಪ್ರಸಾದ್ ಕುಟುಂಬದ ಕುಡಿ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸೋದರಳಿಯ.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾಡಿರೋದು ಐದಾರು ಮೂವಿಗಳೇ ಆದ್ರೂ, ಮಾಸ್‌ಪ್ರಿಯರ ದಿಲ್ ದೋಚಿದ್ದಾರೆ. ತನ್ನ ನಟನಾ ಗತ್ತು, ಡೈಲಾಗ್ ಡೆಲಿವರಿ ಗಮ್ಮತ್ತಿನಿಂದ ಅಪಾರ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಕೆಡಿ ಸಿನಿಮಾ ರಿಲೀಸ್‌ಗೆ ಸಜ್ಜಾಗ್ತಿದೆ. ಸೀತಾ ಪಯಣ ಕೂಡ ರಿಲೀಸ್ ಅಂಚಿನಲ್ಲಿದೆ. ಸದ್ಯ ಕ್ರಿಮಿನಲ್ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ.
ಧ್ರುವ ಸರ್ಜಾ ಬಹುದೊಡ್ಡ ಹನುಮ ಭಕ್ತ ಅನ್ನೋದು ಎಲ್ರಿಗೂ ಗೊತ್ತೇಯಿದೆ. ಆತ ಆಂಜನೇಯನ ಬಹುದೊಡ್ಡ ಆರಾಧಕ ಕೂಡ ಹೌದು. ಆದ್ರೆ ಕಾಟನ್‌ಪೇಟೆ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಇತ್ತೀಚೆಗೆ ತಮ್ಮ ಚಿತ್ರದ ಸುದ್ದಿಗೋಷ್ಠಿಯಲ್ಲಿ ಧ್ರುವ ಸರ್ಜಾರನ್ನ ಬೈಯ್ಯುವ ಭರದಲ್ಲಿ ಶ್ರೀರಾಮನ ಭಂಟ ಹನುಮಂತನನ್ನೇ ಅಣಕಿಸಿದ್ದಾರೆ. ಧ್ರುವ ಸರ್ಜಾ ನೋಡೋಕೆ ಆಂಜನೇಯನ ರೀತಿ ಇದ್ದಾರೆ ಎಂದಿರೋ ಕನಕಪುರ ಶ್ರೀನಿವಾಸ್, ಆ ನಂತ್ರ ಹನುಮಂತನ ಮೂತಿಯನ್ನ ವ್ಯಂಗ್ಯವಾಗಿ ತೋರಿಸೋ ಮೂಲಕ ಅಪಮಾನ ಮಾಡಿದ್ದಾರೆ.
ಧಾರ್ಮಿಕ ಸಂಘಟನೆಗಳು ಈ ಬಗ್ಗೆ ತುಟಿಕ್ ಪಿಟಿಕ್ ಅಂತಿಲ್ಲ. ಶ್ರೀರಾಮ ಸೇನೆ ಕೂಡ ಸದ್ದಿಲ್ಲದಂತಿದೆ. ಇನ್ನೂ ಧ್ರುವ ಸರ್ಜಾಗೆ ನಾನಾ ಮಾತುಗಳಿಂದ ನಿಂದಿಸಿರೋ ಶ್ರೀನಿವಾಸ್ ಮೇಲೆ ಆ್ಯಕ್ಷನ್ ಪ್ರಿನ್ಸ್ ಕೂಡ ಏನೂ ಕ್ರಮ ಕೈಗೊಂಡಿಲ್ಲ.
ಸಣ್ಣ ಆಗೋಕೆ ಇಂಜೆಕ್ಷನ್.. ದಪ್ಪ ಆಗೋಕೆ ಇಂಜೆಕ್ಷನ್ ತಗೋತಾರಂತೆ ಧ್ರುವ. ನೂರು ಕೋಟಿ ಅಂತೆ ನೂರು ಕೋಟಿ. 5 ವರ್ಷ ಆಯ್ತು.. 120 ಕೋಟಿ ಆಗಿದೆಯಂತೆ ಕೆಡಿ ಸಿನಿಮಾಗೆ. ಪಾಪ ಆ ಮಗುಗೆ ಎಲ್ಲಿ ಗೊತ್ತು 100 ಕೋಟಿ..? ಆಂಜನೇಯ ಇದ್ದಂಗವ್ನೆ. ನಮ್ಮ ಕನ್ನಡಕ್ಕೆ ಒಳ್ಳೆಯ ಹೀರೋ. ಯಾಕಂದ್ರೆ ಅವ್ರ ಮಾವ ಅರ್ಜುನ್ ಸರ್ಜಾ, ತಾತನ ಹೆಸರಿದೆ. ಆದ್ರೆ ಬಾಂಬೆಗೆ ಹೀರೋನಾ..? ಬಾಂಬೆಯಲ್ಲಿ ಎಂತೆಂಥವ್ರು ಇದ್ದಾರೆ ರೀ..? ಅಂತಹ ಸಲ್ಮಾನ್ ಖಾನ್‌ಗೇನೇ ಯಾರೂ ಕೇಳ್ತಿಲ್ಲ. ಇವ್ರನ್ನ ಎಲ್ಲಿಂದ ಕೇಳ್ತಾರೆ..? ಎಲ್ರು ಪ್ಯಾನ್ ಇಂಡಿಯಾ ಅಂತಾರೆ ಅಂತೆಲ್ಲಾ ಧ್ರುವ ಸರ್ಜಾರನ್ನ ಛೇಡಿಸಿದ್ದಾರೆ ಕನಕಪುರ ಶ್ರೀನಿವಾಸ್.
ಮೊಬೈಲ್ ನೆಟ್ವರ್ಕ್ ಕೂಡ ಸಿಗದೇ ಇರೋ ಅಂತಹ ಶಿರಸಿ, ಸಿದ್ಧಾಪುರ, ಯಲ್ಲಾಪುರದ ನಿರ್ಜನ ಪ್ರದೇಶಗಳಲ್ಲಿ ಕ್ರಿಮಿನಲ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ ಧ್ರುವ. ಬಹುಶಃ ಈ ವಿಡಿಯೋಗಳ ಬಗ್ಗೆ, ಕನಕಪುರ ಶ್ರೀನಿವಾಸ್ ಅವ್ರ ಮಾತುಗಳು ಅವರ ಅರಿವಿಗೂ ಬಂದಿವೆ. ಈ ವಾರದಲ್ಲಿ ಹೀಗೆಲ್ಲಾ ನಿಂದಿಸಿರೋ ನಿರ್ಮಾಪಕರ ವಿರುದ್ಧ ಧ್ರುವ ಎಫ್‌ಐಆರ್ ದಾಖಲಿಸ್ತಾರೆ ಅನ್ನೋದು ಸದ್ಯದ ಮಾಹಿತಿ. ಎಲುಬಿಲ್ಲದ ನಾಲಿಗೆ ಏನು ಮಾತಾಡಿದ್ರೂ ಸುಮ್ನೆ ಇದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದು ಇರಲು ಸಾಧ್ಯವಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





