• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇಂಡಿಯನ್ ಟಾಪ್ ಸೆಲೆಬ್ರಿಟಿಗಳ ತಲೆಗೇ ಕೈ ಹಾಕೋ ಸ್ಟೈಲ್ ಮಾಸ್ಟರ್ ಆಲಿಮ್ ಹಕೀಮ್

OMG.. ಒಂದು ಹೇರ್ ಕಟ್ ಬೆಲೆ 1 ಲಕ್ಷ- 5 ಲಕ್ಷ ಫಿಕ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 12, 2026 - 4:29 pm
in Flash News, ಸಿನಿಮಾ
0 0
0
Untitled design 2026 04 12T162308.578

ಸಿನಿಮಾ ಅಂದ್ರೇನೇ ಕಲರ್‌ಫುಲ್ ದುನಿಯಾ. ಅದನ್ನ ಮೀರಿಸೋ ರೇಂಜ್‌ಗೆ ಬೆಳೆದಿರೋದು ಕ್ರಿಕೆಟ್ ಲೋಕ. ಇಲ್ಲಿ ಈ ಫಿಲ್ಮ್ ಹಾಗೂ ಕ್ರಿಕೆಟ್ ಸ್ಟಾರ್‌‌‌ಗಳ ಅಂದ ಚೆಂದ ಹೆಚ್ಚಿಸೋದು ಎಲಿಮೆಂಟ್ಸ್ ಅಂದ್ರೆ ಲುಕ್ಸ್, ಕಾಸ್ಟ್ಯೂಮ್ಸ್ ಹಾಗೂ ಕಾರ್‌‌ಗಳು. ಆದ್ರೀಗ ಇಂದಿನ ಎಪಿಸೋಡ್‌‌ನಲ್ಲಿ ನಾವು ನಿಮಗೆ ಇಂಡಿಯಾದ ಟಾಪ್ ಸೆಲೆಬ್ರಿಟೀಸ್ ಹಾಗೂ ಕ್ರಿಕೆಟರ್ಸ್ ಲುಕ್ಸ್ ಹಿಂದಿನ ಮಾಸ್ಟರ್ ಮೈಂಡ್‌ನ ಪರಿಚಯಿಸ್ತೀವಿ. ಆಲ್ಮೋಸ್ಟ್ ಆಲ್ ಎಲ್ಲಾ ಬ್ಲಾಕ್‌‌ಬಸ್ಟರ್ ಹಿಟ್ ಮೂವೀಸ್ ಹಿಂದೆ ಇವ್ರ ಕೈಚಳಕ ಇದ್ದೇ ಇದೆ. ಇಷ್ಟಕ್ಕೂ ಆತ ಯಾರು..? ಐದು ಲಕ್ಷ ತನಕ ಒಂದು ಹೇರ್ ಕಟ್‌ಗೆ ಚಾರ್ಜ್ ಮಾಡೋದಾದ್ರೂ ಏಕೆ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ.

  • ಇಂಡಿಯನ್ ಟಾಪ್ ಸೆಲೆಬ್ಸ್ ಈತನಿಗೆ ತಲೆ ತಗ್ಗಿಸ್ತಾರೆ..!
  • ಎಲ್ಲಾ ಸೆಲೆಬ್ರಿಟಿಗಳ ತಲೆಗೇ ಕೈ ಹಾಕೋ ಸ್ಟೈಲ್ ಮಾಸ್ಟರ್
  • OMG.. ಒಂದು ಹೇರ್ ಕಟ್ ಬೆಲೆ 1 ಲಕ್ಷ- 5 ಲಕ್ಷ ಫಿಕ್ಸ್
  • ಶಾರೂಖ್, ರಣ್ವೀರ್, ರಣ್ಬೀರ್, ವಿಕ್ಕಿ, ಅಲ್ಲು ಮ್ಯಾಜಿಕ್!
  • ಕೊಹ್ಲಿ, ಧೋನಿಯಿಂದ ಅಂಬಾನಿಗೂ ಇವ್ರೇ ಕೇಶ ಗುರು

ಯೆಸ್.. ಸಾಮಾನ್ಯವಾಗಿ ಸ್ಟಾರ್‌‌ಗಳು ಯಾರಿಗೂ ತಲೆ ತಗ್ಗಿಸಲ್ಲ. ಯಾಕಂದ್ರೆ ಅವ್ರು ಒಂಥರಾ ರೋಲ್ ಮಾಡೆಲ್‌‌ಗಳು. ದುಡ್ಡು, ಆಸ್ತಿ, ಅಂತಸ್ತುಗಳ ಜೊತೆಗೆ ಬಹುದೊಡ್ಡ ನೇಮು, ಫೇಮು. ಶಿಳ್ಳೆ, ಚಪ್ಪಾಳೆ ಹೊಡೆದು ಜೈಕಾರ ಹಾಕೋಕೆ ಅಪಾರ ಅಭಿಮಾನಿ ಬಳಗವೂ ಇದೆ. ಹಾಗಾಗಿ ಆ ಸ್ಟಾರ್‌ಡಮ್‌ನ ಅವರುಗಳು ಸಖತ್ ಎಂಜಾಯ್ ಮಾಡ್ತಾರೆ. ಕಲರ್‌ಫುಲ್ ಜೊತೆ ಲ್ಯಾವಿಶ್ ಲೈಫ್‌ನ ಲೀಡ್ ಮಾಡ್ತಾರೆ. ಅದಕ್ಕೆ ಸಾಕಷ್ಟು ಮಂದಿ ಇಂಡಿಯನ್ ಸೂಪರ್ ಸ್ಟಾರ್ಸ್ ಪ್ರತ್ಯಕ್ಷ ಸಾಕ್ಷಿಗಳು.

RelatedPosts

ಕಾಂಗ್ರೆಸ್ ಮುಖಂಡನ ಹ*ತ್ಯೆ ಕೇಸ್: 8 ಆರೋಪಿಗಳ ಬಂಧನ

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಎರಡು ಮದ್ವೆಯಾಗಿದ್ದ ಗಾಯಕಿ ಆಶಾ ಭೋಸ್ಲೆ ಮ್ಯಾರೇಜ್‌ ಕಹಾನಿ

‘ಕಿಂಗ್’ ಚಿತ್ರದ ಸ್ಟೈಲಿಶ್ ಲುಕ್ ಹಿಂದಿನ ಮಾಸ್ಟರ್ ಆಲಿಮ್ ಹಕೀಮ್

ADVERTISEMENT
ADVERTISEMENT

ಹೀಗೆ ಯಾರಿಗೂ ಎಂದೂ ತಲೆ ತಗ್ಗಿಸದ ಸ್ಟಾರ್ಸ್ ಮಾತ್ರ ಆಲಿಮ್ ಹಕೀಮ್ ಅನ್ನೋ ಒಬ್ಬೇ ಒಬ್ಬ ವ್ಯಕ್ತಿ ಮುಂದೆ ತಲೆ ತಗ್ಗಿಸ್ತಾರೆ. ತಗ್ಗಿಸಲೇಬೇಕು ಕೂಡ. ಯಾಕಂದ್ರೆ ಅವರುಗಳ ಲುಕ್ಸ್ ಹಿಂದಿನ ಮಾಸ್ಟರ್‌ಮೈಂಡ್ ಇವರೇ. ಹೌದು.. ಭಾರತೀಯ ಚಿತ್ರರಂಗದ ಬಹುತೇಕ 98 ಪರ್ಸೆಂಟ್ ಮಂದಿ ಸ್ಟಾರ್ಸ್‌ಗೆ ಈತನೇ ಹೇರ್ ಸ್ಟೈಲಿಸ್ಟ್. ಈತ ಮಾಡಿದ್ದೇ ಟ್ರೆಂಡು, ಯಾಕಂದ್ರೆ ಈತ ಬಿಗ್ಗೆಸ್ಟ್ ಬ್ರ್ಯಾಂಡು. ಹಾಗಾಗಿ ಎಲ್ಲಾ ಸೆಲೆಬ್ರಿಟಿಗಳ ತಲೆಗೇ ಕೈ ಹಾಕೋ ಅಧಿಕಾರ ಈತನೊಬ್ಬನಿಗೆ ಕಾಯ್ದಿರಿಸಲಾಗಿದೆ.

ಇಷ್ಟಕ್ಕೂ ಆಲಿಮ್ ಹಕೀಮ್ ಒಂದು ಹೇರ್‌‌ ಕಟ್‌ಗೆ ಎಷ್ಟು ಚಾರ್ಜ್ ಮಾಡ್ತಾರೆ ಗೊತ್ತಾ..? ಬರೋಬ್ಬರಿ ಒಂದು ಲಕ್ಷ ಪ್ಲಸ್ ಜಿಎಸ್‌ಟಿ ಬೇಸಿಕ್ ಪ್ರೈಸ್. ಒಂದು ಲಕ್ಷದಿಂದ 5 ಲಕ್ಷ ತನಕ ಸಿಂಗಲ್ ಹೇರ್ ಕಟ್‌ಗೆ ಈತ ಚಾರ್ಜ್ ಮಾಡ್ತಾರೆ ಅಂದ್ರೆ ನೀವು ನಂಬಲೇಬೇಕು. ಓ ಮೈ ಗಾಡ್.. ಒಂದೇ ಒಂದು ಬಾರಿ ಹೇರ್ ಕಟ್ ಮಾಡಿಸೋಕೆ ಐದು ಲಕ್ಷ ಕೊಡ್ಬೇಕಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯೋರಿಗೆ ಇದೆಲ್ಲಾ ಜುಜುಬಿ ಅನ್ನಬಹುದು.

ಅಂದಹಾಗೆ ಬಾಲಿವುಡ್‌ನ ಸೂಪರ್ ಸ್ಟಾರ್‌‌ಗಳಾದ ಕಿಂಗ್ ಖಾನ್ ಶಾರೂಖ್, ರಣ್ವೀರ್ ಸಿಂಗ್, ರಣ್‌ಬೀರ್ ಕಪೂರ್, ವಿಕ್ಕಿ ಕೌಶಲ್‌‌ರಿಂದ ಹಿಡಿದು, ಟಾಲಿವುಡ್‌ನ ರಾಮ್‌ಚರಣ್, ಜೂನಿಯರ್ ಎನ್‌ಟಿಆರ್, ಪ್ರಭಾಸ್, ರಾಜಮೌಳಿ, ಅಲ್ಲು ಅರ್ಜುನ್, ಕಾಲಿವುಡ್‌‌ನ ವಿಕ್ರಮ್, ವಿಜಯ್ ಸೇತುಪತಿ, ಅಟ್ಲೀ, ರಜನೀಕಾಂತ್ ತನಕ ಇವರೇ ಹೇರ್ ಕಟ್ ಮಾಡ್ತಾರೆ. ಅಷ್ಟೇ ಯಾಕೆ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್‌ಗೂ ಇವರು ಕೆಲಸ ಮಾಡಿದ್ದಾರೆ ಅನ್ನೋದು ಇಂಟರೆಸ್ಟಿಂಗ್.

ಬರೀ ಸಿನಿಮಾ ಸೆಲೆಬ್ರಿಟಿಗಳಷ್ಟೇ ಇವ್ರ ಕಸ್ಟಮರ್ಸ್ ಅಲ್ಲ. ಸಾಲು ಸಾಲು ಇಂಡಿಯನ್ ಸ್ಟಾರ್ ಕ್ರಿಕೆಟರ್ಸ್ ಎಲ್ಲಾ ಆಲಿಮ್ ಹಕೀಮ್‌ಗೆ ಪರ್ಮನೆಂಟ್ ಗಿರಾಕಿಗಳು. ಆ್ಯಂಗ್ರಿ ಯಂಗ್‌ಮ್ಯಾನ್ ಕಿಂಗ್ ಕೊಹ್ಲಿ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯಿಂದ ಹಿಡಿದು ಆಗರ್ಭ ಶ್ರೀಮಂತ ಅಂಬಾನಿ ತನಕ ಹಕೀಮ್ ಸರ್ವೀಸ್ ನೀಡ್ತಾರೆ. ಅವ್ರ ಲುಕ್ಸ್‌ನ ಡಿಸೈಡ್ ಮಾಡ್ತಾರೆ. ಅವರಿಗೆಲ್ಲಾ ಗುರುಗಳು ಬೇಱರೋ ಇರಬಹುದು. ಆದ್ರೆ ಕೇಶ ಗುರು ಮಾತ್ರ ಒನ್ ಅಂಡ್ ಓನ್ಲಿ ಆಲಿಮ್ ಹಕೀಮ್

  • ಇಷ್ಟಕ್ಕೂ ಯಾರು ಈ ಆಲಿಮ್ ಹಕೀಮ್? ಹಿನ್ನೆಲೆ ಏನು..?
  • ತಂದೆಯೇ ಹೀರೋ.. ರೆಟ್ರೋ ಹೀರೋಗಳ ಪಾಲಿನ ಸ್ಟಾರ್

ನಾವು ಇಷ್ಟೊತ್ತು ಬರೀ ಆಲಿಮ್ ಹಕೀಮ್ ಗತ್ತು, ಗಮ್ಮತ್ತು ಮಾತ್ರ ನೋಡಿದ್ವಿ. ಆದರೆ ಆತ ಯಾರ ಮಗ..? ಅವ್ರ ತಂದೆಯ ಅಬ್ಬರ, ಆರ್ಭಟ ಏನು ಅಂತ ನೋಡಿದ್ರೆ ಅಕ್ಷರಶಃ ಶಾಕ್ ಆಗ್ತೀರಾ. ಹೌದು.. ಆಲಿಮ್ ಹಕೀಮ್ ಖ್ಯಾತ ಹೇರ್ ಸ್ಟೈಲಿಸ್ಟ್ ಹಕೀಮ್ ಕೈರಾನ್ವಿ ಅವ್ರ ಮಗ. ರೆಟ್ರೋ ಹೀರೋ, ವಿಲನ್‌ಗಳ ಹಿಂದಿನ ಅಸಲಿ ಲುಕ್ ಮಾಸ್ಟರ್. 39 ವರ್ಷಕ್ಕೇ 1984ರಲ್ಲಿ ಆಲಿಮ್ ಹಕೀಮ್‌ರನ್ನ ಬಿಟ್ಟು ಇಹಲೋಕ ತ್ಯಜಿಸಿದ್ರು ಕೈರಾನ್ವಿ. ಆಗ ಆಲಿಮ್‌ಗೆ ಜಸ್ಟ್ 9 ವರ್ಷ.

ಅಂದಹಾಗೆ ಹಕೀಮ್ ಕೈರಾನ್ವಿ ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್, ಬ್ರೂಸ್‌ ‌ಲೀ, ವಿನೋದ್ ಖನ್ನಾ, ಸುನಿಲ್ ದತ್, ಶಶಿ ಕಪೂರ್, ಜೀತೇಂದ್ರ, ಶತ್ರುಜ್ಞಾ ಸಿನ್ಹಾ, ಅನಿಲ್ ಕಪೂರ್ ಅಂತಹ ಬಾಲಿವುಡ್ ಲೆಜೆಂಡ್ಸ್‌‌ಗೆ ಹೇರ್ ಕಟ್ ಮಾಡ್ತಿದ್ರು. ಇವರುಗಳ ಅದೆಷ್ಟೋ ಬಾಲಿವುಡ್ ಬ್ಲಾಕ್‌‌ಬಸ್ಟರ್ ಚಿತ್ರಗಳ ಲುಕ್ಸ್‌‌ ಗೆ ಇವರೇ ಕಾರಣಕರ್ತರಾಗಿದ್ರು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಇದೀಗ ಅವ್ರ ತಂದೆಯ ಪರಂಪರೆಯನ್ನ ಮುಂದುವರೆಸ್ತಿರೋದು ಆಲಿಮ್ ಹಕೀಮ್. ಈತ ಟ್ರೆಂಡ್‌ಗೆ ತಕ್ಕನಾಗಿ ಅಪ್ಡೇಟ್ ಆಗ್ತಾ, ಇಡೀ ಬಾಲಿವುಡ್ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗ ಹಾಗೂ ಕ್ರಿಕೆಟ್ ಲೋಕವನ್ನ ಆಳುತ್ತಿದ್ದಾರೆ.

  • ಸಿಂಗಲ್ ಹೇರ್‌ಕಟ್‌ಗೆ 1 ಲಕ್ಷ ಪ್ಲಸ್ ಜಿಎಸ್‌‌ಟಿ ಎಕ್ಸ್‌‌ಟ್ರಾ..!
  • ಪ್ರೀಮಿಯಂ ಹೇರ್‌ಕಟ್ ಬೆಲೆ ಬರೋಬ್ಬರಿ 3 ರಿಂದ 5 ಲಕ್ಷ
  • ದುಬೈ, ಔಟ್ ಸ್ಟೇಷನ್‌‌‌ ಸರ್ವೀಸ್‌ಗೆ ಸೆಪರೇಟ್ ಚಾರ್ಜ್!
  • 180 ಕೋಟಿ ಒಡೆಯ.. ಎಷ್ಟು ಸಿಟಿಗಳಲ್ಲಿವೆ ಔಟ್‌ಲೆಟ್ಸ್‌..?

ಆಲಿಮ್ ಹಕೀಮ್ ಒಂದು ಬಾರಿ ಹೇರ್ ಕಟ್ ಮಾಡೋಕೆ ಕನಿಷ್ಟ ಒಂದು ಲಕ್ಷ ಬೇಸಿಕ್ ಚಾರ್ಜ್ ಮಾಡ್ತಾರೆ. ಅಲ್ಲದೆ ಅದಕ್ಕೆ 18 ಪರ್ಸೆಂಟ್ ಎಕ್ಸ್‌ಟ್ರಾ ಜಿಎಸ್‌ಟಿ ಬೇರೆ ಕಟ್ಟಬೇಕು. ಅದು ಬೇಸಿಕ್ ಅಷ್ಟೇ. ಆದ್ರೆ ಪ್ರೀಮಿಯಂ ಹೇರ್‌‌ಕಟ್‌ಗೆ ಬರೋಬ್ಬರಿ 3 ರಿಂದ 5 ಲಕ್ಷ ರೂಪಾಯಿ ಪೀಕೋದು ಕನ್ಫರ್ಮ್. ಅದ್ರಲ್ಲೂ ದುಬೈನಂತಹ ಔಟ್ ಆಫ್ ಸ್ಟೇಷನ್‌‌ಗೇನೇ ತೆರಳಿ ಸರ್ವೀಸ್ ಕೊಡಬೇಕು ಅಂದಾಗ ಅಲ್ಲಿ ಮತ್ತಷ್ಟು ದುಬಾರಿ ರೇಟ್‌‌ಗಳನ್ನ ಫಿಕ್ಸ್ ಮಾಡ್ತಾರಂತೆ. ಅಲ್ಲಿಗೆ ಓಡಾಡುವ ಫ್ಲೈಟ್ ಚಾರ್ಜ್‌‌‌ ಕೂಡ ಕಸ್ಟಮರ್‌ಗೇನೇ ಹಾಕಿದ್ರೂ ಅಚ್ಚರಿಯಿಲ್ಲ.

ಅಂದಹಾಗೆ ಆಲಿಮ್ ಹಕೀಮ್ ಅವ್ರ ಹೇರ್ ಲಾಂಜ್‌‌‌ಗಳು ಭಾರತದ ಸಾಕಷ್ಟು ಸಿಟಿಗಳಲ್ಲಿವೆ. ಮುಂಬೈ, ಬೆಂಗಳೂರು, ಹೈದ್ರಾಬಾದ್, ಇಂದೋರ್, ಪುಣೆ, ಸೂರತ್, ಅಹಮದಾಬಾದ್, ದುರ್ಗಾಪುರ, ಶ್ರೀನಗರ, ನಾಸಿಕ್, ಪಾಣಿಪತ್, ಜಮ್ಮು, ಜೋಧ್‌ಪುರ, ಉದಯಪುರ.. ಹೀಗೆ ಸಾಲು ಸಾಲು ನಗರಗಳಲ್ಲಿ ಸಿಕ್ಕಾಪಟ್ಟೆ ಔಟ್‌‌ಲೆಟ್‌‌ಗಳನ್ನ ಮಾಡಿದ್ದಾರೆ ಆಲಿಮ್ ಹಕೀಮ್. ದುಬೈ ಸೇರಿದಂತೆ ಒಂದಷ್ಟು ವಿದೇಶಗಳಿಗೂ ತಮ್ಮ ಕೋಟೆ ಕೊತ್ತಲಗಳನ್ನ ವಿಸ್ತರಿಸಿರೋ ಆಲಿಮ್, ಇವೆಲ್ಲವುಗಳಿಂದ ದುಡಿದ ಹಣದಿಂದ ಸದ್ಯ ಇವರ ಒಟ್ಟು ಆಸ್ತಿ ಮೊತ್ತ ಬರೋಬ್ಬರಿ 180 ಕೋಟಿಗೂ ಅಧಿಕ ಅಂತ ಅಂದಾಜಿಸಲಾಗಿದೆ. ಸೋ.. ಈತ ಸದ್ಯ ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲ. ಸೆಲೆಬ್ರಿಟಿಗಳ ಪಾಲಿನ ಸೆಲೆಬ್ರಿಟಿ ಅಂದ್ರೆ ತಪ್ಪಾಗಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 12T180001.684

ಕಾಂಗ್ರೆಸ್ ಮುಖಂಡನ ಹ*ತ್ಯೆ ಕೇಸ್: 8 ಆರೋಪಿಗಳ ಬಂಧನ

by ಶಾಲಿನಿ ಕೆ. ಡಿ
April 12, 2026 - 6:00 pm
0

Untitled design 2026 04 12T174039.120

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

by ಶಾಲಿನಿ ಕೆ. ಡಿ
April 12, 2026 - 5:41 pm
0

Untitled design 2026 04 12T172821.517

ಎರಡು ಮದ್ವೆಯಾಗಿದ್ದ ಗಾಯಕಿ ಆಶಾ ಭೋಸ್ಲೆ ಮ್ಯಾರೇಜ್‌ ಕಹಾನಿ

by ಶಾಲಿನಿ ಕೆ. ಡಿ
April 12, 2026 - 5:29 pm
0

Untitled design 2026 04 12T170350.536

‘ಕಿಂಗ್’ ಚಿತ್ರದ ಸ್ಟೈಲಿಶ್ ಲುಕ್ ಹಿಂದಿನ ಮಾಸ್ಟರ್ ಆಲಿಮ್ ಹಕೀಮ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 12, 2026 - 5:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 12T180001.684
    ಕಾಂಗ್ರೆಸ್ ಮುಖಂಡನ ಹ*ತ್ಯೆ ಕೇಸ್: 8 ಆರೋಪಿಗಳ ಬಂಧನ
    April 12, 2026 | 0
  • Untitled design 2026 04 12T174039.120
    ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ
    April 12, 2026 | 0
  • Untitled design 2026 04 12T172821.517
    ಎರಡು ಮದ್ವೆಯಾಗಿದ್ದ ಗಾಯಕಿ ಆಶಾ ಭೋಸ್ಲೆ ಮ್ಯಾರೇಜ್‌ ಕಹಾನಿ
    April 12, 2026 | 0
  • Untitled design 2026 04 12T160727.233
    ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್: ಕರಡು ಅಧಿಸೂಚನೆ
    April 12, 2026 | 0
  • Untitled design 2026 04 12T150953.240
    ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
    April 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version