ಆಲಿಯಾ ಭಟ್ ಕಂಬ್ಯಾಕ್ ಮೂವಿ ಆಲ್ಫಾ ಟೀಸರ್‌ಗೆ ಬಾಲಿವುಡ್ ಅಂಗಳದಲ್ಲಿ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಆದ್ರೆ ವಾಸ್ತವ ಬೇರೇನೇ ಇದೆ. ಇದು ಹಂಡ್ರೆಡ್ ಪರ್ಸೆಂಟ್ ಫ್ರೆಂಚ್ ಕ್ಲಾಸಿಕ್ ಮೂವಿಯ ಕಾಪಿ ಆಗಿದ್ದು, ಫ್ರೇಮ್ ಟು ಫ್ರೇಮ್ ಭಟ್ಟಿ ಇಳಿಸಿದ್ದಾರೆ. ಇಷ್ಟಕ್ಕೂ ಅದ್ಯಾವ ಮೂವಿ..? ಅದರ ಅಸಲಿಯತ್ತಾದ್ರೂ ಏನು ಅಂತೀರಾ..ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ…
- ಆಲಿಯಾ ಆಲ್ಫಾ 100% ಕಾಪಿ.. ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
- 3 ವರ್ಷದ ನಂತ್ರ ಬಣ್ಣ ಹಚ್ಚಿದ ಆಲಿಯಾಗೆ ಇದು ಬೇಕಿತ್ತಾ..?
- ರಣ್‌ಬೀರ್ ಕಪೂರ್ ಪತ್ನಿ ಈಗ 18 ವರ್ಷದ ಸ್ಪೈ ಏಜೆಂಟ್
- ಧುರಂಧರ್‌ನ ಮೆಚ್ಚದ ಶಾರೂಖ್.. ಆಲ್ಫಾ ಟೀಸರ್‌ಗೆ ಜೈ..!
ಇದು ಇತ್ತೀಚೆಗೆ ಬಿಡುಗಡೆ ಆಗಿರೋ ಬಾಲಿವುಡ್‌ನ ಹೊಚ್ಚ ಹೊಸ ಸಿನಿಮಾ ಆಲ್ಫಾದ ಟೀಸರ್ ಝಲಕ್. ಯಶ್ ರಾಜ್ ಫಿಲಂಸ್ ಬ್ಯಾನರ್‌ನಡಿ ತಯಾರಾಗಿರೋ ಈ ಸಿನಿಮಾ ಕೂಡ YRF ಸ್ಪೈ ಯೂನಿವರ್ಸ್ ಸಿನಿಮಾ ಅನಿಸಿಕೊಂಡಿದೆ. ಇಂಟರೆಸ್ಟಿಂಗ್ ಅಂದ್ರೆ ನಟಿ ಆಲಿಯಾ ಭಟ್, ಮದ್ವೆ ಮಗು ಸಂಸಾರ ಅಂತ ಕಂಪ್ಲೀಟ್ ಆಗಿ ಫ್ಯಾಮಿಲಿ ಕಡೆ ಗಮನ ಹರಿಸಿ, ಬಣ್ಣದಲೋಕದಿಂದ ದೂರ ಉಳಿದಿದ್ರು. ಇದೀಗ ಆಲ್ಫಾ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
2023ರಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರ ಮಾಡಿದ್ದ ಆಲಿಯಾ ಭಟ್, ಸುಮಾರು ಮೂರು ವರ್ಷಗಳಿಂದ ಚಿತ್ರರಂಗಕ್ಕೆ ದೂರ ಉಳಿದಿದ್ರು. ಇದೀಗ ಮಹಿಳಾ ಪ್ರಧಾನ ಆಲ್ಫಾ ಚಿತ್ರದಿಂದ ಎಲ್ಲರ ಹುಬ್ಬೇರಿಸಿದ್ದಾರೆ. 18 ವರ್ಷದ ಯಂಗ್ ಅಂಡ್ ಎನರ್ಜಿಟಿಕ್ ಹುಡ್ಗಿಯಂತೆ ಟ್ರಾನ್ಸ್‌ಫಾರ್ಮ್ ಆಗಿರೋ ಪರಿ ವೆರಿ ವೆರಿ ಇನ್ಸ್‌ಪೈಯರಿಂಗ್. ಅದ್ರಲ್ಲೂ ಮಾರ್ಷಲ್ ಆರ್ಟ್ಸ್‌ನ ಕಲಿತು, ಈ ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಮಾಡಿರೋದು ವಿಶೇಷ.
ಆಲಿಯಾ ಆಲ್ಫಾ ಚಿತ್ರಕ್ಕೆ ಇಡೀ ಬಾಲಿವುಡ್ ಭೇಷ್ ಅಂತಿದೆ. ಟೀಸರ್ ಕೂಡ 4 ಕೋಟಿ ದಾಖಲೆ ವೀವ್ಸ್ ಮೂಲಕ ಯೂಟ್ಯೂಬ್‌ನಲ್ಲಿ ನಾಗಾಲೋಟ ಮುಂದುವರೆಸಿದೆ. ರಣ್ವೀರ್ ಸಿಂಗ್ ಧುರಂಧರ್ ಸಿನಿಮಾನ ಬಂದಾಗ ಸೈಲೆಂಟ್ ಆಗಿದ್ದ ಶಾರೂಖ್ ಖಾನ್, ಇದೀಗ ಆಲಿಯಾ ಆಲ್ಫಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ಇದು ಶಿವ್ ರಾವಾಲಿ ಅವರೇ ಬರೆದು, ನಿರ್ದೇಶಿಸ್ತಿರೋ ಕಥೆ ಅಲ್ಲ. ಬದಲಿಗೆ ಫ್ರೆಂಚ್‌ನ ಆಲ್‌ಟೈಂ ಕ್ಲಾಸಿಕ್ ಮೂವಿಗಳಲ್ಲಿ ಒಂದಾದ ಲಾ ಫೆಮ್ಮೆ ನಿಕಿತಾ ಚಿತ್ರದ ರಿಮೇಕ್. ಟೀಸರ್‌ನ ಪ್ರತಿ ಫ್ರೇಮ್ ಕೂಡ ಈ ಫ್ರೆಂಡ್ ಸಿನಿಮಾದಿಂದ ಭಟ್ಟಿ ಇಳಿಸಲಾಗಿದೆ.
ಆ್ಯನೆ ಪರಿಲ್ಲಾಡ್ ಹಾಗೂ ಜೀನ್ ಹ್ಯೂಗೂಸ್ ಆ್ಯಂಗ್ಲೇಡ್ ಪಾತ್ರಗಳಲ್ಲಿ ಇಲ್ಲಿ ಆಲಿಯಾ ಭಟ್ ಹಾಗೂ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದು, ಅದೇ ಸೀಕ್ವೆನ್ಸ್‌ನ ಟೀಸರ್‌ನಲ್ಲಿ ರಿಪೀಟ್ ಮಾಡಲಾಗಿದೆ. ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಫ್ರೆಂಚ್ ಮೂವಿ ತೆರೆ ಕಂಡು ಬರೋಬ್ಬರಿ 36 ವರ್ಷಗಳಾಗಿದೆ. ಯೆಸ್.. 1990ರಲ್ಲಿ ರಿಲೀಸ್ ಆದಂತಹ ಆ್ಯಕ್ಷನ್ ಥ್ರಿಲ್ಲರ್ ಮೂವಿ ಲಾ ಫೆಮ್ಮೆ ನಿಕಿತಾ, ಆಗಲೇ ವರ್ಲ್ಡ್ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ರೂಪಾಯಿಗಳನ್ನ ಲೂಟಿ ಮಾಡಿತ್ತು. ಆದ್ರೆ ಆಲಿಯಾ ಕಂಬ್ಯಾಕ್ ಮೂವಿ ಈ ತರಹದ ರಿಮೇಕ್ ಚಿತ್ರ ಆಗುತ್ತೆ ಅಂತ ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಈ ವಿಷಯ ಎಲ್ಲೆಡೆ ಟ್ರೋಲ್ ಆಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





