• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಈ ಬಾರಿಯ ಅಮೆರಿಕಾದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬದಲ್ಲಿ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ

ಕವಿತಾ by ಕವಿತಾ
July 15, 2026 - 5:12 pm
in ಸಿನಿಮಾ
0 0
0
ವಾಂಗ್ಚುಕ್ (3)

ಅಮೆರಿಕಾದ ಕನ್ನಡಿಗರ ಹೆಮ್ಮೆಯ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾದ ‘ಅಕ್ಕ’ (Association of Kannada Kootas of America), ತನ್ನ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಭಾಗವಾಗಿ, ” ಅಕ್ಕ” ಸಮ್ಮೇಳನದ  ಅಧ್ಯಕ್ಷರಾದ ಮಧು ರಂಗಯ್ಯ ಅವರ ನೇತೃತ್ವದಲ್ಲಿ ಅಮೆರಿಕಾದಲ್ಲಿ ಸ್ಪರ್ಧಾತ್ಮಕ ಸ್ವರೂಪದ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ.

ಅಕ್ಕ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಕನ್ನಡ ಚಲನಚಿತ್ರಗಳಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದವರು  ಮಧು ರಂಗಯ್ಯನವರು. ಅವರ ಪ್ರೇರಣೆ, ಸಂಪೂರ್ಣ ಸಹಕಾರ ಮತ್ತು ದೃಢ ಸಂಕಲ್ಪವೇ ‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ 2026’ ಸಾಕಾರಗೊಳ್ಳಲು ಪ್ರಮುಖ ಶಕ್ತಿ. ಕನ್ನಡದ ಸೃಜನಶೀಲತೆಯನ್ನು ವಿಶ್ವದ ಕನ್ನಡಿಗರ ಮುಂದೆ ಹೆಮ್ಮೆಯಿಂದ ಕೊಂಡೊಯ್ಯುವ ಈ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಅವರ ನಾಯಕತ್ವವೇ ಬೆನ್ನೆಲುಬಾಗಿದೆ.

RelatedPosts

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ

ಅಲ್ಲು ಅರ್ಜುನ್-ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!

‘ಲಂಬೋದರ 2.0’ ಚಿತ್ರದಲ್ಲಿ ಸಾಧ್ವಿ ಪಾತ್ರಕ್ಕೆ ಜೀವ ತುಂಬಿದ ಮೇಘನಾ ಗಾಂವ್ಕರ್

ಶರ್ಟ್ ಬಿಚ್ತೀರಾ..ಕೆಳಗೆ ಬೀಳ್ತೀರಾ..ಏನ್ ಸಲ್ಲು ಭಾಯ್ ಇದೆಲ್ಲಾ?

ADVERTISEMENT
ADVERTISEMENT

‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ 2026’ ಎಂಬ ಈ ಉತ್ಸವ, ಕರ್ನಾಟಕದ ಶ್ರೇಷ್ಠ ಚಿತ್ರಗಳನ್ನು ಫಿಲಡೆಲ್ಫಿಯಾದ ಜಾಗತಿಕ ವೇದಿಕೆಗೆ ತಲುಪಿಸುವ ಐತಿಹಾಸಿಕ ಪ್ರಯತ್ನವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಉತ್ಸವದ ನಿರ್ದೇಶಕರಾದ ಪಿ.ಶೇಷಾದ್ರಿ ಹಾಗೂ ರೂವಾರಿಗಳಾದ ಗೌರೀಶ್ ಅಕ್ಕಿ ಹಾಗೂ ಬಡಿಗೇರ್ ದೇವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚಲನಚಿತ್ರೋತ್ಸವದ ನಿರ್ದೇಶಕರಾದ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಜಗತ್ತಿನಾದ್ಯಂತ ಐದು ಸಾವಿರಕ್ಕೂ  ಹೆಚ್ಚು ಚಲನಚಿತ್ರೋತ್ಸವಗಳು ನಡೆಯುತ್ತವೆ. ಬೆಂಗಳೂರಿನಲ್ಲೂ ಹದಿನೇಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆದಿವೆ. ಈ ಬಾರಿ ಅಮೆರಿಕಾದಲ್ಲಿ “ಅಕ್ಕ”,  ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ಆಯೋಜಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಬಡಿಗೇರ್ ದೇವೇಂದ್ರ ಹಾಗೂ ಗೌರೀಶ್ ಅಕ್ಕಿ, “ಅಕ್ಕ” ತಂಡದ ಮಾರ್ಗದರ್ಶನ ಮತ್ತು ಸಹಕಾರದ ಮೇರೆಗೆ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಚಿತ್ರೋತ್ಸವಗಳು ಒಂದು ಅಸ್ಮಿತೆಯನ್ನು ಬಿಂಬಿಸುತ್ತಾ, ಒಂದು ಪ್ರಾದೇಶಿಕತೆಯನ್ನು ನೀಡುತ್ತಾ ಹೋಗುತ್ತವೆ. ಈಗ ಸಿನಿಮಾ ನೋಡಲು ಸಾಕಷ್ಟು ಮಾರ್ಗಗಳಿವೆ. ಆದರೆ ಚಲನಚಿತ್ರೋತ್ಸವದಲ್ಲಿ ಚಿತ್ರಗಳನ್ನು ನೋಡಿದಾಗ ಆಗುವ ಸಂತೋಷವೇ ಬೇರೆ. ಅಲ್ಲಿ  ವೀಕ್ಷಿಸಿದ ಚಿತ್ರಗಳನ್ನು ಮರೆಯುವುದು ಕಡಿಮೆ. ಅಲ್ಲಿ ಬಂದಿರುವ ಚಿತ್ರಾಸಕ್ತರ ಜೊತೆ ಸೇರಿ ಆ ಚಿತ್ರವನ್ನು ಗ್ರಹಿಸುವ ಪ್ರಯತ್ನ ಕೂಡ ಮಾಡುತ್ತೇವೆ. ಚಿತ್ರೋತ್ಸವಗಳಲ್ಲಿ ಒಟ್ಟಾಗಿ ಒಂದು ವೇದಿಕೆಯಲ್ಲಿ ಚಿತ್ರವನ್ನು ನೋಡಿ, ಅದರ ಬಗ್ಗೆ ಚರ್ಚೆ ಮಾಡಿದಾಗ ನಮ್ಮ ಗ್ರಹಿಕೆ ಸರಿಯಾ? ನೋಡಿದ ಬೇರೆ ಪ್ರೇಕ್ಷಕರ ಗ್ರಹಿಕೆ ಸರಿಯಾ? ಎಂದು ಚರ್ಚೆ ಮಾಡಲು ಸಾಧ್ಯವಾಗುತ್ತದೆ. ಇದನ್ನು ಬೇರೆ ಕಡೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಚಿತ್ರೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು ಜನವರಿ 1,‌ 2025 ರಿಂದ ಡಿಸಂಬರ್ 31, 2025 ರ ಒಳಗೆ ತಯಾರಾದ ಚಿತ್ರಗಳು “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ಕ್ಕೆ  ಆಯ್ಕೆಯಾಗುವುದಕ್ಕೆ ಅರ್ಹತೆ ಪಡೆಯುತ್ತವೆ. ಮೊದಲು, ಐದು ಜನರ ಆಯ್ಕೆ ಸಮಿತಿ ಚಿತ್ರೋತ್ಸವಕ್ಕೆ ಆಯ್ಕೆಯಾದ ಎಲ್ಲಾ ಚಿತ್ರಗಳನ್ನು ನೋಡಿ, ಹತ್ತು ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಅನಂತರ ಮತ್ತೊಂದು ಮೂರು ಸದಸ್ಯರ ಸಮಿತಿ ಈ ಹತ್ತು ಚಿತ್ರಗಳಲ್ಲಿ ಮೂರು ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಆ ಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದುಕೊಳ್ಳಲಿವೆ. ಮೊದಲ ಚಿತ್ರಕ್ಕೆ ಒಂದು ಲಕ್ಷ, ಎರಡನೇ ಚಿತ್ರಕ್ಕೆ ಐವತ್ತು ಸಾವಿರ ಹಾಗೂ ಮೂರನೇ ಚಿತ್ರಕ್ಕೆ ಇಪ್ಪತ್ತೈದು ಸಾವಿರ ನಗದು ಬಹುಮಾನಗಳಿರುತ್ತದೆ. ಇಲ್ಲಿ ಆಯ್ಕೆಯಾದ ಹತ್ತು ಚಿತ್ರಗಳು “ಅಕ್ಕ” ಸಮ್ಮೇಳನದಲ್ಲಿ ಪ್ರದರ್ಶನವಾಗುತ್ತದೆ. ಈಗಾಗಲೇ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” https://cinegannadafilmfest.org ವೆಬ್ ಸೈಟ್ ನಲ್ಲಿ ಅರ್ಜಿ ಲಭ್ಯವಿದೆ. ಆಸಕ್ತರು ಅರ್ಜಿ ಭರ್ತಿ ಮಾಡಿ ಇಂದಿನಿಂದಲೇ ತಮ್ಮ ಚಿತ್ರಗಳನ್ನು ಚಿತ್ರೋತ್ಸವಕ್ಕೆ ಕಳುಹಿಸಿಕೊಡಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಚಿತ್ರೋತ್ಸವದ ಸಂಘಟಕರಾದ  ಗೌರೀಶ್ ಅಕ್ಕಿ, ಅಮೆರಿಕಾದಲ್ಲಿ ಪ್ರದರ್ಶನವಾಗುವ ಹಾಗೂ ಹಣಗಳಿಸುವ ಚಿತ್ರಗಳಲ್ಲಿ ಮೊದಲ ಸ್ಥಾನದಲ್ಲಿ  ತೆಲುಗು, ತಮಿಳು   ಚಿತ್ರಗಳು ಬರುತ್ತವೆ. ನಂತರ ಸ್ಥಾನದಲ್ಲಿ ಕನ್ನಡ ಚಿತ್ರಗಳು ಬರುತ್ತವೆ. ಆ ನಿಟ್ಟಿನಲ್ಲಿ ಅಮೆರಿಕಾ ಕನ್ನಡಿಗರಿಗೆ ನಮ್ಮ ಚಿತ್ರಗಳನ್ನು ತಲುಪಿಸಲು ಈ ಚಿತ್ರೋತ್ಸವ ಸೂಕ್ತ ವೇದಿಕೆಯಾಗಿದೆ. ಒಂದು ಸಿನಿಮಾ ನೋಡಿಕೊಂಡು ಬರಬೇಕಾದರೆ ಆ ಚಿತ್ರದ ಬಗ್ಗೆ ಚರ್ಚೆ ಆಗಬೇಕು. ಅದು ಒಳ್ಳೆಯ ಸಿನಿಮಾ ಆಗುತ್ತದೆ. ಆ ರೀತಿಯ ಸಿನಿಮಾಗಳನ್ನು ಗುರುತಿಸುವ ಕೆಲಸವನ್ನು ನಾವು ಮಾಡೋಣ ಎಂದು ಬಡಿಗೇರ್ ದೇವೇಂದ್ರ ಅವರು ಹೇಳಿದಾಗ ನಾನು ಅವರ ಜೊತೆಯಾದೆ ಎಂದು ಹೇಳಿದರು.

ಅಕ್ಕ ಸಮ್ಮೇಳನದ ಅಧ್ಯಕ್ಷರಾದ ಮಧು ರಂಗಯ್ಯ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ  ಚಿತ್ರೋತ್ಸವ ನಡೆಯಲಿದ್ದು, ಇಂದಿನಿಂದಲೇ ಅಧಿಕೃತ ವೆಬ್ಸೈಟ್ ನಲ್ಲಿ ಸಿನಿಮಾ ಸಲ್ಲಿಸಬಹುದು, ಆಸಕ್ತಿವುಳ್ಳವರು ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಹಾಕಬಹುದು. ಆಗಸ್ಟ್ ಮೊದಲ ವಾರದಿಂದ ಚಿತ್ರಗಳನ್ನು ನೋಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಗಸ್ಟ್ ಕೊನೆಯವಾರದಲ್ಲಿ ಇಲ್ಲೇ ಸಮಾರಂಭ ಆಯೋಜಿಸಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಘೋಷಿಸಲಾಗುವುದು ಎಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದುಕೊಂಡ “ವನ್ಯಾ” ಚಿತ್ರದ ನಿರ್ದೇಶಕರು ಹಾಗೂ ಸಿನಿಗನ್ನಡ ಚಲನಚಿತ್ರೋತ್ಸವದ ರೂವಾರಿಗಳಾದ  ಬಡಿಗೇರ್ ದೇವೇಂದ್ರ ತಿಳಿಸಿದರು.

“ಅಕ್ಕ”ದಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು ಸೇರಿದಂತೆ ಹತ್ತು ಚಿತ್ರಗಳ ಪ್ರದರ್ಶನವಾಗುತ್ತವೆ. ವಿಜೇತ ಚಿತ್ರತಂಡದವರು ವೀಸಾ ಉಳ್ಳವರಾಗಿದ್ದರೆ ಅವರನ್ನು “ಅಕ್ಕ” ಸಮ್ಮೇಳನಕ್ಕೂ ಕರೆದುಕೊಂಡು ಹೋಗುವ ಯೋಜನೆ ಇದೆ.‌ ಉತ್ತಮ ಕನ್ನಡ ಚಿತ್ರಗಳನ್ನು ಅಮೆರಿಕಾದ ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ‌ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ವನ್ನು ಅಮೆರಿಕಾದ ಕನ್ನಡಿಗರ ಹೆಮ್ಮೆಯ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾದ ‘ಅಕ್ಕ’ ಮತ್ತು ABGYOR VENTURES ಸಂಘಟಿಸಿದೆ.

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ರೈನ್ ಮೇಕರ್ಸ್ ವರ್ಕ್ ಸ್ಪೇಸ್ ಎಂಬ ಸುಂದರ ಸ್ಥಳದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಇಪ್ಪತ್ತು ಆಸನಗಳುಳ್ಳ ಮಿನಿ ಥಿಯೇಟರ್ ಕೂಡ ಈ ಸ್ಥಳದಲ್ಲಿರುವುದು ವಿಶೇಷ. “ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವದ”  ಮಾರ್ಕೆಟಿಂಗ್ ನಿರ್ವಹಣೆಯನ್ನು ಕಂದಯ್ಯ ಶೆಟ್ಟಿ ಅವರು ಮಾಡುತ್ತಿದ್ದಾರೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 21T221707.814

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ

by ಶಾಲಿನಿ ಕೆ. ಡಿ
September 21, 2026 - 10:18 pm
0

Untitled design 2026 09 21T220910.887

ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಲು ಶಾಸಕ ಪುತ್ರಿಗೆ ಹೈಕೋರ್ಟ್ ಎಚ್ಚರಿಕೆ

by ಶಾಲಿನಿ ಕೆ. ಡಿ
September 21, 2026 - 10:09 pm
0

Untitled design 2026 09 21T215443.086

ಅಲ್ಲು ಅರ್ಜುನ್-ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!

by ಶಾಲಿನಿ ಕೆ. ಡಿ
September 21, 2026 - 9:58 pm
0

Untitled design 2026 09 21T213844.048

ರಷ್ಯಾದಲ್ಲಿ ಸಂಸತ್‌ ಚುನಾವಣೆ; ಪುಟಿನ್ ಪಕ್ಷಕ್ಕೆ ಭರ್ಜರಿ ಜಯ

by ಶಾಲಿನಿ ಕೆ. ಡಿ
September 21, 2026 - 9:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 21T221707.814
    ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ
    September 21, 2026 | 0
  • Untitled design 2026 09 21T215443.086
    ಅಲ್ಲು ಅರ್ಜುನ್-ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!
    September 21, 2026 | 0
  • ಆ್ಯಂಬುಲೆನ್ಸ್ (1)
    ‘ಲಂಬೋದರ 2.0’ ಚಿತ್ರದಲ್ಲಿ ಸಾಧ್ವಿ ಪಾತ್ರಕ್ಕೆ ಜೀವ ತುಂಬಿದ ಮೇಘನಾ ಗಾಂವ್ಕರ್
    September 21, 2026 | 0
  • Your paragraph text 2026 09 21T194618.257
    ಶರ್ಟ್ ಬಿಚ್ತೀರಾ..ಕೆಳಗೆ ಬೀಳ್ತೀರಾ..ಏನ್ ಸಲ್ಲು ಭಾಯ್ ಇದೆಲ್ಲಾ?
    September 21, 2026 | 0
  • Untitled design 2026 09 21T165424.207
    ಟಾಸ್‌ ಎಲ್ಲೆಡೆ ಹೌಸ್‌‌ಫುಲ್..ಸೆಲೆಬ್ರಿಟಿಗಳೂ ದಿಲ್‌ಖುಷ್..!
    September 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version