ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ, ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಸಿನಿಜರ್ನಿ ಮೆಲಕು ಹಾಕುತ್ತ ಕಣ್ಣೀರು ಹಾಕಿದ್ದಾರೆ. ಇದೆ ವೇಳೆ ದರ್ಶನ್ ಡೆವಿಲ್ ಸಿನಿಮಾದಲ್ಲಿ ನಟಿಸುವ ಅವಕಾಶ ರಾಗಿಣಿಗೆ ಸಿಕ್ಕಿತ್ತು. ಆದರೆ ಈ ಒಂದು ಕಾರಣಕ್ಕೆ ನಟಿಸಲ್ಲ ಎಂದು ಹೇಳಿ ರಾಗಿಣಿ ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಡೆವಿಲ್ ಬಿಡುಗಡೆ ನಂತರ ರಾಗಿಣಿ ಈ ಸ್ಟೇಟ್ಮೆಂಟ್ ಕೊಟ್ಟಿದ್ಯಾಕೆ..? ಅಷ್ಟಕ್ಕೂ ಡೆವಿಲ್ ಪಾತ್ರ ರಿಜೆಕ್ಟ್ ಮಾಡಿದ್ದು ಯಾಕೆ..?
ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಆಯಕ್ಟೀವ್ ಆಗಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ತುಪ್ಪದ ಬೆಡಗಿ ಎಂದೇ ಫೇಮಸ್ ಆದವರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಡ್ತಾ ಕನ್ನಡ ಇಂಡಸ್ಟ್ರಿಯಲ್ಲೇ ನೆಲೆಯೂರಿ ಟಾಪ್ ನಟಿ ಆದವರು. ಇದೀಗ ರಾಗಿಣಿ ಬಣ್ಣದ ಲೋಕಕ್ಕೆ ಕಾಲಿಟ್ಟು 15ವರ್ಷಗಳನ್ನು ಪೂರೈಸಿದ್ದಾರೆ. ಇದೆ ಖುಷಿಯಲ್ಲಿ ನಟಿ ತಮ್ಮ 15ವರ್ಷದ ಸಿನಿ ಜರ್ನಿ ಮೆಲಕು ಹಾಕಿದ್ದಾರೆ.

ಇಂಡಸ್ಟ್ರಿಯಲ್ಲಿ 15ವರ್ಷ ಪೂರೈಸಿದ ರಾಗಿಣಿ ದ್ವಿವೇದಿ
ಕಣ್ಣೀರು ಹಾಕಿದ ತುಪ್ಪದ ಬೆಡಗಿ ಹೇಳಿದ್ದೇನು?

ಸುದೀಪ್ ಜೊತೆ ವೀರ ಮದಕರಿ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ರಾಗಿಣಿ ದರ್ಶನ್ ಡೆವಿಲ್ ನಲ್ಲೂ ನಟಿಸಬೇಕಿತ್ತು. ಆದ್ರೆ ನಟಿಸಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಸದ್ಯ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡ್ತಿದೆ. ಹಿರಿಗುವಾಗ್ಲೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ದರ್ಶನ್-ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಬಗ್ಗೆಯೂ ರಾಗಿಣಿ ಮಾತನಾಡಿದ್ದು. ಇದೆ ವೇಳೆ ‘ಡೆವಿಲ್’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಈ ಒಂದು ಕಾರಣಕ್ಕೆ ನಟಿಸಿಲ್ಲ ಎಂದು ಹೇಳಿ ರಾಗಿಣಿ ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಎಸ್, ಸುಮ್ಮನೇ ಬೇಕಂತ ಒಂದು ಪಾತ್ರವನ್ನು ಮಾಡಕ್ಕಾಗಲ್ವಲ್ಲ. ನನಗೆ ಡೆವಿಲ್ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು.ಆದರೆ ಯಾವುದಕ್ಕೂ ಸುಮ್ಮನೇ ಮೂರು ಹಾಡಿಗೋಸ್ಕರ ಹಾಗೇ ಪಾತ್ರವನ್ನು ಮಾಡಕ್ಕೆ ಆಗಲ್ವಲ್ಲ. ಒಂದು ಹಂತದವರೆಗೆ ಸಿಕ್ಕ ಪಾತ್ರಗಳಲ್ಲಿ ನಟಿಸಬೇಕು. ಆ ಹಂತ ದಾಟಿದ ಮೇಲೆ ಪಾತ್ರಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಾವು ಎಲ್ಲ ಪಾತ್ರವನ್ನು ಒಪ್ಪಿಕೊಳ್ಳಲು ಆಗಲ್ಲ. ನಮಗೆ ತಕ್ಕಂತ ಪಾತ್ರವನ್ನಷ್ಟೇ ಮಾಡಬೇಕು. ಈಗ ಸಿನಿಮಾಗಳು ಬದಲಾಗುತ್ತಿವೆ. ಹಾಗಂತ ಯಾವುದೋ ಸಿಕ್ಕ ಪಾತ್ರಗಳನ್ನು ಮಾಡಲು ಆಗುವುದಿಲ್ಲ ಎಂದು ಡೆವಿಲ್ ಸಿನಿಮಾ ನಿರಾಕರಣೆ ಹಿಂದಿನ ಕಾರಣದ ಬಗ್ಗೆ ಹೇಳಿಕೊಂಡಿದ್ದಾರೆ.

ಡೆವಿಲ್ ರಿಜೆಕ್ಟ್.. ‘ಅದು ನನ್ನ ಚಾಯ್ಸ್’ ಅಂದ್ರೇಕೆ ರಾಗಿಣಿ?
ರಾಗಿಣಿ ಮಾಡಬೇಕಿದ್ದ ಪಾತ್ರ ಶರ್ಮಿಳಾ ಪಾಲಾಯ್ತು

ಇನ್ನೂ ರಾಗಿಣಿ ಮಾಡ್ಬೇಕಿದ್ದ ಪಾತ್ರದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ.ಹೋಗೆ ಮಾತನಾಡುತ್ತ ಕನ್ನಡ ಚಿತ್ರರಂಗ ತನ್ನನ್ನು ಕಡೆಗಣಿಸಿದೆ ಮತ್ತು ಕಷ್ಟದ ಸಮಯದಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಗಿಣಿ ಸಿನಿಜರ್ನಿಯಲ್ಲಿ ಏರು ಪೆರು ಆಗಿದ್ದು ಎಲ್ಲವನ್ನು ಬ್ಯಾಲೆನ್ಸ್ ಮಾಡ್ತಾ ಲೈಮ್ ಲೈಟ್ ನಲ್ಲಿ ಇರೋಕೆ ಪ್ರಯತ್ನ ಪಡ್ತಿದ್ದಾರೆ. ಅಂದಹಾಗೆ ಮೋಹನ್ ಲಾಲ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವೃಷಭದಲ್ಲಿ ರಾಗಿಣಿ ಅಭಿನಯಿಸಿದ್ದು ಆ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸೋಕೆ ರಾಗಿಣಿ ತಯಾರಿ ಮಾಡ್ಕೊಳ್ತಿದ್ದಾರೆ ಏನಿವೇ ತುಪ್ಪದ ಬೆಡಗಿ ಸಿನಿ ಜರ್ನಿಯಲ್ಲಿ ಮುಂಬರುವ ನಟಿಮಣಿಯರಿಗೆ ಇನ್ಸ್ಪಿರೇಷನ್ ಆಗೋದ್ರಲ್ಲಿ ಎರಡು ಮಾತಿಲ್ಲ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





