ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ತಮಿಳುನಟ ಸಿಂಬು ಸ್ಟಿಲ್ ವರ್ಜಿನ್ ಅಂತೆ. ಈ ಮಾತು ಕೇಳಿ ಸಂದರ್ಶನ ಮಾಡಿದ ನಿರೂಪಕಿಯೇ ದಂಗಾಗಿಬಿಟ್ಟಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಬಿಂದಾಸ್ ಬೆಡಗಿ ಹನ್ಸಿಕಾ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದ ಸಿಂಬು, ಅದು ಜಸ್ಟ್ ಫ್ರೆಂಡ್‌ಶಿಪ್ ಎಂದಿದ್ದಾರೆ. ಮಾಜಿ ಗರ್ಲ್‌ಫ್ರೆಂಡ್ಸ್ ಎಲ್ಲಾ ಮಿಂಗಲ್ ಆದ್ರೂ, ತಾನಿನ್ನೂ ಸಿಂಗಲ್ ಆಗಿಯೇ ಉಳಿದಿರೋ ಸಿಂಬು ಲೇಟೆಸ್ಟ್ ಸ್ಟೇಟ್‌ಮೆಂಟ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ಧಮ್, ಅಳೈ, ಕೋವಿಲ್, ಮನ್‌ಮದನ್, ವಲ್ಲವನ್, ಗೋವಾ, ವಿನೈತಾಂಡಿ ವರುವಾಯ, ವಾನಂ, ಒಸ್ತೆ, ಪೋಡಾ ಪೋಡಿ, ದೊಂಗಾಟ, ಈಶ್ವರನ್ ಮುಂತಾದ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಸಿಂಬು ನಟನಾಗಿ ಮಾತ್ರವಲ್ಲ ಸಂಗೀತ ನಿರ್ದೇಶಕ, ಗಾಯಕ, ನಿರ್ಮಾಪಕ, ನಿರ್ದೇಶಕನಾಗಿ ಸಿಂಬು ಗುರುತಿಸಿಕೊಂಡಿದ್ದಾರೆ. ವೃತ್ತಿ ಜೀವನದ ಜೊತೆಗೆ ಸಿಂಬು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸದಾ ಚರ್ಚೆಯಲ್ಲಿದ್ದಾರೆ.
ಟಾಪ್ ಹೀರೋಯಿನ್ಸ್ ಜೊತೆ ಸಿಂಬು ಹೆಸರು ತಳುಕು
41 ಆದ್ರೂ ಸಿಂಗಲ್.. ನಯನತಾರಾ, ಹನ್ಸಿಕಾ ಮಿಂಗಲ್
41 ವರ್ಷ ವಯಸ್ಸಿನ ಸಿಂಬು ಈವರೆಗೂ ಅನೇಕ ಬಾರಿ ನಟಿಯರ ಜೊತೆ ಡೇಟಿಂಗ್.. ಲಿವಿಂಗ್ ರಿಲೇಶನ್ ಶಿಪ್ ವಿಚಾರವಾಗಿ ಗಾಸಿಪ್ ನಲ್ಲಿ ಸದ್ದು ಮಾಡಿದ್ದಾರೆ.ಒಂದ್ಕಾಲದಲ್ಲಿ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದ ಹನ್ಸಿಕಾ ಮೋಟ್ವಾನಿ ಜೊತೆಗೆ ಸಿಂಬು ಹೆಸರು ತಳುಕು ಹಾಕಿಕೊಂಡಿತ್ತು.ಇಬ್ಬರೂ ಟ್ವಿಟರ್‌ನಲ್ಲಿ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ಅವರ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. ಇದಾದ ನಂತರ ಲೇಡಿ ಸೂಪರ್ ಸ್ಟಾರ್ ನಯನತಾರಾ ಜೊತೆಗೂ ಸಿಂಬು ಡೇಟಿಂಗ್ ಮಾಡ್ತಿದ್ದಾರೆ ಎಂಬ ಗುಸುಗುಸು ಹಬ್ಬಿತ್ತು. ತ್ರಿಷಾ ಹಾಗೂ ಸಿಂಬು ಪರಸ್ಪರ ಪ್ರೀತಿಸುತ್ತಿದ್ದಾರಂತೆ ಎಂಬ ಅಂತೆ ಕಂತೆ ತಮಿಳು ಚಿತ್ರರಂಗದ ಮೂಲೆ ಮೂಲೆಯಲ್ಲೂ ಕೇಳಿಬಂದಿತ್ತು.
ಅಂದಹಾಗೆ ನಟಿ ನಯನತಾರಾ ಹಾಗೂ ಹನ್ಸಿಕಾ ಮೋಟ್ವಾನಿ ಜೊತೆ ಸಿಂಬು ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕ್ ಆಗಿತ್ತು. ಸಿಂಬು ಜೊತೆ ಸಿನಿಮಾದಲ್ಲಿ ರೋಮ್ಯಾನ್ಸ್ ಮಾಡಿದ್ದ ನಟಿಯರ ಕಾಂಬಿನೇಶನ್ ನ ಫ್ಯಾನ್ಸ್ ಇಷ್ಟ ಪಟ್ಟು ನೋಡ್ತಿದ್ರು. ಇಷ್ಟೇ ಅಲ್ಲದೆ ಸಿಂಬು ಅಲಿಯಾಸ್ ಸಿಲಂಬರಸನ್ ಶ್ರೀಲಂಕಾದ ಯಶಸ್ವಿ ಉದ್ಯಮಿಯೊಬ್ಬರ ಮಗಳಾಗಿರುವ ಮೆಡಿಕಲ್ ವಿದ್ಯಾರ್ಥಿನಿ ಜೊತೆ ಪ್ರೇಮದಲ್ಲಿ ಬಿದಿದ್ರು ಮದುವೆ ಆಗ್ತಾರೆ ಎಂಬ ಟಾಕ್ ಟಾಲಿವುಡ್ ನಲ್ಲಿ ಜೋರಾಗಿ ಹಬ್ಬಿತ್ತು.
ನಾನು ವರ್ಜಿನ್.. ಲವ್ ಅಷ್ಟೇ ಮಾಡಿದೀನಿ.. ಸೆಕ್ಸ್ ಮಾಡಿಲ್ಲ
ಲವ್, ಡೇಟಿಂಗ್, ಬ್ರೇಕಪ್ ಬಗ್ಗೆ ಸಿಂಬು ಫಿಲ್ಟರ್‌ಲೆಸ್ ಟಾಕ್
ಇಷ್ಟೆಲ್ಲ ಆದ್ಮೇಲೆ ಸಿಂಬು ಜೊತೆ ಬ್ರೇಕ್ ಅಪ್ ಮಾಡಿಕೊಂಡಿರೋ ನಟಿಯರೆಲ್ಲ ಈಗ ಮದುವೆ.. ಮಕ್ಕಳು ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ. ಆದ್ರೆ ಸಿಂಬು ಮಾತ್ರ 41ವಯಸ್ಸು ಆದ್ರೂ ಇನ್ನು ಸಿಂಗಲ್ ಆಗಿ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಸಿಂಬು ಕೊಟ್ಟಿರೋ ಅ ಒಂದು ಸ್ಟೇಟ್ಮೆಂಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಯೆಸ್, ನಾನಿನ್ನು ವರ್ಜಿನ್ ಎಂದು ಸಿಂಬು ಹೇಳಿಕೆ ಕೊಟ್ಟಿದ್ದಾರೆ. ನಿಮ್ಮ ಬಗ್ಗೆ ಗೊತ್ತಿರದ ಒಂದು ವಿಷಯ ಹೇಳಿ ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ ಸಿಂಬು ತಟ್ ಅಂತ ಹೇಳೋದೇ ನಾನು ವರ್ಜಿನ್. ಹೌದು, ಪ್ರೀತಿ.. ಪ್ರೇಮ.. ಡೇಟಿಂಗ್ ಮಾಡಿದೀನಿ ಹಾಗಂತ ಸೆಕ್ಸ್ ಮಾಡಿಲ್ಲ, ಹೆಣ್ಣಿನ ಪ್ರೀತಿಗೆ ಗೌರವ ಕೊಡ್ತೀನಿ ಎಂದು ಹೇಳಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕಮಲ್ ಹಾಸನ್ ಜೊತೆ ಥಗ್ ಲೈಫ್ ಚಿತ್ರದಲ್ಲಿ ಸಿಂಬು ಪಾತ್ರ ಎಂಜಾಯ್ ಮಾಡಿದ ಸಿನಿಪ್ರೇಕ್ಷಕರು, ಅವರಿಂದ ಇನ್ನಷ್ಟು ಎಕ್ಸ್‌ಪೆರಿಮೆಂಟ್ ಪಾತ್ರಗಳನ್ನು ನಿರೀಕ್ಷೆ ಮಾಡ್ತಿದ್ದಾರೆ. ಹಾಗೆ ಸಿಂಬು ಯಾವಾಗ ಕಮಿಟ್ ಆಗ್ತಾರೆ..? ಹೀಗೆ ಡೇಟಿಂಗ್ ಮಾಡ್ಕೊಂಡೇ ಇರ್ತಾರಾ..? ಮದುವೆ ಸಂಸಾರನೂ ಮಾಡ್ತಾರಾ ಅನ್ನೋ ಪ್ರಶ್ನೆಗಳು ಆಗಾಗ ಎದುರಾಗ್ತಿರುತ್ತೆ. ಏನೇ ಹೇಳಿ ಸಿಂಬು ವರ್ಜಿನ್ ಸ್ಟೇಟ್ಮೆಂಟ್ ಬಣ್ಣದ ಜಗತ್ತಿನಲ್ಲಿ ಸದ್ಯದ ಹಾಟ್ ಟಾಪಿಕ್ ಆಗಿದೆ.
ತಂದೆ ದೊಡ್ಡ ಪ್ರೊಡ್ಯೂಸರ್.. ದುಡ್ಡಿದೆ.. ನಾಯಕಿಯರು ಹೇರಳವಾಗಿ ಸಿಗ್ತಾರೆ ಅಂತ ಮನಸೋ ಇಚ್ಚೆ ಲೈಫ್ ಲೀಡ್ ಮಾಡೋಕೆ ಹೊರಟ ಸಿಂಬುಗೆ ಸದ್ಯ ತಕ್ಕ ಶಾಸ್ತಿ ಆಗಿದೆ. ಹಳೆಯ ಗರ್ಲ್‌ಫ್ರೆಂಡ್ಸ್ ಮದ್ವೆಗಳಾಗಿ ಹೋಗಿದ್ದಾರೆ. ಹೊಸಬರು ನಂಬೋಕೆ ಸಿದ್ದರಿಲ್ಲ. ಸಿನಿಮಾಗಳು ಕೂಡ ದೊಡ್ಡದಾಗಿ ಕೈ ಹಿಡಿಯುತ್ತಿಲ್ಲ. ಇದ್ರಿಂದ ದೊಡ್ಡ ನೀತಿ ಪಾಠವನ್ನೇ ಕಲಿತಿದ್ದಾರೆ ಸಿಂಬು.





