ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ ನಿನ್ನೆ ಕೋರ್ಟ್‌ಗೆ ಬಂದಿದ್ರು. ಅಲ್ಲಿ ತೆಗೆದ ಅವ್ರ ಫೋಟೋ ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಐದರಿಂದ ಏಳು ಕೆಜಿ ತೂಕ ಇಳಿಕೆ ಆಗಿದೆ ಎನ್ನಲಾಗಿತ್ತು. ಆದ್ರೆ ನಿಜಕ್ಕೂ ಇಳಿಕೆ ಆಗಿರೋದು ದರ್ಶನ್ ದೇಹದ ತೂಕನಾ ಅಥ್ವಾ ಅಹಂ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.
- ನಿಜಕ್ಕೂ ದರ್ಶನ್‌ಗೆ ಇಳಿದಿರೋದು ತೂಕನಾ? ಅಹಂಮ್ಮಾ?
- ಕೋರ್ಟ್ ಫೋಟೋ ವೈರಲ್.. ಎಲ್ಲೆಡೆ ಅನುಕಂಪದ ಅಲೆ
- ಕಳಾಹೀನನಾದ ಕಲೆಗಾರ.. ಕೊಲೆಗಾರನೆಂಬ ಅಪವಾದ..!
- ಬದಲಾವಣೆ ಜಗದ ನಿಯಮ.. ನಿಜಕ್ಕೂ ಬದಲಾದ್ರಾ ದಚ್ಚು?
ಆರಡಿ ಹೈಟು, ಕಟ್ಟುಮಸ್ತಾದ ದೇಹ, ಕೈಗೊಬ್ಬ-ಕಾಲಿಗೊಬ್ಬ ಆಳು, ಎಸಿ ಕಾರ್-ಕ್ಯಾರವಾನ್, ಐಷಾರಾಮಿ ಲೈಫು, ಸುತ್ತ ಗಜಪಡೆ, ಆರಾಧಿಸೋ ಅಸಂಖ್ಯಾತ ಅಭಿಮಾನಿ ಬಳಗ, ಗೌರವಿಸೋ ಕನ್ನಡಿಗರು.. ಇದೆಲ್ಲಾ ಒಂದು ಕಾಲದಲ್ಲಿ ದರ್ಶನ್ ಕಲೆಗೆ ಒಲಿದು ಬಂದಿತ್ತು. ಆದ್ರೀಗ ಕಾಲ ಬದಲಾಗಿದೆ. ಆ ಅದೃಷ್ಠ ದೇವತೆ ಶಾಪ ನಟ ದರ್ಶನ್‌ಗೆ ತಟ್ಟಿದಂತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ತಗ್ಲಾಕ್ಕೊಂಡು, ವಿಲ ವಿಲ ಒದ್ದಾಡುವಂತಾಗಿದೆ.
ನಾನು 70 ದಿನದ ಮೇಲೆ ಯಾವ ಡೈರೆಕ್ಟರ್‌ಗೂ ಡೇಟ್ಸ್ ಕೊಡಲ್ಲ ಅಂತಿರ್ತಾರೆ ನಟ ದರ್ಶನ್. ಆದ್ರೀಗ ಪರಪ್ಪನ ಅಗ್ರಹಾರ ಜೈಲಿಗೆ ಎರಡೆರಡು ಬಾರಿ 70 ದಿನಕ್ಕೂ ಅಧಿಕ ಡೇಟ್ಸ್ ಕೊಟ್ಟಾಗಿದೆ. ಹೌದು.. ಮೊದಲ ಬಾರಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದಾಗ 2024ರ ಜೂನ್ 11ರಿಂದ 2024ರ ಅಕ್ಟೋಬರ್ 30ರ ತನಕ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್ ಹಾಗೂ ಬಳ್ಳಾರಿ ಜೈಲಿನಲ್ಲಿ 100ಕ್ಕೂ ಅಧಿಕ ದಿನ ಕೈದಿಯಾಗಿದ್ರು ದಾಸ. ನಂತ್ರ ಮೆಡಿಕಲ್ ಬೇಲ್ ಪಡೆದು ಹೊರಬಂದು, ಡಿಸೆಂಬರ್ 2024ರಲ್ಲಿ ಹೈಕೋರ್ಟ್‌ನಿಂದ ರೆಗ್ಯುಲರ್ ಬೇಲ್ ಪಡೆದುಕೊಂಡ್ರು.
ಸುಪ್ರೀಂ ಕೋರ್ಟ್ ಮೊರೆ ಹೋದ ಪೊಲೀಸರು, ಬೇಲ್ ಕ್ಯಾನ್ಸಲ್ ಮಾಡುವಂತೆ ಅರ್ಜಿ ಸಲ್ಲಿಸಿದ್ರು. ಹಾಗಾಗಿ 8ರಿಂದ 9 ತಿಂಗಳು ಹೊರಗಿದ್ದು, ಡೆವಿಲ್ ಶೂಟಿಂಗ್ ಜೊತೆ ಮೋಜು, ಮಸ್ತಿ, ಪಾರ್ಟಿ, ಹಬ್ಬ, ಹರಿದಿನ ಮಾಡ್ತಿದ್ದ ದರ್ಶನ್‌ಗೆ ಸುಪ್ರೀಂ ಆಗಸ್ಟ್ 14ರಂದು ಶಾಕ್ ನೀಡಿತು. ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಪರಪ್ಪನ ಅಗ್ರಹಾರ ಸೇರಬೇಕಾಯ್ತು. ಸದ್ಯ ಈಗಲೂ ಯಶಸ್ವಿ 87 ದಿನ ಜೈಲಲ್ಲಿ ಪೂರೈಸಿದ್ದಾರೆ ದಚ್ಚು. ನಿನ್ನೆಯಷ್ಟೇ ಸೆಷನ್ಸ್ ಕೋರ್ಟ್‌ನಲ್ಲಿ ಚಾರ್ಜ್ ಫ್ರೇಮ್ ನಿಗದಿ ಆಗಿದೆ. ನೀವು ಕೊಲೆ ಮಾಡಿದ್ರಾ ಅಂತ ಕೇಳಿ ದೋಷಾರೋಪ ಪಟ್ಟಿ ಓದಿ ಹೇಳಿದ ಜಡ್ಜ್ ಬಳಿ, ಇಲ್ಲ ಸ್ವಾಮಿ ನಾವು ಕೊಲೆಗಾರರಲ್ಲ.. ಇದೆಲ್ಲಾ ಶುದ್ದ ಸುಳ್ಳು ಎಂದಿದ್ದಾರೆ ದರ್ಶನ್ ಅಂಡ್ ಗ್ಯಾಂಗ್. ಇದೇ ನವೆಂಬರ್ 10ಕ್ಕೆ ಟ್ರಯಲ್ ಡೇಟ್ ಕೂಡ ಫಿಕ್ಸ್ ಮಾಡಲಿದೆ ಕೋರ್ಟ್.
ಈಗ ಮ್ಯಾಟರ್ ಅದಲ್ಲ. ನಟ ದರ್ಶನ್ ನಿನ್ನೆ ಕೋರ್ಟ್‌ಗೆ ಹಾಜರಾದಾಗ ಕ್ಲಿಕ್ಕಿಸಿದ ಫೋಟೋಗಳು ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಅವರ ದೇಹದಲ್ಲಿ ಸುಮಾರು 5-7ಕೆಜಿ ತೂಕ ಸಹ ಇಳಿಕೆ ಆಗಿದೆ ಎನ್ನಲಾಗ್ತಿದೆ. ಆದ್ರೆ ಕೋರ್ಟ್‌ನಲ್ಲಿ ಬೆಂಚ್ ಮೇಲೆ ಕೂತಿರೋ ದರ್ಶನ್ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅನುಕಂಪದ ಅಲೆ ಎಬ್ಬಿಸಿದೆ. ಕಳಾಹೀನನಾಗಿರೋ ದರ್ಶನ್, ಪೇಲವ ಮುಖದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಕ್ತ ಆಹಾರ ಹಾಗೂ ಸೌಲಭ್ಯಗಳು ಸಿಗದೆ ಹೀಗಾಗಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ. ಜೊತೆಗೆ ಜೈಲು ಪಾಲಾದ ಹಿನ್ನೆಲೆ ಮಾನಸಿಕವಾಗಿಯೂ ಕುಗ್ಗಿ ಹೋಗಿರಬಹುದಾ..? ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರಬಹುದಾ..? ಈ ರೀತಿ ದರ್ಶನ್‌ರನ್ನ ನೋಡೋಕೆ ಆಗ್ತಿಲ್ಲ ಎನ್ನಲಾಗ್ತಿದೆ. ಅಷ್ಟಕ್ಕೂ ಇಷ್ಟೊಂದು ಅನುಕಂಪ ಯಾಕೆ ಅನ್ನೋದೇ ಯಕ್ಷ ಪ್ರಶ್ನೆ.
ಅಲ್ಲದೆ, ನಿಜಕ್ಕೂ ಇಳಿದಿರೋದು ದರ್ಶನ್ ದೇಹದ ತೂಕನಾ ಅಥ್ವಾ ಅವ್ರ ಅಹಮ್ಮಾ ಅನ್ನೋದನ್ನ ನೋಡಬೇಕಾಗುತ್ತೆ. ಯಾಕಂದ್ರೆ ಕೋರ್ಟ್, ಕಟ್ಟಲೆ ಇರೋದು ದುಷ್ಠರನ್ನ ಶಿಕ್ಷಿಸೋಕೆ. ಜೈಲಿನಲ್ಲಿ ಕೈದಿಯಂತೆ ಬಂಧಿಸಬಹುದು. ಆದ್ರೆ ಆತನಲ್ಲಿ ಬದಲಾವಣೆ ತರೋದು ಅದ್ರ ಮೂಲ ಉದ್ದೇಶ. ಈಗಲಾದ್ರೂ ನಟ ದರ್ಶನ್‌ರಲ್ಲಿ ಬದಲಾವಣೆ ಬಂದಿದೆಯಾ..? ಬಂದಿದ್ರೆ ಖಂಡಿತ ಒಳ್ಳೆಯದು. ಅವ್ರ ನಡೆ, ನುಡಿ, ಆಚಾರ, ಸಂಸ್ಕಾರದಲ್ಲಿ ಮಹತ್ವದ ಬದಲಾವಣೆ ಆಗಲಿ. ಇಲ್ಲ ಅಂದ್ರೆ.. ಅದೇ ನಾಯಿ ಬಾಲ ಡೊಂಕು ಅನ್ನುವಂತೆ ಅದೇ ರಾಗ ಅದೇ ತಾಳ ಆಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





