ಬೆಳ್ಳಿತೆರೆ ಬೆಳಗಲಿದೆ ಭಾರತರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಜೀವನಗಾಥೆ. ಯೆಸ್.. ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಲಾಂ ಹೆಸರಿನಲ್ಲಿ ಚಿತ್ರದ ಫಸ್ಟ್‌ಲುಕ್ ಲಾಂಚ್ ಆಗಿದೆ. ಹಾಗಾದ್ರೆ ಅವ್ರ ಬಯೋಪಿಕ್‌ನ ತೆರೆಗೆ ತರೋ ಪ್ರಯತ್ನ ಮಾಡಿರೋದು ಯಾರು..? ಯಾರಾಗ್ತಾರೆ ಕಲಾಂ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ.
- ‘ಕಲಾಂ’ ಬಯೋಪಿಕ್‌ನಲ್ಲಿ ಧನುಷ್.. ಫಸ್ಟ್‌ಲುಕ್ ಔಟ್..!
- ಭಾರತದ ಖ್ಯಾತ ಏರೋಸ್ಪೇಸ್ ಸೈಂಟಿಸ್ಟ್ ಕಮ್ ರಾಷ್ಟ್ರಪತಿ
- ಭಾರತರತ್ನ ‘ಕಲಾಂ’ಗೆ ತಾನ್ಹಾಜಿ ಡೈರೆಕ್ಟರ್ ಆ್ಯಕ್ಷನ್ ಕಟ್..!
- APJ ಅಬ್ದುಲ್ ಕಲಾಂ ಬರೀ ವ್ಯಕ್ತಿಯಲ್ಲ.. ಅದೊಂದು ಶಕ್ತಿ
ಬಯೋಪಿಕ್ ಸಿನಿಮಾಗಳಿಂದ ಗ್ರೇಟೆಸ್ಟ್ ಪರ್ಸನಾಲಿಟಿಗಳ ಸಾಧನೆಗಳು ಬೆಳ್ಳಿತೆರೆಯ ಮೂಲಕ ಸಿನಿಮ್ಯಾಟಿಕ್ ರೂಪ ಪಡೆದು, ಮತ್ತಷ್ಟು ಮಂದಿಯನ್ನ ಸ್ಫೂರ್ತಿಗೊಳಿಸಬಲ್ಲವು. ಅದೇ ಕಾರಣದಿಂದ ಸಾಕಷ್ಟು ಮಂದಿ ಸಾಧಕರ ಜೀವನಗಾಥೆಗಳು ಬೆಳ್ಳಿಪರದೆ ಬೆಳಗಿವೆ. ಸದ್ಯ ಭಾರತರತ್ನ ಎಪಿಜೆ ಅಬ್ದುಲ್ ಕಲಾಂ ಲೈಫ್ ಸ್ಟೋರಿ ಸಿನಿಮಾ ಆಗ್ತಿದೆ. ಅದ್ರ ಫಸ್ಟ್ ಲುಕ್ ಜೊತೆ ಒಂದಷ್ಟು ವಿಷಯಗಳು ಕೂಡ ರಿವೀಲ್ ಆಗಿರೋದು ಇಂಟರೆಸ್ಟಿಂಗ್.
ಹೌದು.. ಪ್ರಸಿದ್ಧ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಲಾಂ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಬಾಲಿವುಡ್‌ನ ಪ್ರತಿಷ್ಠಿತ ಪ್ರೊಡಕ್ಷನ್ ಕಂಪೆನಿ ಆದಂತಹ ಟಿ ಸೀರೀಸ್‌ನ ಅಭಿಷೇಕ್ ಅಗರ್ವಾಲ್ ಹಾಗೂ ಭೂಷಣ್ ಕುಮಾರ್ ಕಲಾಂ ಸಿನಿಮಾನ ನಿರ್ಮಾಣ ಮಾಡ್ತಿದ್ದು, ಬಾಲಿವುಡ್ ಖ್ಯಾತ ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಹಿಂದೆ ತಾನ್ಹಾಜಿ ಅನ್ನೋ ಐತಿಹಾಸಿಕ ಹಾಗೂ ಆದಿಪುರುಷ್ ಸಿನಿಮಾಗಳನ್ನ ನಿರ್ದೇಶಿಸಿದ್ದ ಓಂ ರಾವತ್, ಈಗ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಕೈ ಹಾಕಿದ್ದಾರೆ.
ಇಷ್ಟಕ್ಕೂ ಅಬ್ದುಲ್ ಕಲಾಂ ಪಾತ್ರಕ್ಕೆ ಯಾರು ಜೀವ ತುಂಬಲಿದ್ದಾರೆ ಅನ್ನೋದಕ್ಕೆ ಉತ್ತರ ತಮಿಳು ನಟ ಧನುಷ್. ಹೌದು.. ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್‌ರ ಮಾಜಿ ಅಳಿಯ ಧನುಷ್ ಕಲಾಂ ಪಾತ್ರದಲ್ಲಿ ಕಾಣಸಿಗಲಿದ್ದಾರೆ., ಸದಾ ಹೊಸತನಕ್ಕೆ ಹಾತೊರೆಯುವ ಧನುಷ್, ಈ ಬಾರಿ ಇಡೀ ವಿಶ್ವ ನೆನಪಿಟ್ಟುಕೊಳ್ಳಬೇಕಾದಂತಹ ಅಪ್ರತಿಮ ವ್ಯಕ್ತಿಯ ಪಾತ್ರವನ್ನು ಪೋಷಿಸಲು ಸಜ್ಜಾಗಿದ್ದಾರೆ.
ಆಪರೇಷನ್ ಸಿಂದೂರ್ ಬಳಿಕ ಅಬ್ದುಲ್ ಕಲಾಂ ಬಯೋಪಿಕ್‌ಗೆ ಚಾಲನೆ ಸಿಗ್ತಿರೋದು ಇಂಟರೆಸ್ಟಿಂಗ್. ಹೌದು.. ಕಲಾಂ ಬರೀ ವ್ಯಕ್ತಿಯಿಲ್ಲ. ಭಾರತದ ಅತಿದೊಡ್ಡ ಶಕ್ತಿ. ತಮಿಳುನಾಡಿನ ರಾಮೇಶ್ವರಂನಲ್ಲಿ ಹುಟ್ಟಿ, ಬೆಳೆದ ಒಬ್ಬ ಸಾಮಾನ್ಯ ಪೇಪರ್ ಬಾಯ್, ಭಾರತದ ಅಸಾಮಾನ್ಯ ಏರೋಸ್ಪೇಸ್ ಸೈಂಟಿಸ್ಟ್ ಆಗಿ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಆಗ್ತಾರೆ. ಮದ್ವೆ ಕೂಡ ಆಗದೆ, ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿ ಇಡ್ತಾರೆ. ನಂತರ 2002ರಿಂದ 2007ರ ತನಕ ಭಾರತದ ರಾಷ್ಟ್ರಪತಿಗಳಾಗಿಯೂ ಕಾರ್ಯ ನಿರ್ವಹಿಸುತ್ತಾರೆ.
ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತರತ್ನ ಗೌರವಗಳಿಗೂ ಭಾಜನರಾಗಿರೋ ಕಲಾಂ, ಮ್ಯಾನ್ ಆಫ್ ಮಿಸೈಲ್. ಶಾಲಾ ಮಕ್ಕಳಿಗೆ ಕಲಾಂ ಅಂದ್ರೆ ಅಚ್ಚುಮೆಚ್ಚು. ಪಕ್ಷಾತೀತವಾಗಿ ಇವರನ್ನ ಎಲ್ಲರೂ ಇಷ್ಟ ಪಡ್ತಾರೆ. ಅಂಥದ್ದೊಂದು ವ್ಯಕ್ತಿತ್ವ ರೂಢಿಸಿಕೊಂಡಿದ್ರು ಕಲಾಂ. ಇವರ ಜೀವನಗಾಥೆ ಸಿನಿಮಾ ಆಗ್ತಿರೋದು, ಅದನ್ನ ಧನುಷ್ ಮಾಡ್ತಿರೋದು ನಿಜಕ್ಕೂ ಇಂಪ್ರೆಸ್ಸೀವ್. ಶೂಟಿಂಗ್ ಆದಷ್ಟು ಬೇಗ ಶುರುವಾಗಲಿದ್ದು, ಸದ್ಯದಲ್ಲೇ ಟೀಂ ಅಪ್ಡೇಟ್ಸ್ ನೀಡಲಿದೆಯಂತೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್