ಒಂದಲ್ಲ ಎರಡೆರಡು ರಿಲೇಷನ್‌ಶಿಪ್‌ಗಳನ್ನ ಇಟ್ಕೊಂಡು, ಫ್ಯಾಮಿಲಿ ಮೆಂಟೇನ್ ಮಾಡಿದಷ್ಟು ಈಸಿ ಅಲ್ಲ ಭಾರತೀಯರನ್ನ ಮ್ಯಾನೇಜ್ ಮಾಡೋದು ಅನ್ನೋದು ಆಮೀರ್ ಖಾನ್‌ಗೆ ಸ್ಪಷ್ಟವಾಗಿ ಗೊತ್ತಾದಂತಿದೆ. ಹಾಗಾಗಿಯೇ ಹಂಡ್ರೆಡ್ ಪರ್ಸೆಂಟ್ ಗಿಮಿಕ್‌ಗಳನ್ನ ಮಾಡೋಕೆ ಶುರು ಮಾಡಿದ್ದಾರೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್. ಇಷ್ಟಕ್ಕೂ ಅವ್ರು ಏನ್ ಮಾಡಿದ್ರು ಅಂತೀರಾ..? ಜಸ್ಟ್ ವಾಚ್.
- ಆಮೀರ್ ಖಾನ್ 100% ಗಿಮಿಕ್.. ಪ್ರೊಡಕ್ಷನ್‌ನಲ್ಲಿ ರಾಷ್ಟ್ರಧ್ವಜ
- ಆಗ ಮೌನವ್ರತ.. ಈಗ ಪೋಸ್ಟ್ ಮೇಲೆ ಪೋಸ್ಟ್ ಉದ್ದೇಶವೇನು ?
- ರಿಲೀಸ್‌ಗೆ ಕೌಂಟ್‌ಡೌನ್.. ಆಮೀರ್ ಎದೆಯಲ್ಲಿ ಢವ ಢವ
- ಆಗಿಲ್ಲದ ದೇಶಪ್ರೇಮ.. ಈಗ ಉಕ್ಕಿ ಹರಿಯುತಿಹುದು ನೋಡ
ಲಾಲ್ ಸಿಂಗ್ ಚಡ್ಡಾ ಸಿನಿಮಾ ತೆರೆಕಂಡು ಮೂರು ವರ್ಷಗಳಾಯ್ತು. ಆಮೀರ್ ಖಾನ್ ಬಿಗ್ ಸ್ಕ್ರೀನ್‌ಗೆ ದರ್ಶನ ಕೊಟ್ಟು ಸಹ ಮೂರು ವರ್ಷಗಳಾಗ್ತಿದೆ. ಇದೀಗ ಒಂದು ದೊಡ್ಡ ಗ್ಯಾಪ್ ನಂತ್ರ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿರೋ ಮಿಸ್ಟರ್ ಪರ್ಫೆಕ್ಷನಿಸ್ಟ್‌ಗೆ ದುರಾದೃಷ್ಠ ಎದುರಾಗಿದೆ. ಎದುರಾಗುವಂತಹ ಪರಿಸ್ಥಿತಿಯನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ.
ಹೌದು.. ಸಿತಾರೆ ಜಮೀನ್ ಪರ್ ಸಿನಿಮಾ ಇದೇ ಜೂನ್ 20ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ಇದರಲ್ಲಿ ಆಮೀರ್ ಬಹಳ ದಿನಗಳ ನಂತ್ರ ನಟಿಸೋದ್ರ ಜೊತೆಗೆ ಬಂಡವಾಳ ಕೂಡ ಹೂಡಿ, ತಮ್ಮ ಹೋಮ್ ಬ್ಯಾನರ್‌ನಡಿ ತಾವೇ ಪ್ರೊಡ್ಯೂಸ್ ಮಾಡಿದ್ದಾರೆ. ಕಂಟೆಂಟ್, ಮೇಕಿಂಗ್ ಕೂಡ ಇಂಪ್ರೆಸ್ಸೀವ್ ಆಗಿದೆ. ಆಮೀರ್ ಹಾನೆಸ್ಟ್ ಎಫರ್ಟ್ಸ್ ಎದ್ದು ಕಾಣ್ತಿದೆ. ಆದ್ರೆ ಆತನ ಟೈಮೇ ಉಲ್ಟಾ ಪಲ್ಟಾ ಆಗಿದೆ.
ಭಾರತೀಯ ಪ್ರೇಕ್ಷಕರನ್ನ ಮ್ಯಾನೇಜ್ ಮಾಡೋದು, ಫ್ಯಾಮಿಲಿ ಲೈಫ್‌ನ ಮ್ಯಾನೇಜ್ ಮಾಡಿದಷ್ಟು ಈಸಿ ಇಲ್ಲ ಅನ್ನೋದು ಆಮೀರ್ ಖಾನ್‌ಗೆ ಮನದಟ್ಟಾಗಿದೆ. ಕಾರಣ, ಆತನ ನಡವಳಿಕೆ, ಹೇಳಿಕೆಗಳು ಹಾಗೂ ಮಾತನಾಡಬೇಕಾದ ಸಮಯದಲ್ಲಿ ಮೌನ ತಾಳಿರೋದು. ಯೆಸ್.. ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಅಟ್ಯಾಕ್ ಆಯ್ತು. ಅದಕ್ಕೆ ಆಪರೇಷನ್ ಸಿಂದೂರ್ ಹೆಸರಲ್ಲಿ ಉಗ್ರರ ಮೇಲೆ ನಮ್ಮ ಸೇನೆ ಕೂಡ ಪ್ರತಿದಾಳಿ ನಡೆಸಿತು. ಆದ್ರೆ ಈ ಬಗ್ಗೆ ಆಮೀರ್ ಕಡೆಯಿಂದ ಒಂದು ರಿಯಾಕ್ಷನ್ ಇಲ್ಲ.
ಯಾವಾಗ ಯುದ್ಧ ವಿರಾಮ ಅನೌನ್ಸ್ ಆಯ್ತೋ ಆಗ ತೋರ್ಪಡಿಕೆಗೆ ಒಂದು ಪೋಸ್ಟ್ ಹಾಕಿ ಕೈ ತೊಳೆದುಕೊಂಡಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಡವ್ ಮಾಡಿದ್ದ ಆಮೀರ್ ಬಗ್ಗೆ ನೆಟ್ಟಿಗರು ಸೇರಿದಂತೆ ಅವ್ರ ಅಭಿಮಾನಿಗಳು ಹಾಗೂ ಭಾರತೀಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ರು. ಇದೀಗ ಸಿತಾರೆ ಜಮೀನ್ ಪರ್ ಸಿನಿಮಾದ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಗಿಮಿಕ್ಸ್ ಮಾಡೋಕೆ ಮುಂದಾಗಿದ್ದಾರೆ ಆಮೀರ್.
ತಮ್ಮ ಆಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಪೇಜ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಫೋಟೋನ ಬದಲಿಸಿ, ನಮ್ಮ ರಾಷ್ಟ್ರಧ್ವಜವನ್ನು ಹಾಕಿದ್ದಾರೆ. ಅಷ್ಟೇ ಅಲ್ಲ, ಆಪರೇಷನ್ ಸಿಂದೂರ್ ನಡೆಸಿದ ಸೇನೆ ಹಾಗೂ ಅದನ್ನ ಜಾರಿಗೊಳಿಸಿದಂತಹ ಭಾರತದ ಸರ್ಕಾರವನ್ನೂ ಮೆಚ್ಚಿ ತಮ್ಮ ಪ್ರೊಡಕ್ಷನ್ ಪೇಜ್‌ನಿಂದ ಸ್ಪೆಷಲ್ ಪೋಸ್ಟ್ ಹಾಕಲಾಗಿದೆ. ಇದೆಲ್ಲಾ ಜನರನ್ನ ಮರಳು ಮಾಡೋ ಚೀಪ್ ಗಿಮಿಕ್ಸ್ ಅಲ್ಲದೆ ಮತ್ತೇನು ಅಲ್ಲವೇ..? ಆದ್ರೆ ನಮ್ಮ ಪ್ರಜ್ಞಾವಂತ ಚಿತ್ರ ಪ್ರೇಮಿಗಳು ಸಿನಿಮಾನ ಬಹುಷ್ಕರಿಸೋ ಮೂಲಕ ಬಾಕ್ಸ್ ಆಫೀಸ್ ಮೂಲಕ ಉತ್ತರ ಕೊಡ್ತಾರಾ ಅನ್ನೋದು ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್