ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಕೇವಲ ಆಭರಣಗಳಲ್ಲ, ಅವು ಆರ್ಥಿಕ ಭದ್ರತೆಯ ಸಂಕೇತಗಳೂ ಹೌದು. ಇತ್ತೀಚಿನ ದಿನಗಳಲ್ಲಿ ಇವುಗಳ ಬೆಲೆ ಗಗನಕ್ಕೇರುತ್ತಿರುವುದಕ್ಕೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹತ್ತಾರು ಕಾರಣಗಳಿವೆ.
ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳು:
1. ಟ್ರಂಪ್ ಹುಚ್ಚಾಟದ ಎಫೆಕ್ಟ್:
ಮಧ್ಯಪ್ರಾಚ್ಯದ ಸಂಘರ್ಷಗಳು ಮತ್ತು ಉಕ್ರೇನ್-ರಷ್ಯಾ ನಡುವಿನ ಸುದೀರ್ಘ ಯುದ್ಧವು ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಮೂಡಿಸಿದೆ. ಇಂತಹ ಸಮಯದಲ್ಲಿ ಹೂಡಿಕೆದಾರರು ಷೇರು ಮಾರುಕಟ್ಟೆಗಿಂತ ಸುರಕ್ಷಿತ ಹೂಡಿಕೆಯಾದ ಚಿನ್ನದ ಕಡೆಗೆ ಜನರು ಮುಖ ಮಾಡಿದ್ದಾರೆ.
2. ಡಾಲರ್ ಮೌಲ್ಯ ಮತ್ತು ರೂಪಾಯಿ ಕುಸಿತ:
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮೌಲ್ಯ ಹೆಚ್ಚಾಗುತ್ತಿದ್ದು, ಅದರ ಪ್ರತಿಯಾಗಿ ಭಾರತೀಯ ರೂಪಾಯಿಯ ಮೌಲ್ಯ ಕುಸಿಯುತ್ತಿದೆ. ಭಾರತವು ತನ್ನ ಚಿನ್ನದ ಅಗತ್ಯದ ಬಹುಪಾಲನ್ನು ಆಮದು ಮಾಡಿಕೊಳ್ಳುವುದರಿಂದ, ರೂಪಾಯಿ ಕುಸಿತವು ಆಮದು ವೆಚ್ಚವನ್ನು ಹೆಚ್ಚಿಸಿ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.
3. ಕೇಂದ್ರೀಯ ಬ್ಯಾಂಕುಗಳ ಚಿನ್ನದ ಸಂಗ್ರಹ:
ಭಾರತದ ಆರ್‌ಬಿಐ (RBI) ಸೇರಿದಂತೆ ವಿಶ್ವದ ಅನೇಕ ದೇಶಗಳ ಕೇಂದ್ರೀಯ ಬ್ಯಾಂಕುಗಳು ತಮ್ಮ ಮೀಸಲು ನಿಧಿಯಲ್ಲಿ ಚಿನ್ನದ ಪ್ರಮಾಣವನ್ನು ಹೆಚ್ಚಿಸುತ್ತಿವೆ.
4. ಹಬ್ಬ ಮತ್ತು ವಿವಾಹದ ಸೀಸನ್:
ಭಾರತದಲ್ಲಿ ದಸರಾ, ದೀಪಾವಳಿ ಮತ್ತು ಸಾಲು ಸಾಲು ಮದುವೆಗಳ ಸೀಸನ್ ಇರುವುದರಿಂದ ಚಿನ್ನಕ್ಕೆ ಅತಿ ಹೆಚ್ಚು ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಬೆಲೆ ಕೂಡ ಏರಿಕೆಯಾಗುತ್ತದೆ.
ಬೆಳ್ಳಿಯ ಬೆಲೆ ಏರಿಕೆಗೆ ಕಾರಣಗಳೇನು?
ಚಿನ್ನ ಹೆಚ್ಚಾದಂತೆ ಬೆಳ್ಳಿ ಬೆಲೆಯೂ ತೀರಾ ಹೆಚ್ಚಾಗುತ್ತಾ ಬಂದಿದೆ. ದಿನದಿಂದ ದಿನಕ್ಕೆ ಬೆಳ್ಳಿ ಬೆಲೆಯೂ ಚಿನ್ನದ ಬೆಲೆಗೇ ಸಮವಾಗುತ್ತಿದೆ. ಬೆಳ್ಳಿಯು ಕೇವಲ ಆಭರಣಕ್ಕೆ ಸೀಮಿತವಾಗಿಲ್ಲ, ಇದು ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. ಬೆಳ್ಳಿ ಬೆಲೆ ಹೆಚ್ಚಾಹಲು ಪ್ರಮುಕ ಕಾರಣಗಲನ್ನ ನೋಡುವುದಾದರೆ, ಸೋಲಾರ್ ಪ್ಯಾನಲ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳ (EV) ತಯಾರಿಕೆಯಲ್ಲಿ ಬೆಳ್ಳಿಯನ್ನು ವಿದ್ಯುತ್ ವಾಹಕವಾಗಿ ಅತಿ ಹೆಚ್ಚಾಗಿ ಬಳಸಲಾಗುತ್ತಿದೆ. ಗ್ರೀನ್ ಎನರ್ಜಿಗೆ ವಿಶ್ವದಾದ್ಯಂತ ಪ್ರಾಮುಖ್ಯತೆ ಸಿಗುತ್ತಿರುವುದು ಬೆಳ್ಳಿಯ ಬೇಡಿಕೆಯನ್ನು ಹೆಚ್ಚಿಸಿದೆ.
ಅದರೊಟ್ಟಿಗೆ ಚಿನ್ನದ ಬೆಲೆ ಸಾಮಾನ್ಯ ಜನರ ಕೈಗೆಟುಕದ ಮಟ್ಟಕ್ಕೆ ಹೋದಾಗ, ಗ್ರಾಹಕರು ಬೆಳ್ಳಿಯ ಕಡೆಗೆ ತಿರುಗುತ್ತಿದ್ದಾರೆ. ಇದರಿಂದಾಗಿ ಬೆಳ್ಳಿಯ ಮಾರುಕಟ್ಟೆಯೂ ಬಿಸಿಯಾಗಿದೆ. ಜಾಗತಿಕ ವಿದ್ಯಮಾನಗಳು ಮತ್ತು ಕೈಗಾರಿಕಾ ಬೇಡಿಕೆಗಳು ಚಿನ್ನ ಹಾಗೂ ಬೆಳ್ಳಿ ದರ ಹೆಚ್ಚಾಗುವಂತೆ ಮಾಡಿವೆ. ಇದರಿಂದ ಆಭರಣ ಪ್ರಿಯರೂ ಕೊಂಚ ಅಸಮಾಧಾನಗೊಂಡಿದ್ದಾರೆ.





