ಭಾರತೀಯರಿಗೆ ಚಿನ್ನ ಎಂದರೆ ಕೇವಲ ಆಭರಣವಲ್ಲ. ಅದು ಸಂಸ್ಕೃತಿ, ಗೌರವ ಮತ್ತು ಭದ್ರತೆಯ ಸಂಕೇತ. ಹಬ್ಬಗಳು, ಮದುವೆಗಳು, ಹಾಗೂ ಶುಭಸಮಾರಂಭಗಳಲ್ಲಿ ಚಿನ್ನದ ಖರೀದಿ ಕಡ್ಡಾಯ ಎನ್ನುವ ನಂಬಿಕೆಯಿದೆ. ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಡೆದ ಅನಿಶ್ಚಿತತೆಗಳು, ಡಾಲರ್ ಮೌಲ್ಯದ ಬದಲಾವಣೆ, ಯುದ್ಧ ಪರಿಸ್ಥಿತಿಗಳು ಮತ್ತು ಚಿನ್ನದ ಪೂರೈಕೆ ಹಾಗೂ ಬೇಡಿಕೆಯ ವ್ಯತ್ಯಾಸಗಳಿಂದಾಗಿ ದರಗಳು ಏರಿಳಿಕೆಗೆ ಒಳಪಟ್ಟಿವೆ. ಆದರೆ ದೀಪಾವಳಿ ನಂತರ ಈಗ ಚಿನ್ನದ ಮಾರುಕಟ್ಟೆ ಸ್ವಲ್ಪ ಶಾಂತವಾಗಿದೆ.
ಬೇಡಿಕೆ ಮತ್ತು ಹಣದುಬ್ಬರದಿಂದಾಗಿ ಭಾರತದಲ್ಲಿ ಚಿನ್ನದ ಬೆಲೆಗಳು ಸದ್ಯಕ್ಕೆ ಸ್ವಲ್ಪ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. 18, 22 ಮತ್ತು 24 ಕ್ಯಾರೆಟ್ ಚಿನ್ನದ ಮೌಲ್ಯವು ನಿನ್ನೆಯ 1 ಗ್ರಾಂ ಚಿನ್ನದ ಬೆಲೆಗಿಂತ ಇಳಿಕೆಯನ್ನು ತೋರಿಸಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ (ನವೆಂಬರ್ 9) ಚಿನ್ನದ ದರಗಳು (ಪ್ರತಿ ಗ್ರಾಂ)
| ನಗರ | 24 ಕ್ಯಾರೆಟ್ (₹) | 22 ಕ್ಯಾರೆಟ್ (₹) | 18 ಕ್ಯಾರೆಟ್ (₹) |
|---|---|---|---|
| ಚೆನ್ನೈ | 12,328 | 11,300 | 9,425 |
| ಮುಂಬೈ | 12,202 | 11,185 | 9,152 |
| ದೆಹಲಿ | 12,217 | 11,200 | 9,167 |
| ಕೋಲ್ಕತ್ತಾ | 12,202 | 11,185 | 9,152 |
| ಬೆಂಗಳೂರು | 12,202 | 11,185 | 9,152 |
| ಹೈದರಾಬಾದ್ | 12,202 | 11,185 | 9,152 |
| ಕೇರಳ | 12,202 | 11,185 | 9,152 |
| ಪುಣೆ | 12,202 | 11,185 | 9,152 |
| ವಡೋದರಾ | 12,207 | 11,190 | 9,157 |
| ಅಹಮದಾಬಾದ್ | 12,207 | 11,190 | 9,157 |
ದೀಪಾವಳಿ ನಂತರದ ಈ ಶಾಂತ ಮಾರುಕಟ್ಟೆ ಚಿನ್ನದ ಖರೀದಿಗೆ ಅತ್ಯುತ್ತಮ ಸಮಯ. ಹೀಗಾಗಿ, ಮುಂದಿನ ಕೆಲವು ವಾರಗಳಲ್ಲಿ ದರಗಳಲ್ಲಿ ಮತ್ತೆ ಏರಿಕೆ ಸಾಧ್ಯತೆಯಿದ್ದರೂ, ಪ್ರಸ್ತುತ ಪರಿಸ್ಥಿತಿ ಖರೀದಿದಾರರಿಗೆ ಅನೂಕೂಲವಾಗಿದೆ.





