ಇಂಧನಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೀವನಕ್ಕೆ ನೇರ ಪರಿಣಾಮ ಬೀರುತ್ತಿದೆ. ಕೃಷಿ, ಕೈಗಾರಿಕೆ, ಸಾರಿಗೆ, ವಾಣಿಜ್ಯ ಎಲ್ಲ ಕ್ಷೇತ್ರಗಳಿಗೂ ಪೆಟ್ರೋಲ್ ಹಾಗೂ ಡೀಸೆಲ್ ಮುಖ್ಯವಾಗಿದೆ. ಭಾರತವು ತನ್ನ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದ ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ತೈಲ ಸಂಸ್ಕರಣೆ ಪ್ರಕ್ರಿಯೆಯು ದುಬಾರಿ ಆಗಿರುವುದರಿಂದ, ವಿಶ್ವದ ತೈಲ ಮಾರುಕಟ್ಟೆಯ ಬದಲಾವಣೆಗಳು ಭಾರತೀಯ ಇಂಧನ ದರಗಳ ಮೇಲೆ ಪರಿಣಾಮ ಬೀರುತ್ತವೆ.
2017ರಿಂದ ಭಾರತದಲ್ಲಿ ಡೈನಾಮಿಕ್ ಫ್ಯುಯೆಲ್ ಪ್ರೈಸಿಂಗ್ ಸಿಸ್ಟಮ್ ಜಾರಿಯಾಗಿದೆ. ಇದರ ಅಡಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೊಸ ದರಗಳನ್ನು ಪರಿಷ್ಕರಿಸಲಾಗುತ್ತದೆ. ಇದಕ್ಕಿಂತ ಮುಂಚೆ ಪ್ರತಿ 15 ದಿನಕ್ಕೊಮ್ಮೆ ಮಾತ್ರ ದರ ತಿದ್ದುಪಡಿ ಮಾಡಲಾಗುತ್ತಿತ್ತು.
ಮಹಾನಗರಗಳ ಇಂದಿನ ತೈಲ ದರ (ನವೆಂಬರ್ 11, 2025)
ದೆಹಲಿ- ಪೆಟ್ರೋಲ್ ರೂ. 94.77, ಡೀಸೆಲ್ ರೂ. 87.67
ಬೆಂಗಳೂರು – ಪೆಟ್ರೋಲ್ ರೂ. 102.92, ಡೀಸೆಲ್ ರೂ. 90.99.
ಮುಂಬೈ- ಪೆಟ್ರೋಲ್ ರೂ. 103.50, ಡೀಸೆಲ್ ರೂ. 90.03,
ಚೆನ್ನೈ- ಪೆಟ್ರೋಲ್ ರೂ. 100.80, ಡೀಸೆಲ್ ರೂ. 92.39,
ಕೊಲ್ಕತ್ತಾ- ಪೆಟ್ರೋಲ್ ರೂ. 105.41, ಡೀಸೆಲ್ ರೂ. 92.02
ಮಹಾನಗರಗಳ ಜೊತೆಗೆ ಕರ್ನಾಟಕದ ಜಿಲ್ಲೆಗಳಲ್ಲಿಯೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಕೆಲವೆಡೆ ದರ ಇಳಿಕೆ ಕಂಡುಬಂದರೆ, ಕೆಲವೆಡೆ ಪೈಸೆ ಮಟ್ಟದಲ್ಲಿ ಏರಿಕೆ ದಾಖಲಾಗಿದೆ.
ಕರ್ನಾಟಕದ ಜಿಲ್ಲೆಗಳ ಇಂದಿನ ಪೆಟ್ರೋಲ್ ದರ (ರೂ. / ಲೀಟರ್)
ಬಾಗಲಕೋಟೆ – 103.33
ಬೆಂಗಳೂರು – 102.92
ಬೆಳಗಾವಿ – 103.33
ಬಳ್ಳಾರಿ – 104.09
ಬೀದರ್ – 104.08
ವಿಜಯಪುರ – 103.57
ಚಿಕ್ಕಮಗಳೂರು – 103.88
ಧಾರವಾಡ – 102.81
ಮೈಸೂರು – 102.46
ಹಾಸನ – 103.08
ತುಮಕೂರು – 103.64
ಉಡುಪಿ – 102.90
ವಿಜಯನಗರ – 104.09
ಯಾದಗಿರಿ – 103.80
ಈ ಜಿಲ್ಲೆಗಳಲ್ಲಿ ದರಗಳ ವ್ಯತ್ಯಾಸ ಕಂಡುಬಂದಿದೆ. ಕೆಲ ಜಿಲ್ಲೆಗಳಲ್ಲಿ 10 ರಿಂದ 50 ಪೈಸೆಯ ಮಟ್ಟದ ಏರಿಕೆ ಅಥವಾ ಇಳಿಕೆ ದಾಖಲಾಗಿದೆ.
ಡೀಸೆಲ್ ದರಗಳ ಚಿತ್ರಣ (ರೂ. / ಲೀಟರ್)
ಬಾಗಲಕೋಟೆ – 91.39
ಬೆಂಗಳೂರು – 90.99
ಬೀದರ್ – 92.22
ಬಳ್ಳಾರಿ – 92.18
ದಕ್ಷಿಣ ಕನ್ನಡ – 90.26
ಮೈಸೂರು – 90.57
ವಿಜಯನಗರ – 92.23
ತುಮಕೂರು – 91.66
ಉಡುಪಿ – 90.93
ಧಾರವಾಡ – 90.91
ಹಾವೇರಿ – 91.54
ಇಂಧನ ದರಗಳು ನಿತ್ಯ ಬದಲಾಗುವ ಹಿನ್ನೆಲೆಯಲ್ಲಿ, ವಾಹನ ಸವಾರರು ತಮ್ಮ ಸ್ಥಳೀಯ ದರಗಳನ್ನು ಪ್ರತಿದಿನ ಪರಿಶೀಲಿಸುವುದು ಸೂಕ್ತ. ಅಧಿಕೃತ ತೈಲ ಕಂಪನಿಗಳ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗಳ ಮೂಲಕ ಈ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು.




