ಬೆಂಗಳೂರು, ಏಪ್ರಿಲ್ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿವೆ.. ನಿನ್ನೆ ಸುಮಾರು 500 ರೂಪಾಯಿಗಳಷ್ಟು ಏರಿದ್ದ ಚಿನ್ನದ ಬೆಲೆ ಇವತ್ತು (ಗುರುವಾರ) 215 ರೂಪಾಯಿಗಳಷ್ಟು ಕುಸಿತ ಕಂಡಿದೆ. ಆಭರಣ ಚಿನ್ನದ ಬೆಲೆ ಮತ್ತೆ 14,000 ರೂಪಾಯಿ ಗಡಿಯೊಳಗೆ ಇಳಿದಿದೆ. ಬೆಳ್ಳಿ ಬೆಲೆಯೂ ಇಂದು ಕಡಿಮೆಯಾಗಿದ್ದು, ನಿನ್ನೆ 10 ರೂಪಾಯಿ ಇಳಿದಿದ್ದ ಇದರ ಬೆಲೆ ಇವತ್ತು 5 ರೂಪಾಯಿ ತಗ್ಗಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 9, 2026)
ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,38,850 ರುಪಾಯಿ ಇದೆ. ಅಂದರೆ 1 ಗ್ರಾಂಗೆ 13,885 ರುಪಾಯಿ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,51,480 ರುಪಾಯಿ (1 ಗ್ರಾಂಗೆ 15,148 ರುಪಾಯಿ). 100 ಗ್ರಾಂ ಬೆಳ್ಳಿ ಬೆಲೆ 25,500 ರುಪಾಯಿ (1 ಗ್ರಾಂಗೆ 255 ರುಪಾಯಿ) ಇದೆ. 18 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 11,361 ರುಪಾಯಿಯಾಗಿದೆ.
ವಿವಿಧ ಕ್ಯಾರಟ್ಗಳಲ್ಲಿ ಚಿನ್ನದ ದರ (1 ಗ್ರಾಂಗೆ)
-
24 ಕ್ಯಾರಟ್: 15,148 ರೂ.
-
22 ಕ್ಯಾರಟ್: 13,885 ರೂ.
-
18 ಕ್ಯಾರಟ್: 11,361 ರೂ.
-
ಬೆಳ್ಳಿ (1 ಗ್ರಾಂ): 255 ರೂ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ
ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,38,850 ರುಪಾಯಿ (1 ಗ್ರಾಂಗೆ 13,885 ರೂ.) ಇದೆ. 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 15,148 ರುಪಾಯಿ. 100 ಗ್ರಾಂ ಬೆಳ್ಳಿ ಬೆಲೆ 25,500 ರುಪಾಯಿ (1 ಗ್ರಾಂಗೆ 255 ರೂ.) ಆಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ)
-
ಬೆಂಗಳೂರು: 13,885 ರೂ.
-
ಚೆನ್ನೈ: 14,000 ರೂ.
-
ಮುಂಬೈ: 13,885 ರೂ.
-
ದೆಹಲಿ: 13,900 ರೂ.
-
ಕೋಲ್ಕತಾ: 13,885 ರೂ.
-
ಕೇರಳ: 13,885 ರೂ.
-
ಅಹ್ಮದಾಬಾದ್: 13,890 ರೂ.
-
ಜೈಪುರ್: 13,900 ರೂ.
-
ಲಕ್ನೋ: 13,900 ರೂ.
-
ಭುವನೇಶ್ವರ್: 13,885 ರೂ.
ಚೆನ್ನೈನಲ್ಲಿ ಚಿನ್ನದ ಬೆಲೆ ಸ್ವಲ್ಪ ಹೆಚ್ಚಾಗಿದ್ದು, 1 ಗ್ರಾಂಗೆ 14,000 ರುಪಾಯಿ ಇದೆ. ದೆಹಲಿ, ಜೈಪುರ್, ಲಕ್ನೋಗಳಲ್ಲಿ 13,900 ರುಪಾಯಿ ದಾಖಲಾಗಿದೆ.
ಬೆಳ್ಳಿ ಬೆಲೆ ವಿವಿಧ ನಗರಗಳಲ್ಲಿ (1 ಗ್ರಾಂಗೆ)
-
ಬೆಂಗಳೂರು: 255 ರೂ.
-
ಚೆನ್ನೈ: 260 ರೂ.
-
ಮುಂಬೈ: 255 ರೂ.
-
ದೆಹಲಿ: 255 ರೂ.
-
ಕೋಲ್ಕತಾ: 255 ರೂ.
-
ಕೇರಳ: 260 ರೂ.
-
ಅಹ್ಮದಾಬಾದ್: 255 ರೂ.
-
ಜೈಪುರ್: 255 ರೂ.
-
ಲಕ್ನೋ: 255 ರೂ.
-
ಭುವನೇಶ್ವರ್: 260 ರೂ.
-
ಪುಣೆ: 255 ರೂ.
ಚೆನ್ನೈ, ಕೇರಳ ಮತ್ತು ಭುವನೇಶ್ವರ್ ನಗರಗಳಲ್ಲಿ ಬೆಳ್ಳಿಯ ಬೆಲೆ 1 ಗ್ರಾಂಗೆ 260 ರುಪಾಯಿ ಇದ್ದು, ಉಳಿದ ನಗರಗಳಲ್ಲಿ 255 ರುಪಾಯಿ ಇದೆ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ ಅಂದಾಜು ರುಪಾಯಿಯಲ್ಲಿ)
-
ಮಲೇಷ್ಯಾ: 579 ರಿಂಗಿಟ್ (13,471 ರೂ.)
-
ದುಬೈ: 530.50 ಡಿರಾಮ್ (13,375 ರೂ.)
-
ಅಮೆರಿಕ: 148 ಡಾಲರ್ (13,696 ರೂ.)
-
ಸಿಂಗಾಪುರ: 187.80 ಸಿಂಗಾಪುರ್ ಡಾಲರ್ (13,636 ರೂ.)
-
ಕತಾರ್: 526 ಕತಾರಿ ರಿಯಾಲ್ (13,360 ರೂ.)
-
ಸೌದಿ ಅರೇಬಿಯಾ: 540 ಸೌದಿ ರಿಯಾಲ್ (13,324 ರೂ.)
-
ಓಮನ್: 56.65 ಒಮಾನಿ ರಿಯಾಲ್ (13,625 ರೂ.)
-
ಕುವೇತ್: 43.50 ಕುವೇತಿ ದಿನಾರ್ (13,141 ರೂ.)
ಹೂಡಿಕೆದಾರರಿಗೆ ಸಲಹೆ
ಚಿನ್ನ ಮತ್ತು ಬೆಳ್ಳಿ ದೀರ್ಘಕಾಲೀನ ಹೂಡಿಕೆಗೆ ಸುರಕ್ಷಿತ ಆಯ್ಕೆಗಳಾಗಿವೆ. ಬೆಲೆ ಕುಸಿತವು ಖರೀದಿಗೆ ಅನುಕೂಲಕರ ಸಮಯವಾಗಿರಬಹುದು. ಆದಾಗ್ಯೂ, ಏರಿಳಿತದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳ ನಿಜ ಸಮಯದ ದರಗಳನ್ನು ಪರಿಶೀಲಿಸುವುದು ಒಳಿತು. ಮದುವೆ ಸೀಸನ್ ಸಮೀಪಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣ ಖರೀದಿ ಮಾಡಲು ಬಯಸುವವರಿಗೆ ಇಂದಿನ ದರ ಸೂಕ್ತವಾಗಿದೆ.





