ಬೆಂಗಳೂರು, ಡಿಸೆಂಬರ್ 11, 2025: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ವಿಶೇಷವಾಗಿ ಬೆಳ್ಳಿ ಬೆಲೆಯ ಏರಿಕೆಯು ಗಮನ ಸೆಳೆಯುತ್ತಿದೆ. ನಿನ್ನೆಯವರೆಗೂ 199 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಬೆಳ್ಳಿ ಇಂದು 2 ರೂಪಾಯಿಗಳ ಹೆಚ್ಚಳದೊಂದಿಗೆ 201 ರೂಪಾಯಿಗಳನ್ನು ಮುಟ್ಟಿದೆ. ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ ಇನ್ನೂ ಹೆಚ್ಚಾಗಿ 209 ರೂಪಾಯಿಗಳನ್ನು ತಲುಪಿದೆ. ಇದಕ್ಕೆ ಪ್ರಮುಖ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೇಡಿಕೆ ಹೆಚ್ಚಳವಾಗಿದೆ ಹೀಗಾಗಿ ಪ್ರಸ್ಥುತ ಬೆಳ್ಳಿ ದರ ತೀವ್ಯ ಹೆಚ್ಚಾಗುತ್ತಿದೆ.
ಇದರ ಜೊತೆಗೆ, ಚಿನ್ನದ ಬೆಲೆಯಲ್ಲೂ ಸಣ್ಣಪುಟ್ಟ ಏರಿಳಿತಗಳು ಕಂಡುಬರುತ್ತಿವೆ. ಇಂದು ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್ಗೆ ಕೇವಲ 10 ರೂಪಾಯಿಗಳ ಕಡಿತ ಕಂಡುಬಂದಿದೆ. ಆದರೂ ಸಮಗ್ರವಾಗಿ ಚಿನ್ನದ ಬೆಲೆ ಸ್ಥಿರವಾಗಿದೆ. ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,450 ರೂಪಾಯಿಗಳಾಗಿದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,031 ರೂಪಾಯಿಗಳು. 100 ಗ್ರಾಮ್ ಬೆಳ್ಳಿಯ ಬೆಲೆ 19,900 ರೂಪಾಯಿಗಳಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,19,450 ರೂಪಾಯಿ ಮತ್ತು ಬೆಳ್ಳಿ 100 ಗ್ರಾಮ್ಗೆ 19,900 ರೂಪಾಯಿಗಳಲ್ಲಿ ಸ್ಥಿರವಾಗಿದೆ. ಆದರೆ ತಮಿಳುನಾಡು, ಕೇರಳದಂತಹ ಪ್ರದೇಶಗಳಲ್ಲಿ ಬೆಳ್ಳಿ ಬೆಲೆ 20,700 ರೂಪಾಯಿಗಳವರೆಗೂ ಏರಿದೆ.
ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ ವಿವರಗಳನ್ನು ನೋಡುವುದಾದರೆ, 24 ಕ್ಯಾರಟ್‌ನ 1 ಗ್ರಾಮ್ ಚಿನ್ನದ ಬೆಲೆ 13,020 ರೂಪಾಯಿ, 22 ಕ್ಯಾರಟ್‌ನದ್ದು 11,935 ರೂಪಾಯಿ ಮತ್ತು 18 ಕ್ಯಾರಟ್‌ನದ್ದು 9,765 ರೂಪಾಯಿ. ಬೆಳ್ಳಿ ಬೆಲೆ ಪ್ರತಿ ಗ್ರಾಮ್‌ಗೆ 199 ರೂಪಾಯಿ. ಬೆಂಗಳೂರಿನಲ್ಲಿ ಇದೇ ಬೆಲೆಗಳು ಅನ್ವಯಿಸುತ್ತವೆ, ಆದರೆ ಬೆಳ್ಳಿ 199 ರೂಪಾಯಿಗಳು. ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆಯನ್ನು ಪರಿಶೀಲಿಸಿದರೆ, ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ ಮತ್ತು ಭುವನೇಶ್ವರದಲ್ಲಿ 11,935 ರೂಪಾಯಿ ದರ ಇದೆ. ಅದೇ ರೀತಿ ಚೆನ್ನೈಯಲ್ಲಿ 12,050 ರೂಪಾಯಿ ಇದೆ. ದೆಹಲಿ, ಜೈಪುರ್ ಮತ್ತು ಲಕ್ನೋದಲ್ಲಿ 11,950 ರೂಪಾಯಿ. ಅಹ್ಮದಾಬಾದ್ನಲ್ಲಿ 11,940 ರೂಪಾಯಿ ದರ ಇದೆ.
ಇನ್ನೂ ಬೆಳ್ಳಿ ಬೆಲೆಯಲ್ಲೂ ತೀವ್ರ ವ್ಯತ್ಯಾಸವಿದ್ದು, ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ್, ಲಕ್ನೋ ಮತ್ತು ಪುಣೆಯಲ್ಲಿ 201 ರೂಪಾಯಿ. ಚೆನ್ನೈ, ಕೇರಳ ಮತ್ತು ಭುವನೇಶ್ವರದಲ್ಲಿ 209 ರೂಪಾಯಿ. ಈ ವ್ಯತ್ಯಾಸಗಳು ಸ್ಥಳೀಯ ತೆರಿಗೆ, ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆಯಿಂದ ಉಂಟಾಗುತ್ತವೆ.
ವಿದೇಶಗಳಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ, 22 ಕ್ಯಾರಟ್‌ನ 1 ಗ್ರಾಮ್ ಚಿನ್ನದ ಬೆಲೆ ಮಲೇಷ್ಯಾದಲ್ಲಿ 538 ರಿಂಗಿಟ್ (ಸುಮಾರು 11,809 ರೂಪಾಯಿ), ದುಬೈಯಲ್ಲಿ 468.75 ಡಿರಾಮ್ (11,505 ರೂಪಾಯಿ), ಅಮೆರಿಕದಲ್ಲಿ 130.50 ಡಾಲರ್ (11,759 ರೂಪಾಯಿ), ಸಿಂಗಾಪುರದಲ್ಲಿ 170.50 ಸಿಂಗಾಪುರ್ ಡಾಲರ್ (11,873 ರೂಪಾಯಿ), ಕತಾರ್ನಲ್ಲಿ 467.50 ರಿಯಾಲ್ (11,558 ರೂಪಾಯಿ), ಸೌದಿ ಅರೇಬಿಯಾದಲ್ಲಿ 475 ರಿಯಾಲ್ (11,405 ರೂಪಾಯಿ), ಓಮನ್ನಲ್ಲಿ 49.30 ರಿಯಾಲ್ (11,543 ರೂಪಾಯಿ) ಮತ್ತು ಕುವೇತ್ನಲ್ಲಿ 38.23 ದಿನಾರ್ (11,234 ರೂಪಾಯಿ). ಇವುಗಳು ಭಾರತೀಯ ಮಾರುಕಟ್ಟೆಗಿಂತ ಸ್ವಲ್ಪ ಕಡಿಮೆಯಿದೆ.
ಗಮನಿಸಿ: ಇವುಗಳು ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಇದರ ಜೊತೆಗೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಮುಂತಾದ ಶುಲ್ಕಗಳು ಹೆಚ್ಚುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಚಿನ್ನದ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಬಹುದು.





