ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಕಂಡುಬಂದಿರುವ ಇಳಿಕೆಯು ಹೂಡಿಕೆದಾರರು, ವ್ಯಾಪಾರಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನೆ, ಡಾಲರ್‌ನ ಬಲ ಹಾಗೂ ವಿನಿಮಯ ದರದ ಬದಲಾವಣೆಗಳು ಈ ಬಂಗಾರದ ದರದ ಏರುಪೇರಿಗೆ ಪ್ರಮುಖ ಕಾರಣಗಳಾಗಿವೆ.
ಚಿನ್ನದ ಬೆಲೆ ಇಳಿಕೆಯ ಹಿಂದಿನ ಕಾರಣಗಳು
ಜಾಗತಿಕ ಮಟ್ಟದಲ್ಲಿ ಅಮೆರಿಕನ್ ಡಾಲರ್ ಬಲಪಡೆಯುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಯಾದ ಚಿನ್ನದ ಬದಲು ಇತರ ಮಾರ್ಗಗಳತ್ತ ಮುಖ ಮಾಡಿದ್ದಾರೆ. ಇದರಿಂದ ಚಿನ್ನದ ಬೇಡಿಕೆ ತಾತ್ಕಾಲಿಕವಾಗಿ ಕಡಿಮೆಯಾಗಿದೆ. ಹಬ್ಬದ ಕಾಲದಲ್ಲಿದ್ದರೂ ಖರೀದಿದಾರರು ಹೊಸ ಆಭರಣ ಖರೀದಿಸಲು ಮುಂಚೂಣಿಯಲ್ಲಿಲ್ಲ. ಹೂಡಿಕೆದಾರರು ಮಾರುಕಟ್ಟೆ ಸ್ಥಿರವಾಗುವ ನಿರೀಕ್ಷೆಯಲ್ಲಿದ್ದಾರೆ.
ಇಂದು ಚಿನ್ನ ಮತ್ತು ಬೆಳ್ಳಿ ದರ
ಬೆಂಗಳೂರು ಮಾರುಕಟ್ಟೆ ದರಗಳು
-
24 ಕ್ಯಾರೆಟ್ ಚಿನ್ನ (10 ಗ್ರಾಂ): ₹1,21,470
-
22 ಕ್ಯಾರೆಟ್ ಚಿನ್ನ (10 ಗ್ರಾಂ): ₹1,11,340
-
ಬೆಳ್ಳಿ (1 ಕೆಜಿ): ₹1,71,900
ಕರ್ನಾಟಕದಲ್ಲಿ ಚಿನ್ನದ ಪ್ರತಿ ಗ್ರಾಂ ಬೆಲೆ
-
18 ಕ್ಯಾರೆಟ್ ಆಭರಣ ಚಿನ್ನ – ₹9,110
-
22 ಕ್ಯಾರೆಟ್ ಆಭರಣ ಚಿನ್ನ – ₹11,134
-
24 ಕ್ಯಾರೆಟ್ ಅಪರಂಜಿ ಚಿನ್ನ – ₹12,147
100 ಗ್ರಾಂ ಚಿನ್ನದ ಬೆಲೆ
-
18 ಕ್ಯಾರೆಟ್ – ₹9,11,000
-
22 ಕ್ಯಾರೆಟ್ – ₹11,13,400
-
24 ಕ್ಯಾರೆಟ್ – ₹12,14,700
ಪ್ರಮುಖ ನಗರಗಳಲ್ಲಿನ 22 ಕ್ಯಾರೆಟ್ ಚಿನ್ನದ (1 ಗ್ರಾಂ) ದರ
| ನಗರ | ಇಂದಿನ ದರ (₹) |
|---|---|
| ಚೆನ್ನೈ | 11,249 |
| ಮುಂಬೈ | 11,224 |
| ದೆಹಲಿ | 11,239 |
| ಕೋಲ್ಕತ್ತಾ | 11,224 |
| ಬೆಂಗಳೂರು | 11,224 |
| ಹೈದರಾಬಾದ್ | 11,224 |
| ಕೇರಳ | 11,224 |
| ಪುಣೆ | 11,224 |
| ಅಹಮದಾಬಾದ್ | 11,229 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
| ನಗರ | ದರ (₹) |
|---|---|
| ಚೆನ್ನೈ | 16,490 |
| ಮುಂಬೈ | 15,090 |
| ದೆಹಲಿ | 15,090 |
| ಕೋಲ್ಕತ್ತಾ | 15,090 |
| ಬೆಂಗಳೂರು | 15,090 |
| ಹೈದರಾಬಾದ್ | 16,490 |
| ಕೇರಳ | 16,490 |
| ಪುಣೆ | 15,090 |
ಬೆಲೆಗಳು ಪ್ರತಿ ರಾಜ್ಯದ ಅಬಕಾರಿ ಸುಂಕ (Excise Duty), ಮೇಕಿಂಗ್ ಶುಲ್ಕಗಳು ಹಾಗೂ ಜಿಎಸ್‌ಟಿ (GST) ಮೇಲೆ ಅವಲಂಬಿತವಾಗಿರುವುದರಿಂದ ಸ್ವಲ್ಪ ವ್ಯತ್ಯಾಸ ಕಾಣಬಹುದು.





