ಬೆಂಗಳೂರು, ಅಕ್ಟೋಬರ್ 2: ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿವೆ. ಚಿನ್ನದ ಬೆಲೆ ಗಮನಾರ್ಹ ಇಳಿಕೆ ಕಾಣಿಸಿದೆ, ಅದೇ ಸಮಯದಲ್ಲಿ ಬೆಳ್ಳಿಯ ಬೆಲೆ ಮುಂದುವರಿದ ಏರಿಕೆಯಾಗಿದೆ.
ಚಿನ್ನದ ಬೆಲೆಯಲ್ಲಿ 50 ರೂಪಾಯಿ ಇಳಿಕೆ: ನಿನ್ನೆ ₹11,924 ಗಡಿಯನ್ನು ಮುಟ್ಟಿದ್ದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ₹55 ಇಳಿದು, ಪ್ರತಿ ಗ್ರಾಮ್‌ಗೆ ₹11,869 ಆಗಿದೆ. ಇದೇ ರೀತಿ, ಆಭರಣ ತಯಾರಿಕೆಗೆ ಹೆಚ್ಚು ಬಳಕೆಯಾಗುವ 22 ಕ್ಯಾರೆಟ್ ಚಿನ್ನದ ಬೆಲೆಯೂ ₹50 ಇಳಿದು ಪ್ರತಿ ಗ್ರಾಮ್‌ಗೆ ₹10,880 ಆಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ ₹8,902 ಆಗಿದೆ.
ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಚಿನ್ನದ ಬೆಲೆ ಇಳಿದರೆ, ಬೆಳ್ಳಿ ಬೆಲೆಯ ದಾಖಲೆ ಓಟ ಮುಂದುವರಿದಿದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳಲ್ಲಿ ಬೆಳ್ಳಿಯ ಬೆಲೆ ₹2 ಏರಿಕೆಯಾಗಿ, ಪ್ರತಿ ಗ್ರಾಮ್‌ಗೆ ₹153 ರೂ. ಆಗಿದೆ. ಚೆನ್ನೈ ಮತ್ತು ಕೇರಳದಲ್ಲಿ ಈ ಬೆಲೆ ಪ್ರತಿ ಗ್ರಾಮ್‌ಗೆ ₹163 ರೂ. ವರೆಗೆ ತಲುಪಿದೆ.
ಬೆಂಗಳೂರಿನಲ್ಲಿ ವಿವಿಧ ಪ್ರಮಾಣದಲ್ಲಿ ಚಿನ್ನದ ಬೆಲೆ:
| ಚಿನ್ನದ ಪ್ರಕಾರ | 1 ಗ್ರಾಂ | 8 ಗ್ರಾಂ | 10 ಗ್ರಾಂ | ಬದಲಾವಣೆ (ನಿನ್ನೆಗೆ ಹೋಲಿಸಿದೆ) |
|---|---|---|---|---|
| 24 ಕ್ಯಾರೆಟ್ | ₹11,869 | ₹94,952 | ₹1,18,690 | – ₹55 |
| 22 ಕ್ಯಾರೆಟ್ | ₹10,880 | ₹87,040 | ₹1,08,800 | – ₹50 |
| 18 ಕ್ಯಾರೆಟ್ | ₹8,902 | ₹71,216 | ₹89,020 | – ₹38 |
ಬೆಂಗಳೂರಿನಲ್ಲಿ ವಿವಿಧ ಪ್ರಮಾಣದಲ್ಲಿ ಬೆಳ್ಳಿಯ ಬೆಲೆ:
| ಪ್ರಮಾಣ | ಇಂದಿನ ಬೆಲೆ | ನಿನ್ನೆಯ ಬೆಲೆ | ಬದಲಾವಣೆ |
|---|---|---|---|
| 1 ಗ್ರಾಂ | ₹153 | ₹151 | + ₹2 |
| 100 ಗ್ರಾಂ | ₹15,300 | ₹15,100 | + ₹200 |
| 1 ಕಿಲೋಗ್ರಾಂ | ₹1,53,000 | ₹1,51,000 | + ₹2,000 |
ಭಾರತದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ ಗ್ರಾಮ್‌ಗೆ)
ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಣಿಸಿದೆ:
-
ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ: ₹10,880
-
ದೆಹಲಿ, ಜೈಪುರ್, ಲಕ್ನೋ: ₹10,895
-
ಅಹ್ಮದಾಬಾದ್: ₹10,885
ವಿದೇಶಗಳಲ್ಲಿ ಚಿನ್ನದ ಬೆಲೆ
ವಿದೇಶಿ ಮಾರುಕಟ್ಟೆಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಭಾರತಕ್ಕಿಂತ ಸ್ವಲ್ಪ ಕಡಿಮೆಯಿದೆ:
-
ಅಮೆರಿಕ: $120.50 (ಸುಮಾರು ₹10,685)
-
ದುಬೈ: 432 ಡಿರಾಮ್ (ಸುಮಾರು ₹10,429)
-
ಸಿಂಗಾಪುರ: 153.90 ಸಿಂಗಾಪುರ್ ಡಾಲರ್ (ಸುಮಾರು ₹10,592)
-
ಕುವೇತ್: 35.02 ದಿನಾರ್ (ಸುಮಾರು ₹10,162)





