ಬೆಂಗಳೂರು, ಏಪ್ರಿಲ್ 12: ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸ್ಥಿರತೆಯನ್ನು ತೋರಿದೆ. ಕಳೆದ ಎರಡು ವಾರಗಳಿಂದ ಚಿನ್ನದ ದರ ಏರಿಳಿತ ಕಂಡುಬಂದಿದೆ. ಆದರೆ ಇಂದು 22 ಕ್ಯಾರಟ್ ಚಿನ್ನದ ದರ ಗ್ರಾಮ್‌ಗೆ ₹14,010 ಮತ್ತು 24 ಕ್ಯಾರಟ್ ಚಿನ್ನ ₹15,284 ಇದೆ. ಬೆಳ್ಳಿ ಬೆಲೆ ಗ್ರಾಮ್‌ಗೆ ₹260 ನಿಗದಿಯಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಚಿನ್ನ ಗ್ರಾಮ್‌ಗೆ ₹355 ರೂ.ಏರಿಕೆಯಾಗಿದ್ದರೆ, ಬೆಳ್ಳಿ ₹10 ಏರಿಕೆಯಾಗಿದೆ.
ದೇಶದಲ್ಲಿ 10 ಗ್ರಾಂ ಚಿನ್ನದ ದರ ಎಷ್ಟು?
ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹1,40,100 ಆಗಿದೆ. ಅಪರಂಜಿ (24 ಕ್ಯಾರಟ್) ಚಿನ್ನದ 10 ಗ್ರಾಂ ದರ ₹1,52,840 ಇದೆ. 100 ಗ್ರಾಂ ಬೆಳ್ಳಿಯ ಬೆಲೆ ₹26,000 ರೂ. ಆಗಿದೆ. ಇವುಗಳು ಕಚ್ಚಾ ದರಗಳಾಗಿದ್ದು, ಜಿಎಸ್ಟಿ, ಮೇಕಿಂಗ್ ಚಾರ್ಜ್ ಮತ್ತು ಕರಿಗೆ ತೆರಿಗೆಗಳು ಸೇರಿದಂತೆ ಅಂತಿಮ ಬೆಲೆ ಹೆಚ್ಚಿರುತ್ತದೆ.
ವಿವಿಧ ಕ್ಯಾರಟ್ಗಳಲ್ಲಿ 1 ಗ್ರಾಂ ಚಿನ್ನದ ದರ (ಏಪ್ರಿಲ್ 12)
| ಕ್ಯಾರಟ್ | ಬೆಲೆ (ರೂಪಾಯಿಯಲ್ಲಿ) |
|---|---|
| 24 ಕ್ಯಾರಟ್ | ₹15,284 |
| 22 ಕ್ಯಾರಟ್ | ₹14,010 |
| 18 ಕ್ಯಾರಟ್ | ₹11,463 |
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್ಗೆ)
-
ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ್: ₹14,010
-
ಚೆನ್ನೈ: ₹14,100
-
ದೆಹಲಿ, ಜೈಪುರ್, ಲಕ್ನೋ: ₹14,025
-
ಅಹ್ಮದಾಬಾದ್: ₹14,015
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್ಗೆ, ರೂಪಾಯಿಯಲ್ಲಿ ಅಂದಾಜು)
| ದೇಶ | ಸ್ಥಳೀಯ ಬೆಲೆ | ರೂಪಾಯಿ |
|---|---|---|
| ಅಮೆರಿಕ | $149.50 | ₹13,917 |
| ದುಬೈ | 532.50 ಡಿರಾಮ್ | ₹13,495 |
| ಸೌದಿ ಅರೇಬಿಯಾ | 541 ರಿಯಾಲ್ | ₹13,420 |
| ಕುವೇತ್ | 43.71 ದಿನಾರ್ | ₹13,275 |
| ಮಲೇಷ್ಯಾ | 585 ರಿಂಗಿಟ್ | ₹13,733 |
| ಸಿಂಗಾಪುರ | 188.50 ಡಾಲರ್ | ₹13,775 |
ಭಾರತದಲ್ಲಿ ಚಿನ್ನ ವಿದೇಶಗಳಿಗಿಂತ ಸ್ವಲ್ಪ ದುಬಾರಿಯಾಗಿದೆ. ಇದಕ್ಕೆ ಸುಂಕಗಳು, ತೆರಿಗೆಗಳು ಮತ್ತು ಸಾಗಣೆ ವೆಚ್ಚ ಕಾರಣ.
ಬೆಳ್ಳಿ ಬೆಲೆ: ನಗರವಾರು ವಿವರ (1 ಗ್ರಾಮ್‌ಗೆ)
-
ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ್, ಲಕ್ನೋ, ಪುಣೆ: ₹260
-
ಚೆನ್ನೈ, ಕೇರಳ, ಭುವನೇಶ್ವರ್: ₹265
ಬೆಳ್ಳಿಯ ದರದಲ್ಲಿ ಅಂತರ ಕಡಿಮೆ ಇದೆ. ಚೆನ್ನೈ ಮತ್ತು ಕೇರಳದಲ್ಲಿ ಸ್ಥಳೀಯ ಬೇಡಿಕೆ ಹೆಚ್ಚಿರುವುದರಿಂದ ಸ್ವಲ್ಪ ಹೆಚ್ಚಿನ ದರ ಇದೆ.
ಗಮನಿಸಿ: ಇಲ್ಲಿ ನೀಡಲಾದ ದರಗಳು ಪ್ರಮುಖ ಆಭರಣ ಮಳಿಗೆಗಳ ಮಾಹಿತಿ ಆಧಾರದಲ್ಲಿವೆ. ನಿಖರತೆಯನ್ನು ಖಾತ್ರಿಪಡಿಸಲಾಗುವುದಿಲ್ಲ. ಜಿಎಸ್ಟಿ, ಮೇಕಿಂಗ್ ಚಾರ್ಜ್ ಮತ್ತು ಇತರ ಶುಲ್ಕಗಳು ಅನ್ವಯವಾಗುತ್ತವೆ. ಖರೀದಿಗೆ ಮುನ್ನ ನಿಮ್ಮ ಹತ್ತಿರದ ಅಂಗಡಿಯಲ್ಲಿ ದೃಢೀಕರಿಸಿಕೊಳ್ಳಿ.





