ವೀಕೆಂಡ್‌ನಲ್ಲಿ ಆಭರಣ ಖರೀದಿಸುವ ಮುನ್ನ ಚಿನ್ನ-ಬೆಳ್ಳಿ ದರ ತಿಳಿದುಕೊಳ್ಳಿ: ಇಲ್ಲಿ ಚೆಕ್‌ ಮಾಡಿ

Untitled design 2026 04 12T104959.152

ಬೆಂಗಳೂರು, ಏಪ್ರಿಲ್ 12: ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸ್ಥಿರತೆಯನ್ನು ತೋರಿದೆ. ಕಳೆದ ಎರಡು ವಾರಗಳಿಂದ ಚಿನ್ನದ ದರ ಏರಿಳಿತ ಕಂಡುಬಂದಿದೆ. ಆದರೆ ಇಂದು 22 ಕ್ಯಾರಟ್ ಚಿನ್ನದ ದರ ಗ್ರಾಮ್‌ಗೆ ₹14,010 ಮತ್ತು 24 ಕ್ಯಾರಟ್ ಚಿನ್ನ ₹15,284 ಇದೆ. ಬೆಳ್ಳಿ ಬೆಲೆ ಗ್ರಾಮ್‌ಗೆ ₹260 ನಿಗದಿಯಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಚಿನ್ನ ಗ್ರಾಮ್‌ಗೆ ₹355 ರೂ.ಏರಿಕೆಯಾಗಿದ್ದರೆ, ಬೆಳ್ಳಿ ₹10 ಏರಿಕೆಯಾಗಿದೆ.

ದೇಶದಲ್ಲಿ 10 ಗ್ರಾಂ ಚಿನ್ನದ ದರ ಎಷ್ಟು?

ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹1,40,100 ಆಗಿದೆ. ಅಪರಂಜಿ (24 ಕ್ಯಾರಟ್) ಚಿನ್ನದ 10 ಗ್ರಾಂ ದರ ₹1,52,840 ಇದೆ. 100 ಗ್ರಾಂ ಬೆಳ್ಳಿಯ ಬೆಲೆ ₹26,000 ರೂ. ಆಗಿದೆ. ಇವುಗಳು ಕಚ್ಚಾ ದರಗಳಾಗಿದ್ದು, ಜಿಎಸ್ಟಿ, ಮೇಕಿಂಗ್ ಚಾರ್ಜ್ ಮತ್ತು ಕರಿಗೆ ತೆರಿಗೆಗಳು ಸೇರಿದಂತೆ ಅಂತಿಮ ಬೆಲೆ ಹೆಚ್ಚಿರುತ್ತದೆ.

ವಿವಿಧ ಕ್ಯಾರಟ್ಗಳಲ್ಲಿ 1 ಗ್ರಾಂ ಚಿನ್ನದ ದರ (ಏಪ್ರಿಲ್ 12)
ಕ್ಯಾರಟ್ ಬೆಲೆ (ರೂಪಾಯಿಯಲ್ಲಿ)
24 ಕ್ಯಾರಟ್ ₹15,284
22 ಕ್ಯಾರಟ್ ₹14,010
18 ಕ್ಯಾರಟ್ ₹11,463
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್ಗೆ)
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್ಗೆ, ರೂಪಾಯಿಯಲ್ಲಿ ಅಂದಾಜು)
ದೇಶ ಸ್ಥಳೀಯ ಬೆಲೆ ರೂಪಾಯಿ 
ಅಮೆರಿಕ $149.50 ₹13,917
ದುಬೈ 532.50 ಡಿರಾಮ್ ₹13,495
ಸೌದಿ ಅರೇಬಿಯಾ 541 ರಿಯಾಲ್ ₹13,420
ಕುವೇತ್ 43.71 ದಿನಾರ್ ₹13,275
ಮಲೇಷ್ಯಾ 585 ರಿಂಗಿಟ್ ₹13,733
ಸಿಂಗಾಪುರ 188.50 ಡಾಲರ್ ₹13,775

ಭಾರತದಲ್ಲಿ ಚಿನ್ನ ವಿದೇಶಗಳಿಗಿಂತ ಸ್ವಲ್ಪ ದುಬಾರಿಯಾಗಿದೆ. ಇದಕ್ಕೆ ಸುಂಕಗಳು, ತೆರಿಗೆಗಳು ಮತ್ತು ಸಾಗಣೆ ವೆಚ್ಚ ಕಾರಣ.

ಬೆಳ್ಳಿ ಬೆಲೆ: ನಗರವಾರು ವಿವರ (1 ಗ್ರಾಮ್‌ಗೆ)

ಬೆಳ್ಳಿಯ ದರದಲ್ಲಿ ಅಂತರ ಕಡಿಮೆ ಇದೆ. ಚೆನ್ನೈ ಮತ್ತು ಕೇರಳದಲ್ಲಿ ಸ್ಥಳೀಯ ಬೇಡಿಕೆ ಹೆಚ್ಚಿರುವುದರಿಂದ ಸ್ವಲ್ಪ ಹೆಚ್ಚಿನ ದರ ಇದೆ.

ಗಮನಿಸಿ: ಇಲ್ಲಿ ನೀಡಲಾದ ದರಗಳು ಪ್ರಮುಖ ಆಭರಣ ಮಳಿಗೆಗಳ ಮಾಹಿತಿ ಆಧಾರದಲ್ಲಿವೆ. ನಿಖರತೆಯನ್ನು ಖಾತ್ರಿಪಡಿಸಲಾಗುವುದಿಲ್ಲ. ಜಿಎಸ್ಟಿ, ಮೇಕಿಂಗ್ ಚಾರ್ಜ್ ಮತ್ತು ಇತರ ಶುಲ್ಕಗಳು ಅನ್ವಯವಾಗುತ್ತವೆ. ಖರೀದಿಗೆ ಮುನ್ನ ನಿಮ್ಮ ಹತ್ತಿರದ ಅಂಗಡಿಯಲ್ಲಿ ದೃಢೀಕರಿಸಿಕೊಳ್ಳಿ.

Exit mobile version