ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕಳೆದ ಕೆಲವು ದಿನಗಳಿಂದ ಕ್ರಮೇಣ ಇಳಿಮುಖವಾಗುತ್ತಿದ್ದು, ಇದರಿಂದ ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ತಾತ್ಕಾಲಿಕವಾಗಿ ಕುಸಿದಿರುವುದು, ಅಮೆರಿಕನ್ ಡಾಲರ್ ಮೌಲ್ಯ ಏರಿಕೆಯಾದದ್ದು ಹಾಗೂ ಗ್ಲೋಬಲ್ ಆರ್ಥಿಕತೆಯಲ್ಲಿ ತಾತ್ಕಾಲಿಕ ಸ್ಥಿರತೆ ನಿರ್ಮಾಣವಾಗಿರುವುದು ಈ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಹಬ್ಬದ ಹಂಗಾಮು ಮುಗಿದ ನಂತರ ಭಾರತದಲ್ಲಿ ಆಭರಣಗಳ ಖರೀದಿ ಕಡಿಮೆಯಾಗಿರುವುದೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಯಲು ಮತ್ತೊಂದು ಕಾರಣವಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ದರ
ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ (ಅಪರಂಜಿ) 10 ಗ್ರಾಂ ಚಿನ್ನದ ಬೆಲೆ ₹1,23,970 ಆಗಿದ್ದು, 22 ಕ್ಯಾರಟ್ 10 ಗ್ರಾಂ ಚಿನ್ನದ ದರ ₹1,13,640ಕ್ಕೆ ಇಳಿಕೆಯಾಗಿದೆ. ಬೆಳ್ಳಿ ಮಾರುಕಟ್ಟೆಯೂ ಇದೇ ರೀತಿಯ ಶಾಂತ ಸ್ಥಿತಿಯಲ್ಲಿದ್ದು, 1 ಕೆಜಿ ಬೆಳ್ಳಿಯ ದರ ₹1,71,900 ದಾಖಲಿಸಲಾಗಿದೆ.
ಕರ್ನಾಟಕದಲ್ಲಿ ಚಿನ್ನದ ದರ
ಒಂದು ಗ್ರಾಂ ಚಿನ್ನದ ಬೆಲೆ ಇಂದು ಹೀಗಿದೆ:
-
18 ಕ್ಯಾರೆಟ್: ₹9,298
-
22 ಕ್ಯಾರೆಟ್: ₹11,364
-
24 ಕ್ಯಾರೆಟ್ (ಅಪರಂಜಿ): ₹12,367
ಎಂಟು ಗ್ರಾಂ (8GM) ಮತ್ತು ಹತ್ತು ಗ್ರಾಂ (10GM) ದರಗಳು ಹೀಗೆ.
-
8GM 18 ಕ್ಯಾರೆಟ್: ₹74,384
-
8GM 22 ಕ್ಯಾರೆಟ್: ₹90,912
-
8GM 24 ಕ್ಯಾರೆಟ್: ₹99,176
-
10GM 18 ಕ್ಯಾರೆಟ್: ₹92,980
-
10GM 22 ಕ್ಯಾರೆಟ್: ₹1,13,640
-
10GM 24 ಕ್ಯಾರೆಟ್: ₹1,23,970
ನೂರು ಗ್ರಾಂ ಚಿನ್ನದ ದರ:
-
100GM 18 ಕ್ಯಾರೆಟ್: ₹9,29,800
-
100GM 22 ಕ್ಯಾರೆಟ್: ₹11,36,400
-
100GM 24 ಕ್ಯಾರೆಟ್: ₹12,39,700
ವಿವಿಧ ನಗರಗಳಲ್ಲಿ 22K ಚಿನ್ನದ ದರ
ಇಂದು ಭಾರತದ ಪ್ರಮುಖ ನಗರಗಳಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಹೀಗಿದೆ.
-
ಚೆನ್ನೈ: ₹11,459
-
ಮುಂಬೈ: ₹11,364
-
ದೆಹಲಿ: ₹11,379
-
ಕೋಲ್ಕತ್ತಾ: ₹11,364
-
ಬೆಂಗಳೂರು: ₹11,364
-
ಹೈದರಾಬಾದ್: ₹11,364
-
ಕೇರಳ: ₹11,364
-
ಪುಣೆ: ₹11,364
-
ವಡೋದರಾ: ₹11,369
-
ಅಹಮದಾಬಾದ್: ₹11,369
ವಿವಿಧ ನಗರಗಳ ಬೆಳ್ಳಿ ದರ (100 ಗ್ರಾಂ)
-
ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಪುಣೆ: ₹16,090
-
ಕೇರಳ: ₹16,890
ಬೆಲೆ ಏಕೆ ಬದಲಾಗುತ್ತದೆ?
ಚಿನ್ನ-ಬೆಳ್ಳಿಯ ದರವು ದೇಶದ ವಿವಿಧ ಭಾಗಗಳಲ್ಲಿ ಒಂದು ರೀತಿಯಾಗಿ ಕಾಣಿಸದಿರುವುದು ಅಬಕಾರಿ ಸುಂಕ, ಮೇಕಿಂಗ್ ಚಾರ್ಜ್, GST ಸೇರಿದಂತೆ ಹಲವು ತೆರಿಗೆಗಳು ಹಾಗೂ ಸ್ಥಳೀಯ ಮಾರುಕಟ್ಟೆಯ ಡಿಮ್ಯಾಂಡ್–ಸಪ್ಲೈ ನಿಯಮಗಳು ಬದಲಾದ ಪರಿಣಾಮ. ಅಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗುವ ಸಣ್ಣ ಬದಲಾವಣೆಗಳೂ ಭಾರತೀಯ ಮಾರುಕಟ್ಟೆಯನ್ನು ನೇರವಾಗಿ ಪ್ರಭಾವಿಸುತ್ತದೆ.
ಗ್ರಾಹಕರಿಗೆ ಶಿಫಾರಸು
ಚಿನ್ನ ಖರೀದಿಸಲು ಈಗ ಉತ್ತಮ ಸಮಯವಾಗಿದ್ದರೂ, ಹೂಡಿಕೆದಾರರು ಎಚ್ಚರಿಕೆಯಿಂದ ಹಾಗೂ ಸಮತೋಲನದಿಂದ ನಿರ್ಧಾರ ಕೈಗೊಳ್ಳುವುದು ಮುಖ್ಯ. ಚಿನ್ನದ ದರದ ಬದಲಾವಣೆಗಳು ತ್ವರಿತವಾಗಿರುವುದರಿಂದ ದೈನಂದಿನ ದರಗಳ ಮೇಲೆ ಗಮನವಿಟ್ಟು, ಮಾರುಕಟ್ಟೆಯ ಅಂದಾಜಿನ ಆಧಾರದ ಮೇಲೆ ಖರೀದಿ ಮಾಡುವುದು ಸೂಕ್ತ.





