ಭಾರತದಲ್ಲಿ ಚಿನ್ನವು ಕೇವಲ ಆಭರಣವಲ್ಲ, ಆರ್ಥಿಕ ಭದ್ರತೆ ಮತ್ತು ವಿಶ್ವಾಸದ ಸಂಕೇತವಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಕ್ಟೋಬರ್ 08, 2025 ರಂದು, 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹1,22,030 ತಲುಪಿದ್ದು, 22 ಕ್ಯಾರಟ್ ಚಿನ್ನದ ಬೆಲೆ ₹1,11,860 ಆಗಿದೆ. ಇದೇ ವೇಳೆ, 1 ಕೆಜಿ ಬೆಳ್ಳಿಯ ಬೆಲೆ ₹1,49,400 ತಲುಪಿದೆ. ಈ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಆರ್ಥಿಕ ಅಸ್ಥಿರತೆ, ಡಾಲರ್ ಮೌಲ್ಯದ ಕುಸಿತ ಮತ್ತು ಭಾರತದಲ್ಲಿ ಹಬ್ಬದ ಸೀಸನ್‌ನ ಬೇಡಿಕೆಯೇ ಕಾರಣವಾಗಿದೆ.
ಕರ್ನಾಟಕದಲ್ಲಿ ಚಿನ್ನ-ಬೆಳ್ಳಿ ಬೆಲೆ (ಅಕ್ಟೋಬರ್ 08, 2025)
ಒಂದು ಗ್ರಾಂ ಚಿನ್ನ (1 ಗ್ರಾಂ)
-
18 ಕ್ಯಾರಟ್ ಆಭರಣ ಚಿನ್ನ: ₹9,153
-
22 ಕ್ಯಾರಟ್ ಆಭರಣ ಚಿನ್ನ: ₹11,186
-
24 ಕ್ಯಾರಟ್ ಅಪರಂಜಿ ಚಿನ್ನ: ₹12,203
ಎಂಟು ಗ್ರಾಂ ಚಿನ್ನ (8 ಗ್ರಾಂ)
-
18 ಕ್ಯಾರಟ್ ಆಭರಣ ಚಿನ್ನ: ₹73,224
-
22 ಕ್ಯಾರಟ್ ಆಭರಣ ಚಿನ್ನ: ₹89,488
-
24 ಕ್ಯಾರಟ್ ಅಪರಂಜಿ ಚಿನ್ನ: ₹97,624
ಹತ್ತು ಗ್ರಾಂ ಚಿನ್ನ (10 ಗ್ರಾಂ)
-
18 ಕ್ಯಾರಟ್ ಆಭರಣ ಚಿನ್ನ: ₹91,530
-
22 ಕ್ಯಾರಟ್ ಆಭರಣ ಚಿನ್ನ: ₹1,11,860
-
24 ಕ್ಯಾರಟ್ ಅಪರಂಜಿ ಚಿನ್ನ: ₹1,22,030
ನೂರು ಗ್ರಾಂ ಚಿನ್ನ (100 ಗ್ರಾಂ)
-
18 ಕ್ಯಾರಟ್ ಆಭರಣ ಚಿನ್ನ: ₹9,15,300
-
22 ಕ್ಯಾರಟ್ ಆಭರಣ ಚಿನ್ನ: ₹11,18,600
-
24 ಕ್ಯಾರಟ್ ಅಪರಂಜಿ ಚಿನ್ನ: ₹12,20,300
ಬೆಳ್ಳಿ ಬೆಲೆ (1 ಕೆಜಿ)
-
ಬೆಂಗಳೂರು: ₹1,49,400
ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ದರ
22 ಕ್ಯಾರಟ್ ಚಿನ್ನ (1 ಗ್ರಾಂ)
-
ಚೆನ್ನೈ, ದೆಹಲಿ: ₹11,201
-
ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೇರಳ, ಪುಣೆ: ₹11,186
-
ವಡೋದರಾ, ಅಹಮದಾಬಾದ್: ₹11,191
ಬೆಳ್ಳಿ (100 ಗ್ರಾಂ)
-
ಚೆನ್ನೈ: ₹16,690
-
ಹೈದರಾಬಾದ್, ಕೇರಳ: ₹16,720
-
ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಪುಣೆ, ವಡೋದರಾ, ಅಹಮದಾಬಾದ್: ₹15,710
ಚಿನ್ನ ಖರೀದಿಯ ಸಲಹೆಗಳು
ಚಿನ್ನ ಖರೀದಿಸುವ ಮೊದಲು, ಹಾಲ್‌ಮಾರ್ಕ್ ಗುರುತು ಇರುವುದನ್ನು ಖಾತರಿಪಡಿಸಿಕೊಳ್ಳಿ. ಚಿನ್ನದ ಶುದ್ಧತೆಯನ್ನು ‘ಬಿಐಎಸ್ ಕೇರ್ ಆ್ಯಪ್’ ಮೂಲಕ ಪರಿಶೀಲಿಸಬಹುದು. ಈ ಆಪ್ ಮೂಲಕ ಚಿನ್ನದ ಗುಣಮಟ್ಟವನ್ನು ತಿಳಿಯುವುದಷ್ಟೇ ಅಲ್ಲ, ದೂರುಗಳನ್ನೂ ಸಲ್ಲಿಸಬಹುದು. ಅಬಕಾರಿ ಸುಂಕ, ಮೇಕಿಂಗ್ ಶುಲ್ಕಗಳು ಮತ್ತು ಜಿಎಸ್‌ಟಿ ತೆರಿಗೆಯಂತಹ ಅಂಶಗಳು ದೇಶದ ವಿವಿಧ ಭಾಗಗಳಲ್ಲಿ ಬೆಲೆಯ ವ್ಯತ್ಯಾಸಕ್ಕೆ ಕಾರಣವಾಗುತ್ತವೆ.





