ಇಂಧನ ಬೆಲೆ ಏರಿಕೆಯಾದರೆ, ಸ್ವಂತ ವಾಹನಗಳನ್ನು ಅವಲಂಬಿಸಿದವರಿಗೆ ಮಾತ್ರವೇ ಹೊರೆಯಾಗುವುದಿಲ್ಲ, ಬಸ್, ಕ್ಯಾಬ್‌ನಂತಹ ಸಾರ್ವಜನಿಕ ಸಾರಿಗೆಯನ್ನು ಬಳಸುವವರಿಗೂ ಆರ್ಥಿಕ ಒತ್ತಡ ಎದುರಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನವು ಹಲವು ಉದ್ಯಮಗಳಿಗೆ ಕೊಂಡಿಯಾಗಿದ್ದು, ಇದರ ಬೆಲೆ ಏರಿಕೆಯು ದಿನಬಳಕೆ ವಸ್ತುಗಳ ದರದ ಮೇಲೂ ಪರಿಣಾಮ ಬೀರುತ್ತದೆ. ಇಂಧನ ಬೆಲೆಯ ಏರಿಳಿತವು ಗ್ರಾಹಕರ ಜೇಬಿಗೆ ನೇರವಾಗಿ ಕತ್ತರಿ ಹಾಕುವುದರಿಂದ, ಪ್ರತಿಯೊಬ್ಬರೂ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ.
ಈ ವಾರ ಹೊಸ ಜಿಎಸ್‌ಟಿ ದರ ಜಾರಿಗೆ ಬಂದಿದ್ದು, ಕೆಲವು ವಸ್ತುಗಳ ಬೆಲೆ ಕಡಿಮೆಯಾಗಿದ್ದರೆ, ಇನ್ನು ಕೆಲವು ದುಬಾರಿಯಾಗಿವೆ. ಆದರೆ, ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರುವುದರಿಂದ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ತಕ್ಷಣದ ಬದಲಾವಣೆ ಆಗಿಲ್ಲ. ಡೀಸೆಲ್‌ಗೆ ಬೆರೆಸುವ ಬಯೋಡೀಸೆಲ್‌ನ ಜಿಎಸ್‌ಟಿ ದರವು ಶೇ. 12 ರಿಂದ ಶೇ. 18 ಕ್ಕೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಡೈನಾಮಿಕ್ ಆಗಿರುವುದರಿಂದ, ಭಾರತದಲ್ಲಿ 2017 ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತಿದೆ. ಮೊದಲು ಇವುಗಳ ದರವನ್ನು ಹದಿನೈದು ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿತ್ತು. ಆದರೆ, ಈಗಿನ ನಿತ್ಯದ ಅಪ್‌ಡೇಟ್ ವ್ಯವಸ್ಥೆಯು ಗ್ರಾಹಕರಿಗೆ ತಾಜಾ ಮಾಹಿತಿಯನ್ನು ಒದಗಿಸುತ್ತದೆ.
ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಇಂದಿನ ಇಂಧನ ದರ
-
ಬೆಂಗಳೂರು: ಪೆಟ್ರೋಲ್ – ರೂ. 102.92, ಡೀಸೆಲ್ – ರೂ. 90.99
-
ದೆಹಲಿ: ಪೆಟ್ರೋಲ್ – ರೂ. 94.77, ಡೀಸೆಲ್ – ರೂ. 87.67
-
ಮುಂಬೈ: ಪೆಟ್ರೋಲ್ – ರೂ. 103.50, ಡೀಸೆಲ್ – ರೂ. 90.03
-
ಚೆನ್ನೈ: ಪೆಟ್ರೋಲ್ – ರೂ. 100.80, ಡೀಸೆಲ್ – ರೂ. 92.39
-
ಕೊಲ್ಕತ್ತಾ: ಪೆಟ್ರೋಲ್ – ರೂ. 105.41, ಡೀಸೆಲ್ – ರೂ. 92.02
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
-
ಬಾಗಲಕೋಟೆ: ರೂ. 103.26 (29 ಪೈಸೆ ಇಳಿಕೆ)
-
ಬೆಂಗಳೂರು: ರೂ. 102.55 (37 ಪೈಸೆ ಇಳಿಕೆ)
-
ಬೆಳಗಾವಿ: ರೂ. 103.73 (12 ಪೈಸೆ ಇಳಿಕೆ)
-
ಬಳ್ಳಾರಿ: ರೂ. 104.09 (ಬದಲಾವಣೆ ಇಲ್ಲ)
-
ಬೀದರ್: ರೂ. 104.08 (50 ಪೈಸೆ ಏರಿಕೆ)
-
ವಿಜಯಪುರ: ರೂ. 102.70 (80 ಪೈಸೆ ಇಳಿಕೆ)
-
ಚಿಕ್ಕಮಗಳೂರು: ರೂ. 104.08 (10 ಪೈಸೆ ಏರಿಕೆ)
-
ದಕ್ಷಿಣ ಕನ್ನಡ: ರೂ. 102.09 (48 ಪೈಸೆ ಇಳಿಕೆ)
-
ಮೈಸೂರು: ರೂ. 102.60 (01 ಪೈಸೆ ಏರಿಕೆ)
-
ಶಿವಮೊಗ್ಗ: ರೂ. 104.03 (22 ಪೈಸೆ ಏರಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
-
ಬಾಗಲಕೋಟೆ: ರೂ. 91.33
-
ಬೆಂಗಳೂರು: ರೂ. 90.65
-
ಬೆಳಗಾವಿ: ರೂ. 91.77
-
ಬಳ್ಳಾರಿ: ರೂ. 92.22
-
ಬೀದರ್: ರೂ. 92.16
-
ವಿಜಯಪುರ: ರೂ. 90.81
-
ಚಿಕ್ಕಮಗಳೂರು: ರೂ. 92.03
-
ದಕ್ಷಿಣ ಕನ್ನಡ: ರೂ. 90.18
-
ಮೈಸೂರು: ರೂ. 90.70
-
ಶಿವಮೊಗ್ಗ: ರೂ. 91.90
ಈ ದರಗಳು ಗ್ರಾಹಕರಿಗೆ ತಮ್ಮ ದೈನಂದಿನ ಖರ್ಚು ಯೋಜನೆಗೆ ಸಹಾಯಕವಾಗಿವೆ. ಇಂಧನ ಬೆಲೆಯ ಏರಿಳಿತವು ಅಂತಾರಾಷ್ಟ್ರೀಯ ಮಾರುಕಟ್ಟೆ, ತೆರಿಗೆ ವಿಧಾನಗಳು ಮತ್ತು ಒಟ್ಟಾರೆ ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಫುಲ್ ಟ್ಯಾಂಕ್ ಮಾಡುವ ಮುನ್ನ ಇಂಧನ ದರವನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯ ಅಭ್ಯಾಸವಾಗಿದೆ.





