• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

Cognizant: ಐಟಿ ವಲಯಕ್ಕೆ ಭರ್ಜರಿ ಸುದ್ದಿ, ಒಂದೇ ವರ್ಷದಲ್ಲಿ 21,000 ಉದ್ಯೋಗಿಗಳ ನೇಮಕ

ಆದಾಯದಲ್ಲೂ ಭಾರಿ ಏರಿಕೆ!

admin by admin
April 29, 2026 - 8:22 pm
in ವಾಣಿಜ್ಯ
0 0
0
BeFunky collage (18)

ಬೆಂಗಳೂರು: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಸಾಲು ಸಾಲು ಲೇ-ಆಫ್‌ಗಳಿಂದಾಗಿ ಕಂಗೆಟ್ಟಿದ್ದ ಭಾರತದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಜಾಗತಿಕ ಟೆಕ್ ದೈತ್ಯ ‘ಕಾಗ್ನಿಜೆಂಟ್’ ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಕಾಗ್ನಿಜೆಂಟ್ ಮಾತ್ರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷದ ಗಡಿ ದಾಟಿಸಿದೆ.

2026ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ (ಕ್ಯೂ1) ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿರುವ ಅಮೆರಿಕಾ ಮೂಲದ ಕಾಗ್ನಿಜೆಂಟ್, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕ್ಯೂ1 ನಲ್ಲಿ ಕಂಪನಿಯ ಆದಾಯವು ಶೇ. 5.8 ರಷ್ಟು ಏರಿಕೆ ಕಂಡು 5.4 ಬಿಲಿಯನ್ ಡಾಲರ್ (ಸುಮಾರು 51,200 ಕೋಟಿ ರೂ.) ತಲುಪಿದೆ. ಸ್ಥಿರ ಕರೆನ್ಸಿ ಲೆಕ್ಕಾಚಾರದಲ್ಲಿ ಇದು ಶೇ. 3.9ರಷ್ಟು ಬೆಳವಣಿಗೆಯಾಗಿದೆ.

RelatedPosts

ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಏರಿಕೆ

ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!

ಬಂಗಾರದ ಬೆಲೆ ಎಷ್ಟಿದೆ?: ಇಂದಿನ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ADVERTISEMENT
ADVERTISEMENT

ಆದರೆ, ಕಂಪನಿಯ ಕಾರ್ಯಾಚರಣೆ ಮಾರ್ಜಿನ್ ಈ ತ್ರೈಮಾಸಿಕದಲ್ಲಿ ಶೇ. 15.6ರಷ್ಟಿದ್ದು, ಹೊಂದಾಣಿಕೆಯ ಆಧಾರದ ಮೇಲೆ ಸ್ಥಿರವಾಗಿದ್ದರೂ, ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ ಕಂಡಿದೆ.

ಫೈನಾನ್ಶಿಯಲ್‌ ವಲಯದಲ್ಲಿ ಭರ್ಜರಿ ಬೆಳವಣಿಗೆ

ಫೈನಾನ್ಶಿಯಲ್‌ ಸರ್ವಿಸ್ ವಲಯ ಶೇ. 12.4ರಷ್ಟು ವೃದ್ಧಿ ಸಾಧಿಸಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ್ದರೆ, ಕಮ್ಯುನಿಕೇಶನ್ ಮತ್ತು ಮೀಡಿಯಾ ವಲಯ ಶೇ. 8.1ರಷ್ಟು ಹಾಗೂ ಪ್ರಾಡಕ್ಟ್ಸ್ ವಲಯ ಶೇ. 3.4ರಷ್ಟು ಬೆಳವಣಿಗೆ ದಾಖಲಿಸಿವೆ. ಭೌಗೋಳಿಕವಾಗಿ ನೋಡುವುದಾದರೆ, ಉತ್ತರ ಅಮೆರಿಕಾದಲ್ಲಿ ಶೇ. 5.1ರಷ್ಟು ಹಾಗೂ ಯುರೋಪ್ ಮಾರುಕಟ್ಟೆ ಶೇ. 3.5ರಷ್ಟು ಬೆಳವಣಿಗೆ ಕಂಡು ಬಂದಿದೆ.

ಎರಡನೇ ತ್ರೈಮಾಸಿಕದಲ್ಲಿ (ಕ್ಯೂ2) ಆದಾಯ ಶೇ. 3.8 ರಿಂದ ಶೇ. 5.3ರಷ್ಟು ವೃದ್ಧಿಯಾಗುವ ನಿರೀಕ್ಷೆಯನ್ನು ಕಾಗ್ನಿಜೆಂಟ್ ವ್ಯಕ್ತಪಡಿಸಿದ್ದು, 2026ರ ಪೂರ್ಣ ಆರ್ಥಿಕ ವರ್ಷದಲ್ಲಿ ಆದಾಯದ ಬೆಳವಣಿಗೆ ಶೇ. 4.8 ರಿಂದ ಶೇ. 7.3ರಷ್ಟಿರಲಿದೆ (ಸ್ಥಿರ ಕರೆನ್ಸಿಯಲ್ಲಿ ಶೇ. 4 ರಿಂದ ಶೇ. 6.5) ಎಂದು ಅಂದಾಜಿಸಿದೆ.

ಐಟಿ ವಲಯಕ್ಕೆ ನೆಮ್ಮದಿ ತಂದ Cognizant

ಟಿ‌ಸಿ‌ಎಸ್, ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ದೈತ್ಯ ಕಂಪನಿಗಳು ಉದ್ಯೋಗ ನೇಮಕಾತಿಯನ್ನು ತಗ್ಗಿಸುತ್ತಿರುವ ಹೊತ್ತಿನಲ್ಲೇ, ಕಾಗ್ನಿಜೆಂಟ್ ಹೊಸ ನೇಮಕಾತಿಯಲ್ಲಿ ಮುಂಚೂಣಿಯಲ್ಲಿದೆ. ಕ್ಯೂ1 ಅಂತ್ಯದ ವೇಳೆಗೆ ಅಂದರೆ ಮಾರ್ಚ್ 31, 2026ರ ಕೊನೆಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಬರೋಬ್ಬರಿ 3,57,600ಕ್ಕೆ ತಲುಪಿದೆ.
ಕಳೆದ ಒಂದೇ ತ್ರೈಮಾಸಿಕದಲ್ಲಿ 6,000 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ (2025ರ ಕ್ಯೂ1) ಹೋಲಿಸಿದರೆ ಉದ್ಯೋಗಿಗಳ ಸಂಖ್ಯೆಯಲ್ಲಿ 21,300ರಷ್ಟು ಭಾರಿ ಏರಿಕೆ ಕಂಡಿದೆ. ಕಾಗ್ನಿಜೆಂಟ್‌ನ ಹೆಚ್ಚಿನ ಉದ್ಯೋಗಿಗಳು ಭಾರತದಲ್ಲೇ ಇರುವುದರಿಂದ, ಇದು ದೇಶದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ರಿಲೀಫ್ ನೀಡಿದೆ.

ಇನ್ನು ಕಂಪನಿ ಬಿಟ್ಟು ಹೋಗುವ ಉದ್ಯೋಗಿಗಳ ಪ್ರಮಾಣ (ಅಟ್ರಿಷನ್‌ ದರ) ಶೇ. 12.3ರಷ್ಟಿದ್ದು ಸ್ಥಿರವಾಗಿದೆ.

ಭಾರಿ ಒಪ್ಪಂದ, ಎಐನತ್ತ ಕಂಪನಿ ಚಿತ್ತ

ಕ್ಯೂ1 ನಲ್ಲಿ ಕಾಗ್ನಿಜೆಂಟ್‌ನ ಬುಕಿಂಗ್‌ಗಳಲ್ಲಿ ಶೇ. 21ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಕಳೆದ 12 ತಿಂಗಳ ಒಟ್ಟು ಬುಕಿಂಗ್ ಮೌಲ್ಯ 29.6 ಬಿಲಿಯನ್ ಡಾಲರ್ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 7 ಬೃಹತ್ ಡೀಲ್‌ಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಒಂದು 500 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಮೆಗಾ ಡೀಲ್ ಕೂಡ ಸೇರಿದೆ.

“ನಮ್ಮ ಎಐ ಆಧಾರಿತ ಕಾರ್ಯತಂತ್ರವು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಸ್ತುತ 5,000ಕ್ಕೂ ಹೆಚ್ಚು ಎಐ ಪ್ರಾಜೆಕ್ಟ್‌ಗಳು ನಡೆಯುತ್ತಿದ್ದು, ಶೇ. 40ರಷ್ಟು ಕೋಡಿಂಗ್ ಕೆಲಸಗಳನ್ನು ಎಐ ನೆರವಿನಿಂದಲೇ ಮಾಡಲಾಗುತ್ತಿದೆ” ಎಂದೂ ಕಂಪನಿಯ ಸಿಇಒ ರವಿ ಕುಮಾರ್ ಎಸ್ ತಿಳಿಸಿದ್ದಾರೆ.

ಆಸ್ಟ್ರೇಯಾ ಕಂಪನಿ ಖರೀದಿಸಲಿದೆ Cognizant

ತನ್ನ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾಗ್ನಿಜೆಂಟ್, ಐಟಿ ಸೇವಾ ಪೂರೈಕೆದಾರ ಕಂಪನಿಯಾದ ‘ಆಸ್ಟ್ರೇಯಾ’ವನ್ನು ಸುಮಾರು 600 ಮಿಲಿಯನ್ ಡಾಲರ್ (5,700 ಕೋಟಿ ರೂ.) ಮೌಲ್ಯದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಪ್ರಕ್ರಿಯೆ 2026ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತದ ಭೀತಿ ಎದುರಾಗಿರುವ ಈ ಸಮಯದಲ್ಲಿ, ಕಾಗ್ನಿಜೆಂಟ್‌ನ ಈ ಪಾಸಿಟಿವ್ ಬೆಳವಣಿಗೆ ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

1600

ಕಾರವಾರ ನೌಕಾನೆಲೆಯಲ್ಲಿ ‘ಮಾಲ್ವಾಣ್’ ಯುದ್ಧನೌಕೆ ಸೇರ್ಪಡೆ

by ಕವಿತಾ
July 23, 2026 - 7:17 am
0

1800

ಭಾರೀ ಮಳೆಯ ಎಚ್ಚರಿಕೆ: ದಕ್ಷಿಣ ಕನ್ನಡದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ!

by ಕವಿತಾ
July 23, 2026 - 6:44 am
0

Untitled design (48)

ಇಂದಿನಿಂದ ಕರ್ನಾಟಕದಲ್ಲಿ ಮತ್ತೆ ಕೆಲ ದಿನ ಮಳೆಯ ಪ್ರಮಾಣ ಇಳಿಕೆ

by ಕವಿತಾ
July 23, 2026 - 6:33 am
0

Untitled design (47)

ಇಂದಿನ ರಾಶಿಫಲ: ಹಣ, ಆರೋಗ್ಯ, ಉದ್ಯೋಗದಲ್ಲಿ ಯಾರಿಗೆ ಲಾಭ?

by ಕವಿತಾ
July 23, 2026 - 6:24 am
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ವ (43)
    ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!
    July 22, 2026 | 0
  • ಸ್ವ (15)
    ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆ ಏರಿಕೆ
    July 21, 2026 | 0
  • CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (6)
    ಇಂದಿನ ಚಿನ್ನದ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ!
    July 20, 2026 | 0
  • Image (17)
    ಬಂಗಾರದ ಬೆಲೆ ಎಷ್ಟಿದೆ?: ಇಂದಿನ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ
    July 19, 2026 | 0
  • ಜ್ಞಾನಪೀಠ ಪ್ರಶಸ್ತಿ (4)
    ‘ ಗಿಫ್ಟ್ ಸಿಟಿ’ಯಲ್ಲಿ ನೂತನ ‘ಗ್ಲೋಬಲ್ ಟೆಕ್ ಸೆಂಟರ್’ ಆರಂಭಿಸಿದ HCL ಟೆಕ್‌
    July 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version