• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಎಟಿಎಂ ಬಳಸುವವರು ಮಿಸ್ ಮಾಡದೇ ಓದಿ..!

ಮೇ 1 ರಿಂದ ಎಟಿಎಂ ಚಾರ್ಜ್ ಹೆಚ್ಚಳ..! ತಿಂಗಳಲ್ಲಿ ಎಷ್ಟು ಬಾರಿ ಹಣ ವಿತ್ ಡ್ರಾ ಮಾಡಬಹುದು..?

ಚಂದ್ರಮೋಹನ್ ಕೋಲಾರ by ಚಂದ್ರಮೋಹನ್ ಕೋಲಾರ
March 26, 2025 - 5:04 pm
in ವಾಣಿಜ್ಯ
0 0
0
Untitled design 2025 03 26t170230.775

2016ರಲ್ಲಿ ಭಾರತದಲ್ಲಿ ನೋಟು ಅಮಾನ್ಯೀಕರಣ ಘೋಷಣೆ ಮಾಡಲಾಗಿತ್ತು. ಹಿಂದಿದ್ದ 500 ರೂಪಾಯಿ ಮತ್ತು 1 ಸಾವಿರ ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂಪಡೆಯಲಾಗಿತ್ತು. ಇದರ ಬದಲಿಗೆ 500 ರೂಪಾಯಿ ಹೊಸ ನೋಟು ಮತ್ತು 2 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಇದಾದ ಬಳಿಕ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಶುರುವಾಗಿತ್ತು. ನೋಟು ಅಮಾನ್ಯೀಕರಣಕ್ಕೂ ಮೊದಲಿನಿಂದ ಯುಪಿಐ ಪೇಮೆಂಟ್ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಆದರೆ, ಅದು ಅಷ್ಟು ಜನಪ್ರಿಯವಾಗಿರಲಿಲ್ಲ. ನೋಟು ಅಮಾನ್ಯೀಕರಣದ ಬಳಿಕ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಕ್ರಾಂತಿ ನಡೆದಿದೆ.

ದೊಡ್ಡ ಮಾಲ್‌ಗಳಿಂದ ಹಿಡಿದು, ಬೀದಿ ಬದಿ ತರಕಾರಿ ಮಾರುವವರು ಈಗ ಯುಪಿಐ ಪೇಮೆಂಟ್ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸ್ಕ್ಯಾನ್ ಅಂಡ್ ಪೇ ಈಗ ಭಾರತದಲ್ಲಿ ಭಾರಿ ಫೇಮಸ್ ಆಗಿದೆ. ನಿಮ್ಮ ಬಳಿ ಒಂದೇ ಒಂದು ಯುಪಿಐ ಆ್ಯಪ್ ಇಲ್ಲ ಎಂದರೆ ಜನ ನಿಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಅಷ್ಟರ ಮಟ್ಟಿಗೆ ಯುಪಿಐ ಕ್ರಾಂತಿ ಆಗಿದೆ. ಇಷ್ಟಾದರೂ ಕೆಲವರು ಇಂದಿಗೂ ಹಣದ ವಹಿವಾಟು ನಡೆಸಲು ಬ್ಯಾಂಕುಗಳು, ಎಟಿಎಂಗಳನ್ನು ನಂಬಿದ್ದಾರೆ. ಅವರಿಗೆ ಆರ್‌ಬಿಐ ಶಾಕಿಂಗ್ ನ್ಯೂಸ್ ನೀಡಿದೆ.

RelatedPosts

RBI ಹೊಸ ರೂಲ್ಸ್: ಸಾಲದ EMI ಇನ್ಮುಂದೆ 3 ತಿಂಗಳಿಗೊಮ್ಮೆ ಬದಲಾಗುತ್ತಾ?

ಹೋಟೆಲ್ ಮಾಲೀಕರಿಗೆ ಸ್ವಿಗ್ಗಿಯಿಂದ ಹೊಸ ಗಿಫ್ಟ್!: ಬಂತು 24×7 ಕೆಲಸ ಮಾಡುವ ಎಐ ಬಿಸಿನೆಸ್ ಪಾರ್ಟ್ನರ್!

ಇಂದಿನ ಗೋಲ್ಡ್ ರೇಟ್: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ದರ ಇಲ್ಲಿದೆ

ಹೊಸ ಯೂಟ್ಯೂಬರ್‌ ಗಳಿಗೆ ಶಾಕ್: ಕೆಲವು ನಿಯಮಗಳು ಜಾರಿ

ADVERTISEMENT
ADVERTISEMENT

ಹಿರಿಯ ನಾಗರಿಕರು, ಯುಪಿಐ ಬಳಕೆ ಬಗ್ಗೆ ಗೊತ್ತಿಲ್ಲದಿರುವವರು ಈಗಲೂ ಬ್ಯಾಂಕು ಮತ್ತು ಎಟಿಎಂಗಳನ್ನು ನಂಬಿಕೊಂಡಿದ್ದಾರೆ. ಬ್ಯಾಂಕುಗಳಿಗಿಂತಲೂ ಎಟಿಎಂಗಳೇ ಇವರಿಗೆ ಆಧಾರವಾಗಿವೆ. ಹೆಚ್ಚಾಗಿ ಎಟಿಎಂ ಬಳಕೆ ಮಾಡುವವರಿಗೆ ಆರ್‌‌ಬಿಐ ಶಾಕ್ ನೀಡಿದೆ. ಈ ಹಿಂದಿನಿಂದಲೂ ಬ್ಯಾಂಕುಗಳು ಎಟಿಎಂ ಬಳಕೆದಾರ ಶುಲ್ಕ ಹೆಚ್ಚಿಸುವಂತೆ ಆರ್‌ಬಿಐ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮೇಲೆ ಒತ್ತಡ ಹೇರುತ್ತಿದ್ದವು. ಆದರೆ, ಆರ್‌ಬಿಐ ಮತ್ತು ಎನ್‌ಸಿಪಿಐ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದಿನದಿಂದ ದಿನಕ್ಕೆ ಎಟಿಎಂ ನಿರ್ವಹಣೆ ಹೊರೆ ಹೆಚ್ಚುತ್ತಿದೆ. ಹೀಗಾಗಿ ದಯವಿಟ್ಟು ಶುಲ್ಕ ಹೆಚ್ಚಿಸಿ ಎಂದು ಬ್ಯಾಂಕುಗಳು ಮನವಿ ಮಾಡಿದ್ದವು. ಇದಕ್ಕೆ ಈಗ ಒಪ್ಪಿಗೆ ಸಿಕ್ಕಿದೆ.

ಮೇ 1ರಿಂದ ಎಟಿಎಂ ಬಳಕೆ ಶುಲ್ಕ ಹೆಚ್ಚಳವಾಗಲಿದೆ. ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳನ್ನು ಮೆಟ್ರೋ ಸಿಟಿಗಳು ಎಂದು ಪರಿಗಣಿಸಲಾಗಿದೆ. ಈ ನಗರಗಳಲ್ಲಿ ತಮ್ಮದೇ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಲ್ಲಿ 5 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಇತರ ಬ್ಯಾಂಕುಗಳ ಎಟಿಎಂಗಳಲ್ಲಿ 3 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಹೆಚ್ಚುವರಿಯಾಗಿ ನಡೆಸುವ ಪ್ರತಿ ವಹಿವಾಟಿಗೆ ಪ್ರಸ್ತುತ 17 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಅದು 19 ರೂಪಾಯಿಗೆ ಏರಿಕೆಯಾಗಲಿದೆ.

ಮೆಟ್ರೋ ನಗರಗಳನ್ನು ಹೊರತುಪಡಿಸಿ ಇತರ ನಗರಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮದೇ ಬ್ಯಾಂಕಿನ ಎಟಿಎಂ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಿಗೆ ತಲಾ 5 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಹೆಚ್ಚುವರಿ ವಹಿವಾಟು ನಡೆಸಿದಲ್ಲಿ ಪ್ರತಿ ವಹಿವಾಟಿಗೆ 19 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಹಣಕಾಸು ಸಂಬಂಧಿತ ವಹಿವಾಟು ಎಂದರೆ, ನಗದು ಹಿಂಪಡೆಯುವುದಕ್ಕೆ ಎಟಿಎಂ ಬಳಸಿದಲ್ಲಿ 19 ರೂಪಾಯಿ, ಖಾತೆ ಸಂಬಂಧಿತ ವಹಿವಾಟು ಎಂದರೆ, ಖಾತೆಯಲ್ಲಿ ಉಳಿದಿರುವ ಹಣದ ಮಾಹಿತಿ, ಪಿನ್ ಚೇಂಜ್, ಮಿನಿ ಸ್ಟೇಟ್ಮೆಂಟ್ ಅಥವಾ ಇತರ ಮಾಹಿತಿ ಪಡೆಯಲು ಪ್ರತಿ ವಹಿವಾಟಿಗೆ 7 ರೂಪಾಯಿ ಶುಲ್ಕ ಪಾವತಿಸಬೇಕಿದೆ.

ಆರ್‌ಬಿಐ ನೀಡಿರುವ ಮಾಹಿತಿಯಂತೆ ಭಾರತದಲ್ಲಿ 2025ರ ಜನವರಿ ವೇಳೆಗೆ ಸುಮಾರು 2,16,706 ಎಟಿಎಂಗಳು ಕಾರ್ಯ ನಿರ್ವಹಿಸುತ್ತಿವೆ. 2021ರಲ್ಲಿ ಕಳೆದ ಬಾರಿ ಎಟಿಎಂ ಬಳಕೆದಾರರ ಶುಲ್ಕ ಹೆಚ್ಚಿಸಲಾಗಿತ್ತು. 15 ರೂಪಾಯಿ ಇದ್ದ ಶುಲ್ಕವನ್ನು 17 ರೂಪಾಯಿಗೆ ಹೆಚ್ಚಿಸಲಾಗಿತ್ತು. ಭಾರತದಲ್ಲಿ ನಗದು ರಹಿತ ವಹಿವಾಟು ಹೆಚ್ಚಳವಾದ ಬಳಿಕ ಎಟಿಎಂಗಳ ಬಳಕೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. 2023ರ ಜನವರಿ ವೇಳೆಗೆ ಭಾರತದಲ್ಲಿ ಎಟಿಎಂಗಳ ಮೂಲಕ ಸುಮಾರು 57 ಕೋಟಿ ವಹಿವಾಟುಗಳು ನಡೆದಿದ್ದವು. 2024ರ ಜನವರಿ ವೇಳೆಗೆ ಭಾರತದಲ್ಲಿ ಎಟಿಎಂ ವಹಿವಾಟುಗಳ ಸಂಖ್ಯೆ 52 ಕೋಟಿ 72 ಲಕ್ಷಕ್ಕೆ ಕುಸಿದಿತ್ತು.

2025ರ ಜನವರಿಯಲ್ಲಿ ಎಟಿಎಂ ವಹಿವಾಟಿನಲ್ಲಿ ಇನ್ನೂ ಕುಸಿತ ಕಂಡಿದೆ. 2025ರ ಜನವರಿಯಲ್ಲಿ ಭಾರತದಲ್ಲಿ 48 ಕೋಟಿ 83 ಲಕ್ಷ ವಹಿವಾಟುಗಳು ಎಟಿಎಂಗಳ ಮೂಲಕ ನಡೆದಿವೆ ಎಂದು ಆರ್‌ಬಿಐ ಹೇಳಿದೆ. 2024ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ತಿಂಗಳಿಗೆ ಸರಾಸರಿ 1 ಕೋಟಿ 43ಲಕ್ಷ ರೂಪಾಯಿ ನಗದನ್ನು ಎಟಿಎಂಗಳ ಮೂಲಕ ಹಿಂತೆಗೆದಿದ್ದಾರೆ. ನಗದು ಹಿಂತೆಗೆತದಲ್ಲಿ ಹಿಂದಿನ ವರ್ಷಕ್ಕಿಂತಾ ಶೇಕಡ 5.51ರಷ್ಟು ಹೆಚ್ಚಳ ಕಂಡಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ShareSendShareTweetShare
ಚಂದ್ರಮೋಹನ್ ಕೋಲಾರ

ಚಂದ್ರಮೋಹನ್ ಕೋಲಾರ

ಗ್ಯಾರಂಟಿ ನ್ಯೂಸ್ ಸಂಸ್ಥೆಯಲ್ಲಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಹಲವಾರು ಸುದ್ದಿವಾಹಿನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ 13 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಪ್ರಚಲಿತ ವಿದ್ಯಮಾನಗಳು, ವಿಜ್ಞಾನ - ತಂತ್ರಜ್ಞಾನ ರಂಗಗಳು ಇವರು ಆಸಕ್ತಿಯ ವಿಚಾರಗಳು. ಇದಲ್ಲದೆ ಇತಿಹಾಸ, ಆರ್ಥಿಕತೆ, ಬಾಹ್ಯಾಕಾಶ, ಕ್ರೀಡಾ ಸುದ್ದಿಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಮೋಟರ್ ಸ್ಪೋರ್ಟ್ ರೇಸಿಂಗ್ ವೀಕ್ಷಣೆ, ಬೈಕಿಂಗ್, ಪ್ರವಾಸ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸ್ಕ್ರೀನ್ಸ್ (18)

Instagram ಲೋಗೋ ಬದಲಾವಣೆ: ‘Instagzam’ ಎಂದು ಟ್ರೋಲ್ ಮಾಡಿದ ನೆಟ್ಟಿಗರು!

by ಶಾಲಿನಿ ಕೆ. ಡಿ
August 19, 2026 - 11:15 pm
0

ಸ್ಕ್ರೀನ್ಸ್ (17)

ಅ.1ರಿಂದ ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸಂಚಾರ

by ಶಾಲಿನಿ ಕೆ. ಡಿ
August 19, 2026 - 11:02 pm
0

ಸ್ಕ್ರೀನ್ಸ್ (16)

ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಮೊಬೈಲ್ ಕೊಟ್ಟ ಖದೀಮ ಅರೆಸ್ಟ್

by ಶಾಲಿನಿ ಕೆ. ಡಿ
August 19, 2026 - 10:46 pm
0

ಸ್ಕ್ರೀನ್ಸ್ (15)

ಶಿವರಾಜ್‌ಕುಮಾರ್ ಅಭಿನಯದ ‘ಕೂರ್ಮಾವತಾರ್’ ಸಿನಿಮಾ ಘೋಷಣೆ

by ಶಾಲಿನಿ ಕೆ. ಡಿ
August 19, 2026 - 10:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Image 9487587a
    RBI ಹೊಸ ರೂಲ್ಸ್: ಸಾಲದ EMI ಇನ್ಮುಂದೆ 3 ತಿಂಗಳಿಗೊಮ್ಮೆ ಬದಲಾಗುತ್ತಾ?
    August 19, 2026 | 0
  • ಮಾಡುವ ಎಐ
    ಹೋಟೆಲ್ ಮಾಲೀಕರಿಗೆ ಸ್ವಿಗ್ಗಿಯಿಂದ ಹೊಸ ಗಿಫ್ಟ್!: ಬಂತು 24×7 ಕೆಲಸ ಮಾಡುವ ಎಐ ಬಿಸಿನೆಸ್ ಪಾರ್ಟ್ನರ್!
    August 18, 2026 | 0
  • Untitled design
    ಇಂದಿನ ಗೋಲ್ಡ್ ರೇಟ್: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ದರ ಇಲ್ಲಿದೆ
    August 17, 2026 | 0
  • Untitled design (72)
    ಹೊಸ ಯೂಟ್ಯೂಬರ್‌ ಗಳಿಗೆ ಶಾಕ್: ಕೆಲವು ನಿಯಮಗಳು ಜಾರಿ
    August 16, 2026 | 0
  • Untitled design (69)
    ವಾಹನ ಸವಾರರಿಗೆ ಶಾಕ್: ಕರ್ನಾಟಕದಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಶುಲ್ಕ ಹೆಚ್ಚಳ!
    August 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version