ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಇಂದು ಬೆಂಕಿ ಕಾವು. ಹಳೇ ಸೀಸನ್ ಸ್ಪರ್ಧಿಗಳಾದ ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಅತಿಥಿಗಳಾಗಿ ಬಂದಿದ್ದರು. ಬಿಗ್ ಬಾಸ್ ನೀಡಿದ “ರೋಸ್ಟ್ ಟಾಸ್ಕ್”ನಲ್ಲಿ ಗಿಲ್ಲಿ ನಟ ಅವರು ಮುಲಾಜಿಲ್ಲದೇ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು. ಆದರೆ ಅವರ ಖಾರ ಮಾತುಗಳು ಉಗ್ರಂ ಮಂಜು ಮತ್ತು ರಜತ್ ಅವರನ್ನು ತೀವ್ರ ಕೋಪಕ್ಕೆ ಒಳಗೊಳಿಸಿದವು. ಮನೆಯಲ್ಲಿ ಭಾರೀ ಗಲಾಟೆ ನಡೆದಿದ್ದು, ಗಿಲ್ಲಿ ಅವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡಿಂಗ್ ಆಗಿವೆ.
“ಉಗ್ರಂ ಮಂಜು ಗ್ರೇ ಏರಿಯಾ ಅಲ್ಲ, ಮಲೇರಿಯಾ”.“ತ್ರಿವಿಕ್ರಮ್ ಟಾಸ್ಕ್ ಮಾಸ್ಟರ್ ಅಂತ ಬಂದ್ರು, ಆದ್ರೆ ಇಲ್ಲಿ ರಿಟೈರ್ ಆಗಿರುವ ಹೆಡ್ ಮಾಸ್ಟರ್ ಥರ ಕೂತಿದ್ದಾರೆ”. “ಏಜು-ಸೈಜು ನೋಡದೇ ಸೈಡ್ ಹೊಡೆದು ಸೀಲ್ ಮಾಡಿಬಿಡ್ತೀವಿ”. “ನೆಂಟರು ಬಂದು ಚೆನ್ನಾಗಿ ತಿಂದು ಮೇಲೂ ದವಲತ್ತು ತೋರಿಸ್ತಾರೆ. ತಿಂದು ಹಾಕೋರಿಗೆ ಇಷ್ಟು ದವಲತ್ತು ಇದ್ರೆ, ತಂದು ಹಾಕೋ ನಮಗೆ ಎಷ್ಟು ಇರಬೇಕು? “ಜಡ್ಜಸ್ ಇಲ್ಲಿ ಬೂಸ್ಟ್ ಕೊಡ್ತಾರೆ ಅಂತ ಬಂದಿದ್ದೆ, ಆದ್ರೆ ನನ್ನ ಕೈಯಲ್ಲಿ ಸಿಕ್ಕಿ ಡಿಪ್ರೆಷನ್‌ಗೆ ಹೋಗಿದ್ದಾರೆ.
ಈ ಮಾತುಗಳನ್ನು ಕೇಳಿ ಮನೆಯ ಸ್ಪರ್ಧಿಗಳು ಹೊಟ್ಟೆ ಹುಣ್ಣಾಗುವಷ್ಟು ನಕ್ಕರೂ, ಅತಿಥಿಗಳ ಮುಖ ಗಂಭೀರವಾಗಿತ್ತು. ಉಗ್ರಂ ಮಂಜು ಮತ್ತು ರಜತ್ ಅವರು ತಮ್ಮ ಕೋಪವನ್ನು ತಡೆಯಲಾರದೇ ಗಿಲ್ಲಿ ಮೇಲೆ ಗುಡುಗಿದರು.
ರಜತ್ ಫೈರ್:
“ನಾವು ಇಲ್ಲಿ ಮೊದಲೇ ಬಂದು ಹೋಗಿದ್ದೀವಿ. ಅತಿಥಿಗಳು ಬಂದಾಗ ನಾವು ಮಧ್ಯದಲ್ಲಿ ಮಾತಾಡ್ತಾ ಇರಲಿಲ್ಲ. ಇವನು ಇಷ್ಟು ಕಿರಿಕಿರಿ ಅಂತ ಹೊರಗಿದ್ದಾಗ ಗೊತ್ತಿರಲಿಲ್ಲ. ಒಂದು ಸಾರಿ ಹೇಳಿದ್ರೆ ಅರ್ಥ ಆಗಲ್ಲ. ನಮ್ಮ ತಾಯಾಣೆಗೂ ಕಿರಿಕಿರಿ ಆಗ್ತಿದೆ” ಎಂದು ರಜತ್ ಕೂಗಾಡಿದರು.
ಮೋಕ್ಷಿತಾ ಪೈ ಕೂಡ ಗಿಲ್ಲಿಗೆ ಕ್ಲಾಸ್ ತೆಗೆದುಕೊಂಡರು. “ಎಲ್ಲ ಸಮಯದಲ್ಲೂ ತಮಾಷೆ ಚೆನ್ನಾಗಿರಲ್ಲ. ಟಾಸ್ಕ್ ಅರ್ಥ ಮಾಡಿಕೊಂಡು ಮಾಡಿದ್ರೆ ಒಳ್ಳೆಯದು.”
ಬಿಗ್ ಬಾಸ್ ಸಹ ಮಧ್ಯ ಪ್ರವೇಶಿಸಿ “ಸಭ್ಯತೆ ಮೀರದಂತೆ ರೋಸ್ಟ್ ಮಾಡಿ” ಎಂದು ನಿಯಮ ನೆನಪಿಸಿದರು. ನಂತರ ಕ್ಯಾಪ್ಟನ್ ಅಭಿಷೇಕ್ ಮತ್ತು ಗಿಲ್ಲಿ ಎಲ್ಲರ ಬಳಿ ಕ್ಷಮೆ ಕೇಳಿದರು. ಆದರೆ ಗಿಲ್ಲಿ ನಟ ಮತ್ತೆ ಮಾತನಾಡಲು ಶುರು ಮಾಡಿದ್ದೇ ರಜತ್ ಅವರನ್ನು ಮತ್ತಷ್ಟು ಕೋಪಗೊಳಿಸಿತು.
ಗಿಲ್ಲಿ ಅವರ ರೋಸ್ಟ್ ನೋಡಿ ಅಭಿಮಾನಿಗಳು ಎರಡು ಭಾಗಕ್ಕೆ ವಿಭಜನೆಯಾಗಿದ್ದಾರೆ. “ಗಿಲ್ಲಿ ರಾಕಿಂಗ್ಇದಕ್ಕೇ ಹೇಳ್ತಾರೆ ರೋಸ್ಟ್ ಕಿಂಗ್” ಅಂತ ಟ್ರೋಲ್ ಮಾಡುತ್ತಿದ್ದಾರೆ. “ಅತಿಯಾದರೆ ಅಮೃತವೂ ವಿಷ. ಗಿಲ್ಲಿ ತುಂಬಾ ಓವರ್ ಆಗಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಿಲ್ಲಿ ನಟನ ಈ ಖಾರ ರೋಸ್ಟ್ ಬಿಗ್ ಬಾಸ್ ಮನೆಯಲ್ಲಿ ಮುಂದೆ ಏನೆಲ್ಲಾ ಗಲಾಟೆಗೆ ಕಾರಣವಾಗುತ್ತದೆ ಎಂಬುದನ್ನು ವೀಕ್ಷಕರು ಕಾದು ನೋಡುತ್ತಿದ್ದಾರೆ.





