ಬಿಗ್ ಬಾಸ್ ಕನ್ನಡ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಮೂವರು ಸ್ಪರ್ಧಿಗಳಾದ ರಿಷಾ ಗೌಡ, ಸೂರಜ್ ಮತ್ತು ಮ್ಯೂಟಂಟ್ ರಘು ಅವರ ಆಗಮನ ಬಿಗ್‌ಬಾಸ್ ಮನೆಯಲ್ಲಿ ಕೊಂಚ ಅಸಮಧಾನ ಸೃಷ್ಟಿಸಿದೆ. ಹೊಸದಾಗಿ ಬಂದ ಈ ಸ್ಪರ್ಧಿಗಳ ಬಗ್ಗೆ ಮನೆಯಲ್ಲಿದ್ದ ಹಳೇ ಸದಸ್ಯರಿಗೆ ಏನು ಅನಿಸುತ್ತದೆ ? ಇದರ ನೇರ ಉತ್ತರವನ್ನು ಕಾಕ್ರೋಚ್ ಸುಧಿ ವೈಲ್ಡ್‌ಕಾರ್ಡ್ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ಮನೆಯ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಬಿಗ್ ಬಾಸ್ ನಿರ್ದೇಶಿಸಿದ ಸಮಯದಲ್ಲಿ, ಸುಧಿ ತನ್ನ ನೇರವಾದ ಮತ್ತು ಹಾಸ್ಯದಾಯಕ ಶೈಲಿಯಲ್ಲಿ ಮೂವರ ಬಗೆಗೂ ಮಾತನಾಡಿದರು.
ಸುಧಿ ತನ್ನ ಮಾತನ್ನು ಆರಂಭಿಸಿದ್ದು ಮ್ಯೂಟಂಟ್ ರಘು ಅವರಿಂದಲೇ. ಮ್ಯೂಟಂಟ್ ರಘು ಬರುವಾಗ ತುಂಬಾನೇ ರಾಂಗು ಅಂತೆಲ್ಲಾ ಬಂದರು. ಭಯಾನಕವಾದ ವೇಷಭೂಷಣೆ, ಮ್ಯೂಟಂಟ್ ಅವತಾರ… ಎಲ್ಲರೂ ಏನೋ ದೊಡ್ಡ ವ್ಯಕ್ತಿತ್ವ ಬಂದಿದೆ ಅನ್ಕೊಂಡೆವು ಎಂದು ಸುಧಿ ಹೇಳಿದರು. ಆದರೆ, ನಿಜತ್ವ ಬೇರೆ ಇತ್ತು. ಕೊನೆಗೆ ನೋಡಿದ್ರೆ ಅವರು ದೊಡ್ಡ ಸೈಜ್ನಲ್ಲಿರುವ ಮಗು ಎನಿಸಿತು, ಎಂದು ಅವರ ಬಗ್ಗೆ ಹೇಳಿದರು. ಬೆಳಗ್ಗೆ ಬಂದಾಗ ಹೆಣ್ಮಕ್ಕಳಿಗೆ ‘ಹೋಗೆ’, ‘ಬಾರೆ’ ಅಂತ ಏಕವಚನದಲ್ಲಿ ಕರೆದಾಗ ಬೇಜಾರು ಆಯಿತು, ಉಳಿದಂತೆ ತುಂಬಾ ಒಳ್ಳೆಯವರು ಎಂದುಹೇಳಿದರು.
ನಂತರ ಸೂರಜ್ ಬಗ್ಗೆ ಮಾತನಾಡುತ್ತಾ, ಸೂರಜ್ ಈಗಷ್ಟೇ ಬಂದಿದ್ದಾರೆ. ಆದರೆ ಅವರ ಜೊತೆ ಕೆಲವೇ ಕೆಲವು ಮಾತುಗಳನ್ನ ಆಡಿದ್ದೇನೆ. ಹಾಗಾಗಿ ಅವರ ಬಗ್ಗೆ ಹೇಳಲು ಇನ್ನೂ ಬೇಕು ಎಂದು ಎಂದು ಹೇಳಿದ್ದಾರೆ.
ಇನ್ನೂ ರಿಷಾ ಗೌಡ ಬಗ್ಗೆ ಮಾತನಾಡು,ರಿಷಾ ಅತ್ಯಂತ ಆಕರ್ಷಕ ಮತ್ತು ವಿರೋಧಾಭಾಸದ ವ್ಯಕ್ತಿತ್ವ ಹೊಂದಿದ್ದಾರೆ. ಬರುವಾಗ ವಿಷದಂತೆ ಮಾತನ್ನಾಡುತ್ತ ಬಂದರು. ಆಗ ನನಗೆ ಗಾಬರಿ ಆಯಿತು. ಆದರೆ ನಂತರ ಅವರ ಜೊತೆ ಮಾತನ್ನಾಡುತ್ತ, ಮಾತನ್ನಾಡುತ್ತ ಹೋದಾಗ ಅರ್ಥ ಆಯಿತು. ಅದೇನಂದ್ರೆ ಅವರು ಆಗಾಗ ಬೇಕುಬೇಕು ಎನಿಸೋ ನಶೆ ರೀತಿ ಎಂದು ಎಂದು ಹೇಳಿದ್ದಾರೆ.
ಬೆಳಗ್ಗೆ ಎಲ್ಲರನ್ನೂ ಪ್ರೀತಿಯಿಂದ ಮಾತನ್ನಾಡಿಸಿದರು. ತುಂಬಾ ಲವಲವಿಕೆಯಿಂದ ಇದ್ದರು. ಇಡೀ ಮನೆಯನ್ನು ಹಬ್ಬದ ವಾತಾವರಣಕ್ಕೆ ಕೊಂಡೊಯ್ದರು. ಹೀಗಾಗಿ ನನ್ನ ಹೃದಯವನ್ನು ರಿಷಾಗೆ ಕೊಡ್ತೀನಿ ಎಂದು ಸುಧಿ ಹೇಳಿದ್ದಾರೆ.