ಬೆಂಗಳೂರು, ಅಕ್ಟೋಬರ್ 26: ಬಿಗ್ಬಾಸ್ ಕನ್ನಡ ಸೀಸನ್ 11ರ ಇಂದಿನ ಸಂಚಿಕೆ ‘ಸಂಡೇ ವಿತ್ ಬಾದ್ ಷಾ ಸುದೀಪ್’ ವೀಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಕಲರ್ಸ್ ಕನ್ನಡ ಚಾನೆಲ್ ಬಿಡುಗಡೆ ಮಾಡಿರುವ ಪ್ರೊಮೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಅಭಿಮಾನಿಗಳ ಎಕ್ಸೈಟ್ಮೆಂಟ್ ಅನ್ನು ಡಬಲ್ ಮಾಡಿವೆ.
ಮಲ್ಲಮ್ಮನ ಆಟಕ್ಕೆ ಧ್ರುವಂತ್ ಮುಳ್ಳಾದ್ರಾ?
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/KmbdJYe8Sk
— Colors Kannada (@ColorsKannada) October 26, 2025
ಈ ವಾರದ ಮನೆಯೊಳಗಿನ ಆಟದಲ್ಲಿ ಮಲ್ಲಮ್ಮ ಮತ್ತು ಧ್ರುವಂತ್ ಅವರ ತಂತ್ರಗಾರಿಕೆ ಎಲ್ಲರ ಗಮನ ಸೆಳೆದಿದೆ. ಇದೀಗ ಇವರ ಆಟದ ಬಗ್ಗೆ ಕಿಚ್ಚ ಸುದೀಪ್ ಅವರ ಮುಂದೆಯೇ ತೀವ್ರ ಚರ್ಚೆ ನಡೆಯಲಿದೆ. ಕಾಕ್ರೋಚ್, ಗಿಲ್ಲಿ ಮತ್ತು ಇತರ ಸ್ಪರ್ಧಿಗಳು ಮಲ್ಲಮ್ಮ ಅವರ ಆಟದ ವೈಖರಿ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಗಿಲ್ಲಿ, ಮಲ್ಲಮ್ಮ ಅವರನ್ನು ಟಾರ್ಗೆಟ್ ಮಾಡಿ ನಿನ್ನ ಆಟ ಸಂಪೂರ್ಣ ತಪ್ಪು ಎಂದು ರಾಗ ಎಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮಲ್ಲಮ್ಮ ಕೂಡ ಸುಮ್ಮನೆ ಇರದೆ ಕಾಕ್ರೋಚ್ ಮತ್ತು ಗಿಲ್ಲಿಗೆ ತಿರುಗೇಟು ನೀಡಿದ್ದಾರೆ. ಆದರೆ ಕಾಕ್ರೋಚ್ ಮಲ್ಲಮ್ಮ ವಿರುದ್ಧ ಮಾತನಾಡಿದ್ದಕ್ಕೆ ಧ್ರುವಂತ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ ಕಿಚ್ಚ ಸುದೀಪ್ ಅವರ ರಿಯಾಕ್ಷನ್ ಏನಾಗಲಿದೆ ಎಂಬ ಕುತೂಹಲ ಈಗ ಗಗನಕ್ಕೇರಿದೆ. ಧ್ರುವಂತ್ ಮತ್ತು ಕಿಚ್ಚ ನಡುವಿನ ಸಂಭಾಷಣೆ ಎಪಿಸೋಡ್ನ ಮೇಜರ್ ಹೈಲೈಟ್ ಆಗಲಿದೆ.
ಕಾವುನ ಗಿಲ್ಲಿ ನೋಡಿದ್ದು ಎಲ್ಲಿ?
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKSP pic.twitter.com/qrdmRdlN5S
— Colors Kannada (@ColorsKannada) October 26, 2025
ಇಂದಿನ ಸಂಚಿಕೆಯಲ್ಲಿ ನಗುವಿನ ಅಲೆಯೇ ಹರಿಯಲಿದೆ. ಗಿಲ್ಲಿ ಅವರನ್ನು ನೋಡುತ್ತಲೇ ಕಿಚ್ಚ ಸುದೀಪ್ “ಕ್ಲೀನ್ ಕೃಷ್ಣಪ್ಪ!” ಎಂದು ತಮಾಷೆ ಮಾಡಿದ್ದಾರೆ. ಕಾವ್ಯ ಅವರು ಗಿಲ್ಲಿಯನ್ನು ಟೀಸ್ ಮಾಡುತ್ತಾ “ನೀನು ಮನೆಯ ಕಾಮೆಡಿ ಕಿಂಗ್” ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಪ್ರೊಮೋದಲ್ಲಿ ಕಾಣಿಸಿಕೊಂಡ ಈ ಸೀನ್ಗಳು ವೀಕ್ಷಕರನ್ನು ನಗೆಯಿಂದ ಸುಸ್ತಾಗಿಸುವುದು ಖಚಿತ. ಗಿಲ್ಲಿ ಮತ್ತು ಕಾವ್ಯಯ ಜೋಡಿ ಈ ವಾರದ ‘ಫನ್ ಫ್ಯಾಕ್ಟರ್’ ಆಗಿ ಮಾರ್ಪಟ್ಟಿದೆ.
ಮಲ್ಲಮ್ಮನ ಆಟಕ್ಕೆ ಧ್ರುವಂತ್ ಮುಳ್ಳಾದ್ರಾ?
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/KmbdJYe8Sk
— Colors Kannada (@ColorsKannada) October 26, 2025
ಬಿಗ್ಬಾಸ್ ಮನೆಯಲ್ಲಿ ತಮಗೆ ಇಷ್ಟವಾಗದ ಸ್ಪರ್ಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಲು ವಿಶೇಷ ಚಟುವಟಿಕೆ ಇದೆ – ‘ತಲೆಗೆ ಪಟಾರ್’! ಇದರಲ್ಲಿ ಯಾರಿಗಾದರೂ ಏನು ಹೇಳಬೇಕೆಂದರೆ, ತಲೆ ಮೇಲೆ ಹೊಡೆದಂತೆ ನೇರವಾಗಿ ಹೇಳಿಬಿಟ್ಟು ಬನ್ನಿ ಎಂಬ ನಿಯಮ. ಈ ಚಟುವಟಿಕೆಯಲ್ಲಿ ಮಲ್ಲಮ್ಮ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಶ್ವಿನಿ ಗೌಡ ಮೇಲೆ ಕಾವ್ಯ ಆಕ್ರೋಶ ವ್ಯಕ್ತಪಡಿಸಿದರೆ, ಜಾಹ್ನವಿ ಮತ್ತು ರಿಷಾ ಗೌಡ ನಡುವೆ ಪರಸ್ಪರ ಆಕ್ರೋಶದ ಸಂಭಾಷಣೆ ನಡೆದಿದೆ. ರಿಷಾ ಗೌಡ ಜಾಹ್ನವಿಯನ್ನು ಟಾರ್ಗೆಟ್ ಮಾಡಿದರೆ, ಜಾಹ್ನವಿ ಕೂಡ ರಿಷಾಗೆ ತಿರುಗೇಟು ನೀಡಿದ್ದಾರೆ. ಈ ಚಟುವಟಿಕೆಯಲ್ಲಿ ಎಲ್ಲರೂ ತಮ್ಮ ಮನಸ್ಸಿನಲ್ಲಿದ್ದ ಆಕ್ರೋಶವನ್ನು ಒಡೆದು ಹಾಕಿದ್ದಾರೆ.





