ಬಿಗ್ಬಾಸ್ ಕನ್ನಡ ಸೀಸನ್‌ನ ಇತ್ತೀಚಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕಳೆದ ನಾಲ್ಕು ವಾರಗಳಿಂದ ತೆರೆಮರೆಯಲ್ಲಿದ್ದ ಮೂವರು ಸ್ಪರ್ಧಿಗಳಾದ ಧನುಷ್, ಅಭಿಷೇಕ್ ಮತ್ತು ಸ್ಪಂದನಾ ಸೋಮಣ್ಣ ಅವರನ್ನು ಸ್ವಾಗತಿಸಿದ್ದಾರೆ. ಈ ವಾರ ಧನುಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಮನೆಯ ಲವ್ ಬರ್ಡ್ಸ್ ಸೂರಜ್ ಮತ್ತು ರಾಶಿಕಾ ಅವರ ಪ್ರೀತಿಯ ವಿಷಯವನ್ನು ಸುದೀಪ್ ಬಯಲುಗೊಳಿಸಿದ್ದಾರೆ. ಜೊತೆಗೆ, ಸ್ಪರ್ಧಿಗಳಿಗೆ ಎಚ್ಚರಿಕೆಯಿಂದ ಆಟವಾಡುವಂತೆ ಸಲಹೆ ನೀಡಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ತಡವಾಗಿ ಆಟ ಆರಂಭಿಸಿದ ಧನುಷ್, ಅಭಿಷೇಕ್ ಮತ್ತು ಸ್ಪಂದನಾ ಸೋಮಣ್ಣ ಅವರನ್ನು ಉದ್ದೇಶಿಸಿ, “ನೀವು ಎಲ್ಲಿ ಕಾಣೆಯಾಗಿದ್ದಿರಿ? ಈಗ ಕಾಣಿಸಿಕೊಂಡಿದ್ದೀರಿ, ಆದರೆ ಎಚ್ಚರಿಕೆಯಿಂದ ಆಟವಾಡಿ” ಎಂದು ಹೇಳಿದರು. ಧನುಷ್ ಈ ವಾರ ಕ್ಯಾಪ್ಟನ್ ಆಗಿ ಕಾಣಿಸಿಕೊಂಡರೆ, ಸ್ಪಂದನಾ ನಾಮಿನೇಷನ್‌ನಿಂದ ತಪ್ಪಿಸಿಕೊಂಡು ಆಟದಲ್ಲಿ ಸಕ್ರಿಯರಾಗಿದ್ದಾರೆ. ಅಭಿಷೇಕ್ ಕೂಡ ಟಾಸ್ಕ್‌ಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಮೂವರ ಬಗ್ಗೆ ಚರ್ಚೆಯೂ ಜೋರಾಗಿತ್ತು.

ಸ್ಪರ್ಧಿಗಳಲ್ಲಿ ಗಮನ ಸೆಳೆದಿರುವ ಅಶ್ವಿನಿ ಗೌಡರಿಗೆ ಸುದೀಪ್ ವಿಶೇಷ ಎಚ್ಚರಿಕೆ ನೀಡಿದ್ದಾರೆ. “ಅಶ್ವಿನಿ, ನಿಮ್ಮನ್ನು ಹಗ್ಗ ಹಾಕಿ ಹಿಡಿದರೂ ನೀವು ನಿಲ್ಲುತ್ತಿಲ್ಲ. ಈ ವಾರ ನಿಮಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ, ಮುಂದಿನ ವಾರ ಹುಷಾರಾಗಿರಿ” ಎಂದು ಸುದೀಪ್ ಹೇಳಿದರು. ಇದಕ್ಕೆ ಸ್ಮೈಲ್ ನೀಡಿದ ಅಶ್ವಿನಿ, ಮೂವರ ಸ್ಪರ್ಧಿಗಳನ್ನು ಸ್ವಾಗತಿಸಿದರು.
ಸೂರಜ್-ರಾಶಿಕಾ ಲವ್
ಬಿಗ್‌ಬಾಸ್ ಮನೆಯಲ್ಲಿ ಸೂರಜ್ ಮತ್ತು ರಾಶಿಕಾ ಜೋಡಿಯ ಪ್ರೀತಿಯ ವಿಷಯವೂ ಚರ್ಚೆಗೆ ಗ್ರಾಸವಾಯಿತು. ಆರಂಭದಲ್ಲಿ “ನಾವು ಐ ಲವ್ ಯು ಎಂದಿಲ್ಲ” ಎಂದು ವಾದಿಸಿದ ಈ ಜೋಡಿ, ಸುದೀಪ್ ವಿಡಿಯೋ ಕ್ಲಿಪ್ ತೋರಿಸುವುದಾಗಿ ಹೇಳಿದಾಗ ತಮ್ಮ ಪ್ರೀತಿಯನ್ನು ಒಪ್ಪಿಕೊಂಡರು. ಈ ಲವ್ ಸ್ಟೋರಿ ವೀಕ್ಷಕರ ಗಮನ ಸೆಳೆದಿದೆ.





