‘ಬಿಗ್ ಬಾಸ್ ಕನ್ನಡ 12’ ಮನೆಯೊಳಗೆ ಈ ವಾರ ವಿಲನ್ ಕಂಟ್ರೋಲ್ ವಾರವಾಗಿದ್ದರಿಂದ, ಸ್ಪರ್ಧಿಗಳ ನಡುವೆ ಹೊಸ ಆಟಗಳು ನಡೆಯುತ್ತಿದ್ದವು. ಈ ಟಾಸ್ಕ್‌ನ ಮುಖ್ಯ ಭಾಗವಾಗಿದ್ದ ಗಿಲ್ಲಿ, ನಟ ಅಶ್ವಿನಿ ಗೌಡ ಅವರಿಗೆ ಬಿಗ್ ಬಾಸ್ ಒಂದು ಮಹತ್ವದ ಸೀಕ್ರೆಟ್ ಟಾಸ್ಕ್ ನೀಡಿದ್ದರು. ಈ ಟಾಸ್ಕ್‌ನಲ್ಲಿ ಎರಡು ಮುಖ್ಯ ಹಂತಗಳಿದ್ದು, ಅವುಗಳನ್ನು ಯಶಸ್ವಿಯಾಗಿ ಪೂರೈಸಿದರೆ ಗಿಲ್ಲಿಗೆ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತಿತ್ತು.
ಸೀಕ್ರೆಟ್ ಟಾಸ್ಕ್‌ನಲ್ಲಿ ಗಿಲ್ಲಿ ಮೊದಲಿಗೆ ಕಾವ್ಯ ಶೈವ ಅವರನ್ನು ಅಳಿಸುವಂತೆ ಮಾಡಬೇಕು. ಮತ್ತೊಂದು ಸೀಕ್ರೆಟ್ ಎಂದರೆ ಕಿಚ್ಚನ ಚಪ್ಪಾಳೆ ಫೋಟೋವನ್ನು ಯಾರಿಗೂ ಗೊತ್ತಾಗದಂತೆ ಕದ್ದು ಸ್ಟೋರ್‌ರೂಮ್‌ಗೆ ಹಾಕಬೇಕು. ಎರಡೂ ಟಾಸ್ಕ್‌ಗಳನ್ನು ಗಿಲ್ಲಿ ನಟ ಅತ್ಯಂತ ಚೆನ್ನಾಗಿ, ಮನೆ ಮಂದಿಗೆ ತಿಳಿಯದಂತೆ ಪೂರ್ಣಗೊಳಿಸಿದರು. ಆದರೆ, ಸೀಕ್ರೆಟ್ ಟಾಸ್ಕ್ ಯಶಸ್ಸಿನ ನಂತರವೂ ಗಿಲ್ಲಿಗೆ ಕಾವ್ಯ ಶೈವ ಅವರು ವಿಲನ್ ಪಟ್ಟ ನೀಡಿದ್ದಾರೆ.
ಕಾವ್ಯ ಶೈವ ಆಯ್ಕೆ ಮಾಡಿದ ‘ವಿಲನ್‌ಗಳು’
ಬಿಗ್ ಬಾಸ್ ನೀಡಿದ ಹೊಸ ಟಾಸ್ಕ್‌ನಲ್ಲಿ, ಪ್ರತಿ ಸ್ಪರ್ಧಿಯೂ ಮನೆಗೆ ವಿಲನ್ ಯಾರು ಎಂಬುದನ್ನು ಘೋಷಿಸಬೇಕಾಗಿತ್ತು. ಕಾವ್ಯ ಶೈವ ಅವರ ಆಯ್ಕೆ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಅವರು ಗಿಲ್ಲಿಗೂ, ರಕ್ಷಿತಾ ಗೂ ಕೂಡ ವಿಲನ್ ಟ್ಯಾಗ್ ನೀಡಿದರು. ವಿಶೇಷವಾಗಿ ರಕ್ಷಿತಾ ಬಗ್ಗೆ ಮಾತನಾಡಿದಾಗ ಕಾವ್ಯ, “ಒಂದೊಂದು ವ್ಯಕ್ತಿಗೆ ಒಂದೊಂದು ಫಾರ್ಮುಲಾ ಯೂಸ್ ಮಾಡ್ತಾಳೆ. ಅವಳ ಭಾಷೆ, ವರ್ತನೆ ಎಲ್ಲವೂ ಸ್ಟ್ರಾಟಜಿಯ ಭಾಗ. ಕುತಂತ್ರಿ ಸ್ವಭಾವ ರಕ್ಷಿತಾಗೆ ಹೆಚ್ಚು” ಎಂದು ಹೇಳಿದರು.
ಇದಕ್ಕೆ ರಕ್ಷಿತಾ ತೀವ್ರವಾಗಿ ಪ್ರತಿಕ್ರಿಯಿಸಿ, “ಕಾವ್ಯ ಒಳ್ಳೆಯ ಕಾಂಪಿಟೇಟರ್ ಅಲ್ಲ. ವಾದಕ್ಕೆ ಬರುತ್ತಲೇ ಇಲ್ಲ. ವಿಷಯವನ್ನು ಕತ್ತರಿಸಿ ಸ್ಟಾಪ್ ಮಾಡ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಿಲ್ಲಿ vs ಕಾವ್ಯ – ನಾಮಿನೇಶನ್‌ಗೆ ಕಾರಣವಾದ ಜಗಳ
ಕಾವ್ಯ ಮತ್ತು ಗಿಲ್ಲಿ ನಡುವಿನ ಸಂಬಂಧ ಟಾಸ್ಕ್ ನಂತರ ಬದಲಾಯಿಸಿತು. ನಿನ್ನೆ ನಡೆದ ಎಪಿಸೋಡಿನಲ್ಲಿ ಕಾವ್ಯ, ಗಿಲ್ಲಿಗೆ ಬಂದ ಸೀಕ್ರೆಟ್ ಟಾಸ್ಕ್ ಬಗ್ಗೆ ನೇರವಾಗಿ ಪ್ರಶ್ನಿಸಿದರು. ಗಿಲ್ಲಿ ವಿಷಯವನ್ನು ವಿವರಿಸಿದರೂ, ಆದರೆ ಕಾವ್ಯ ಅವರಿಗೆ ಸಮಾಧಾನ ನೀಡಲಿಲ್ಲ. ಅಂತಿಮವಾಗಿ “ಗಿಲ್ಲಿ ನಟ ರೇಗಿಸ್ತಾರೆ, ಕೇಳೋದಿಲ್ಲ. ಮನೆಯಲ್ಲಿ ಭಾವನೆಗಳಿಂದ ಆಡುತ್ತಿಲ್ಲ” ಎಂಬ ಕಾರಣ ನೀಡಿ ಕಾವ್ಯ, ಗಿಲ್ಲಿ ಶೈವ ಅವರನ್ನು ನಾಮಿನೇಟ್ ಮಾಡಿದರು.
ಈ ನಿರ್ಧಾರ ಗಿಲ್ಲಿಗೆ ದೊಡ್ಡ ಶಾಕ್ ಆಗಿದ್ದು, ಕಣ್ಣೀರನ್ನು ತಡೆಯಲಾಗದೆ, ಕಾವ್ಯ ನೀಡಿದ ಟ್ಯಾಗ್ ಮತ್ತು ನಾಮಿನೇಶನ್ ಬಗ್ಗೆ ಬೇಸರ ಹಂಚಿಕೊಂಡರು.
ಕಾವ್ಯಗೆ ಗಿಲ್ಲಿ ಹೇಳಿದ ಮಾತುಗಳು ಬೇಸರ ತಂದಿತ್ತು. “ನೀನು ಪ್ರಿ-ಪ್ರೊಡಕ್ಟ್. ಇದೇ ವರೆಗೆ ಏನೂ ಮಾಡಿಲ್ಲ. ಕೇವಲ ಮೇಕಪ್ ಹಾಕಿಕೊಂಡು ಕೂತಿದೀಯಾ! ನಿನ್ನ ಜೊತೆ ಜಂಟಿ ಆಡುವುದು ತಪ್ಪಾಯಿತು. ಒಂದೇ ತಟ್ಟೆಯಲ್ಲಿ ಊಟ ಮಾಡಿ, ಬೆನ್ನಿಗೆ ಚೂರಿ ಹಾಕ್ತೀಯಾ…” ಎಂದು ಗಿಲ್ಲಿ ಹೇಳಿದ್ದರು.





