ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್’ (Bigg Boss Kannada) ಸೀಸನ್-12 ಮುಕ್ತಾಯಕ್ಕೆ ಕೇವಲ ಎರಡೇ ವಾರ ಬಾಕಿ ಉಳಿದಿದೆ. ಅಂತಿಮವಾಗಿ ಟಾಪ್-5 ಹಂತವನ್ನು ಯಾರು ತಲುಪಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಆದರೆ, ಫಿನಾಲೆ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳ ನಡುವಿನ ತಾಳ್ಮೆ ಕಡಿಮೆಯಾಗುತ್ತಿದೆ. ಮನೆಯೊಳಗಿನ ಜಗಳ ಹೆಚ್ಚಾಗುತ್ತಿದೆ.
ರಕ್ಷಿತಾ ಮತ್ತು ರಾಶಿಕಾ ನಡುವೆ ಬಿಗ್ ಫೈಟ್
ಇತ್ತೀಚಿನ ಟಾಸ್ಕ್‌ವೊಂದರ ಸಂದರ್ಭದಲ್ಲಿ ಬಿಗ್‌ಬಾಸ್ ತಂಡಗಳನ್ನು ರಚಿಸಿಕೊಳ್ಳುವಂತೆ ಸೂಚಿಸಿದ್ದರು. ಈ ವೇಳೆ ರಾಶಿಕಾ ಅವರು ರಕ್ಷಿತಾರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು. ಒಬ್ಬರಿಗೊಬ್ಬರು ಏಕವಚನದಲ್ಲಿ ನಿಂದಿಸುತ್ತ ಜಗಳ ಮಾಡಿದರು. ಈ ನಡುವೆ ಗಿಲ್ಲಿಯನ್ನೂ ಮಧ್ಯದಲ್ಲಿ ತಂದು ಅವರೊಂದಿಗೂ ಸಿಟ್ಟಿನಲ್ಲಿ ಮಾತನಾಡುತ್ತಾರೆ ರಾಶಿಕಾ.
ಗಿಲ್ಲಿಯನ್ನು ಟಾರ್ಗೆಟ್ ಮಾಡಿದ ರಾಶಿಕಾ
ರಕ್ಷಿತಾ ಮತ್ತು ರಾಶಿಕಾ ನಡುವಿನ ಜಗಳದ ಮಧ್ಯೆ ಬಂದ ಗಿಲ್ಲಿ , ರಕ್ಷಿತಾ ಪರವಾಗಿ ಮಾತನಾಡಲು ಪ್ರಯತ್ನಿಸಿದರು. ಇದು ರಾಶಿಕಾ ಕೋಪವನ್ನು ಹೆಚ್ಚಿಸಿತು. ನಮ್ಮ ವಿಷಯದಲ್ಲಿ ನೀನ್ಯಾರು ಮಾತನಾಡಲು ? ಎನ್ನುವ ಅರ್ಥದಲ್ಲಿ ರಾಶಿಕಾ ಅವರು ಗಿಲ್ಲಿಯನ್ನು ಟಾರ್ಗೆಟ್ ಮಾಡಿ ಹರಿಹಾಯ್ದಿದ್ದಾರೆ. ಆದರೆ ಗಿಲ್ಲಿ ಹೆಚ್ಚಾಗಿ ಮಾತನಾಡದೇ ರಾಶಿಕಾಗೆ ಉತ್ತರಿಸಿ, ರಕ್ಷಿತಾ ಪರ ವಾದ ಮಾಡುತ್ತಾರೆ. ಈ ಹಿಂದೆಯೂ ರಕ್ಷಿತಾ ಮತ್ತು ಅಶ್ವಿನಿ ನಡುವೆ ಜಗಳವಾದಾಗ ಆಗಲೂ ಸಹ ಗಿಲ್ಲಿ ರಕ್ಷಿತಾಗೆ ಬೆಂಬಲಿಸಿದ್ದರು ಹೀಗೆ ಪ್ರತಿ ಬಾರಿ ರಕ್ಷಿತಾ ಪರ ನಿಲ್ಲುವ ಹಾಗೆ ಈ ಬಾರಿಯೂ ಅವರ ಪರವಾಗೇ ನಿಂತಿದ್ದಾರೆ.
ಗಿಲ್ಲಿ ಕೈ ಸೇರುತ್ತಾ ಸೀಸನ್-12 ಟ್ರೋಫಿ ?
ಒಂದೆಡೆ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದರೆ, ಹೊರಗಡೆ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಸದ್ಯದ ಜನಾಭಿಪ್ರಾಯದ ಪ್ರಕಾರ, ಗಿಲ್ಲಿ ಈ ಬಾರಿಯ ಬಿಗ್‌ಬಾಸ್ ಕಪ್ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಅವರ ಆಟದ ವೈಖರಿ ಮತ್ತು ಮನೆಯಲ್ಲಿ ನಡೆದುಕೊಳ್ಳುವ ರೀತಿ ಅಭಿಮಾನಿಗಳಿಗೆ ಇಷ್ಟವಾಗಿದೆ.
ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು, ಫಿನಾಲೆಗೆ ಇನ್ನು ಕೇವಲ ಎರಡು ವಾರ ಇರುವುದರಿಂದ ಪ್ರತಿಯೊಬ್ಬ ಸ್ಪರ್ಧಿಯೂ ಅಂತಿಮ ಐವರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ಈ ವಾರ ಯಾರು ಮನೆಯಿಂದ ಹೊರಬೀಳಲಿದ್ದಾರೆ ಎಂಬುದು ವಾರಾಂತ್ಯದ ಪಂಚಾಯಿತಿಯಲ್ಲಿ ನಿರ್ಧಾರವಾಗಲಿದೆ.





