ಬಿಗ್ ಬಾಸ್ ಕನ್ನಡ ಸೀಸನ್ 12 ಈ ವಾರ ರೊಮಾಂಚನದಿಂದ ತುಂಬಿದೆ. ಒಂದರ ಹಿಂದೊಂದು ಟಾಸ್ಕ್‌ಗಳು ನಡೆದು, ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಶ್ರಮಿಸಿದ್ದಾರೆ. ಆದರೆ, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರ ಕುತಂತ್ರಗಳು ಮನೆಯನ್ನು ಬೆಚ್ಚಿ ಬೀಳಿಸಿವೆ. ಅಶ್ವಿನಿ ಗೌಡ ತಂಡದಲ್ಲಿ ರಕ್ಷಿತಾ ಇದ್ದರೂ, ಗಿಲ್ಲಿ ತಂಡದೊಂದಿಗೆ ಗುಟ್ಟಾಗಿ ಮಾತನಾಡಿ, ತಂತ್ರಗಳನ್ನು ಹೆಣೆದಿದ್ದಾರೆ. ಇದು ಅಶ್ವಿನಿಗೆ ತೀವ್ರ ಕೋಪ ದಂದಿದೆ. ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಈ ವಿಷಯವನ್ನು ಖಡಕ್ ಆಗಿ ಪ್ರಸ್ತಾಪಿಸಿ, ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ವೀಕೆಂಡ್ ಬಂದೊಡನೆ ವೀಕ್ಷಕರು ಹೊಸ ಪ್ರೋಮೋಗೆ ಕಾಯುತ್ತಾರೆ. ಯಾರಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಇದೆ. ಈ ಬಾರಿ ಗಿಲ್ಲಿ ಮತ್ತು ರಕ್ಷಿತಾ ಅವರ ಆಟಕ್ಕೆ ಸುದೀಪ್ ಗಮನ ಹರಿಸಿದ್ದಾರೆ. ಪ್ರೋಮೋದಲ್ಲಿ ಸುದೀಪ್ ಮಾತನಾಡಿರುವಂತೆ, “ಬಿಗ್ ಬಾಸ್ ಮನೆಯ ಉದ್ದೇಶವನ್ನು ಪಕ್ಕಕ್ಕಿಟ್ಟು, ಸೀಕ್ರೆಟ್ ಮ್ಯಾಚ್ ಆರಂಭಿಸಿದ್ರೆ ಒಂದು ಮಟ್ಟದವರೆಗೆ ಸರಿ. ಆದರೆ ಉಲ್ಟಾ ಹೊಡೆಯಲು ಹೋದ್ರೆ, ಟ್ರಾಜಡಿ ಅಲ್ಲಿಂದ ಶುರು!” ಎಂದಿದ್ದಾರೆ. ಈ ಮೂಲಕ ಮೂರನೇ ತಂಡದಂತೆ ಕಾಣುವ ಗಿಲ್ಲಿ-ರಕ್ಷಿತಾ ಜೋಡಿಗೆ ಸುದೀಪ್ ಖಡಕ್ ಸಂದೇಶ ನೀಡಿದ್ದಾರೆ.
ಟಾಸ್ಕ್ ಸಮಯದಲ್ಲಿ ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಶೆಟ್ಟಿ ಸೇರಿದ್ದರು. ಆದರೆ, ಗಿಲ್ಲಿ ಮತ್ತು ರಕ್ಷಿತಾ ಗುಟ್ಟಾಗಿ ಮಾತನಾಡಿ, ತಂತ್ರಗಳನ್ನು ರೂಪಿಸಿದ್ದರು. ಇದು ಅಶ್ವಿನಿಗೆ ತೀವ್ರ ಸಿಟ್ಟು ತಂದಿತು. ಅಶ್ವಿನಿ ರಕ್ಷಿತಾ ಮೇಲೆ ಕೂಗಾಡಿ, ಆಕ್ರೋಶ ವ್ಯಕ್ತಪಡಿಸಿದರು. ಗಿಲ್ಲಿ ರಕ್ಷಿತಾಳನ್ನು ತನ್ನ ಕೈಗೊಂಬೆಯಂತೆ ಬಳಸಿಕೊಂಡು, ತಂಡದ ವಿರುದ್ಧವೇ ಆಟವಾಡಿದ್ದಾರೆ ಎಂಬ ಆರೋಪ ಬಂದಿದೆ.
ರಕ್ಷಿತಾ ತಂಡ ಟಾಸ್ಕ್‌ನಲ್ಲಿ ಗೆದ್ದಿತು. ಇದರಿಂದ ತಂಡದ ಒಬ್ಬ ಸದಸ್ಯನ್ನು ನಾಮಿನೇಷನ್‌ನಿಂದ ಉಳಿಸಬೇಕಿತ್ತು. ಚರ್ಚೆಗೆ ಮುನ್ನ ಗಿಲ್ಲಿ, ರಕ್ಷಿತಾ ಬಳಿ ಬಂದು ಮಾತನಾಡಿದರು. ರಕ್ಷಿತಾ ಆಗಾಗ ಎದುರಾಳಿ ತಂಡದ ಗಿಲ್ಲಿಯಿಂದ ಸುಳಿವು ಪಡೆದು, ತಂಡದ ನಿರ್ಧಾರಕ್ಕೆ ವಿರೋಧವಾಗಿ ನಡೆದುಕೊಂಡರು.
ರಾಶಿಕಾ ಶೆಟ್ಟಿ ವಿಚಾರದಲ್ಲೂ ರಕ್ಷಿತಾ ತಪ್ಪಿದ್ದಾರೆ. ನಾಮಿನೇಷನ್‌ನಿಂದ ತಪ್ಪಿಸಲು ಅಶ್ವಿನಿ ತಂಡದ ಬಹುತೇಕರು ರಾಶಿಕಾಳನ್ನು ಸೇಫ್ ಮಾಡಲು ಮತ ಹಾಕಿದ್ದರು. ಆದರೆ ರಕ್ಷಿತಾ ಸುಧಿ ಹೆಸರನ್ನು ತೆಗೆದುಕೊಂಡರು. ಇದು ರಾಶಿಕಾಳಿಗೆ ಕೋಪ ತಂದಿತು. “ಪ್ರತಿ ವಾರ ನಾನು ನಾಮಿನೇಟ್ ಆಗುತ್ತೇನೆ” ಎಂದು ರಾಶಿಕಾ ಆಕ್ರೋಶ ವ್ಯಕ್ತಪಡಿಸಿದರು. ರಕ್ಷಿತಾ ಉತ್ತರಿಸಿ, “ನಾವೂ ನಾಮಿನೇಷನ್ ಎದುರಿಸಿದ್ದೇವೆ” ಎಂದರು. ಆದರೆ ತಂಡದ ಒಮ್ಮತದ ನಿರ್ಧಾರಕ್ಕೆ ರಕ್ಷಿತಾ ವಿರೋಧ ವ್ಯಕ್ತಪಡಿಸಿ ಕೂಗಾಡಿದರು.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅವರೆಂದರೆ ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್. ಇವರಲ್ಲಿ ಬಹುತೇಕರನ್ನು ನಾಮಿನೇಟ್ ಮಾಡಿರುವುದು ಕ್ಯಾಪ್ಟನ್ ಮಾಳು ನಿಪನಾಳ್. ಗಿಲ್ಲಿ-ರಕ್ಷಿತಾ ಜೋಡಿಯ ಕುತಂತ್ರಗಳು ನಾಮಿನೇಷನ್‌ಗೆ ಕಾರಣವಾಗಿವೆಯೇ? ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಈ ಎಲ್ಲ ವಿಷಯಗಳನ್ನು ಚರ್ಚಿಸಿ, ಖಡಕ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.





