ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿ ಗಿಲ್ಲಿ ತಮಾಷೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಾವ್ಯಾ ಮೇಲಿನ ಆಕರ್ಷಣೆಯನ್ನು ತಮಾಷೆಯ ರೀತಿಯಲ್ಲಿ ವ್ಯಕ್ತಪಡಿಸುವ ಗಿಲ್ಲಿ, ಕಾವ್ಯಾ ಬೇರೆಯವರ ಜೊತೆ ಡ್ಯಾನ್ಸ್ ಮಾಡುವುದನ್ನು ನೋಡಿ ‘ಪೆಚ್ಚು ಮೋರೆ’ಯಾಗಿದ್ದ ದೃಶ್ಯ ಈಗ ವೈರಲ್ ಆಗಿದೆ. ಆದರೆ, ತಮಗೆ ಸಿಕ್ಕ ಡ್ಯಾನ್ಸ್ ಅವಕಾಶವನ್ನು ಗಿಲ್ಲಿ ಕಾವ್ಯಾ ಜೊತೆ ಸದ್ದುಗೊಂಗಿಸಿದ್ದಾರೆ.
ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ‘ಬಿಬಿ ಕಾಲೇಜು’ ಟಾಸ್ಕ್ ನಡೆಯಿತು. ಸ್ಪರ್ಧಿಗಳೆಲ್ಲ ವಿದ್ಯಾರ್ಥಿಗಳಾಗಿ, ಕ್ಯಾಪ್ಟನ್ ರಘು ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡರು. ಈ ಟಾಸ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ಒಂದಿತ್ತು, ಇದರಲ್ಲಿ ಸ್ಪರ್ಧಿಗಳು ಜೋಡಿಯಾಗಿ ಡ್ಯಾನ್ಸ್ ರಿಹರ್ಸಲ್ ಮಾಡಿದರು. ಈ ವೇಳೆ ಸೂರಜ್ ಜೊತೆ ಕಾವ್ಯಾ ಡ್ಯಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದಾಗ, ಗಿಲ್ಲಿ ಹೊರಗೆ ನಿಂತು ‘ಕದ್ದು-ಮುಚ್ಚಿ’ ಇವರ ಡ್ಯಾನ್ಸ್‌ಗೆ ಪೆಚ್ಚು ಮೋರೆ ಹಾಕಿಕೊಂಡರು. ಈ ದೃಶ್ಯವನ್ನು ಕ್ಯಾಮೆರಾ ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಷಯವನ್ನು ಎತ್ತಿ, ಗಿಲ್ಲಿಯ ತಮಾಷೆಯನ್ನು ಚರ್ಚಿಸಿದರು. ಗಿಲ್ಲಿ, “ಕಾವ್ಯಾ ಮತ್ತು ಸೂರಜ್ ಡ್ಯಾನ್ಸ್ ಚೆನ್ನಾಗಿ ಮೂಡಿಬರಲಿಲ್ಲ. ಅವರಿಗೆ ಹೊಂದಾಣಿಕೆಯೇ ಆಗಲಿಲ್ಲ. ಇದಕ್ಕೆ ನನ್ನ ಶಾಪವೇ ಕಾರಣ” ಎಂದು ತಮಾಷೆಯಾಗಿ ಹೇಳಿದರು. ಇದು ಪ್ರೇಕ್ಷಕರ ನಗೆಗೆ ಕಾರಣವಾಯಿತು.
ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಸ್ಪರ್ಧಿಗಳಿಗೆ ಡ್ಯಾನ್ಸ್ ಟಾಸ್ಕ್ ನೀಡಿದರು. ಧನುಷ್ ಜೊತೆ ಕಾವ್ಯಾ ಡ್ಯಾನ್ಸ್ ಮಾಡಿದಾಗಲೂ ಗಿಲ್ಲಿ ಪೆಚ್ಚು ಮೋರೆಯಿಂದ ಅವರನ್ನು ಗಮನಿಸಿದರು. ಆದರೆ, ಗಿಲ್ಲಿಗೆ ಡ್ಯಾನ್ಸ್ ಅವಕಾಶ ಸಿಕ್ಕಾಗ, ಅವರು ಕಾವ್ಯಾವನ್ನೇ ಆಯ್ಕೆ ಮಾಡಿ, ಸುದೀಪ್ ಅವರ ಸಿನಿಮಾ ಹಾಡಿಗೆ ಜೋಡಿಯಾಗಿ ಡ್ಯಾನ್ಸ್ ಮಾಡಿದರು. ಈ ಜೋಡಿಯ ಡ್ಯಾನ್ಸ್ ಪ್ರೇಕ್ಷಕರಿಂದ ಭರಪೂರ ಚಪ್ಪಾಳೆ ಗಿಟ್ಟಿಸಿತು.
ಬಿಗ್‌ಬಾಸ್ ಕನ್ನಡ ಸೀಸನ್ 12 ತಮಾಷೆ, ಡ್ರಾಮಾ ಮತ್ತು ರೋಮಾಂಚಕ ಕ್ಷಣಗಳಿಂದ ಕೂಡಿದೆ. ಗಿಲ್ಲಿಯ ತಮಾಷೆಯ ವರ್ತನೆ ಮತ್ತು ಕಾವ್ಯಾ ಜೊತೆ ಡ್ಯಾನ್ಸ್‌ನ ರೋಮಾಂಚಕ ಕ್ಷಣಗಳಿಗಾಗಿ ಮುಂದಿನ ಸಂಚಿಕೆಗೆ ಕಾಯಿರಿ.





