ಬಿಗ್ ಬಾಸ್ ಕನ್ನಡ ಸೀಸನ್ 12ಯಲ್ಲಿ ಈ ವೀಕೆಂಡ್ ದೊಡ್ಡ ಟ್ವಿಸ್ಟ್ ನಡೆದಿದೆ. ಶನಿವಾರದಂದು ಅನಿರೀಕ್ಷಿತವಾಗಿ ಸೂರಜ್ ಸಿಂಗ್ ಎಲಿಮಿನೇಟ್ ಆಗಿ ಮನೆಯಿಂದ ಹೊರಬಿದ್ದರು. ಭಾನುವಾರದ ಎಪಿಸೋಡ್‌ನಲ್ಲಿ ಮಾಳು ನಿಪ್ಪನಾಳ್ ಕೂಡ ಎಲಿಮಿನೇಟ್ ಆಗಿ ಡಬಲ್ ಎಲಿಮಿನೇಷನ್ ಪೂರ್ಣಗೊಂಡಿದೆ. ಸ್ಪಂದನಾ ಸೇಫ್ ಆಗಿ ಮನೆಯಲ್ಲಿ ಮುಂದುವರೆಯುತ್ತಿದ್ದಾರೆ.
ಪ್ರೋಮೋದಲ್ಲಿ ಕಾಣಿಸಿದಂತೆ ಎರಡು ಕಾರುಗಳು ಮನೆಗೆ ಬಂದು ಮಾಳು ಮತ್ತು ಸ್ಪಂದನಾ ಅವರನ್ನು ಕರೆದೊಯ್ದವು. ಆದರೆ ಒಂದು ಕಾರು ಮಾತ್ರ ವಾಪಸ್ ಬಂದಿದ್ದು, ಅದರಲ್ಲಿ ಸ್ಪಂದನಾ ಇಳಿದು ಮನೆಗೆ ಮರಳಿದ್ದಾರೆ. ಇದರಿಂದ ಮಾಳು ಎಲಿಮಿನೇಟ್ ಆಗಿರುವುದು ದೃಢಪಟ್ಟಿದೆ.
ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಸೂರಜ್ ಸಿಂಗ್ ಆಟದಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದ್ದರು. ಆದರೆ ಕಡಿಮೆ ಸ್ಕ್ರೀನ್ ಟೈಮ್ ಮತ್ತು ವೋಟ್‌ಗಳ ಕೊರತೆಯಿಂದ ಶನಿವಾರವೇ ಎಲಿಮಿನೇಟ್ ಆಗಿದ್ದಾರೆ. ಇದು ವೀಕ್ಷಕರಿಗೆ ದೊಡ್ಡ ಶಾಕ್ ಆಗಿತ್ತು.
ಮಾಳು vs ಸ್ಪಂದನಾ ಕುತೂಹಲಕ್ಕೆ ತಿರುಗುಬಾನ, ಬಾಟಮ್ 2ರಲ್ಲಿ ಇದ್ದ ಮಾಳು ಮತ್ತು ಸ್ಪಂದನಾ ಅವರಲ್ಲಿ ಯಾರು ಹೊರಗೆ ಹೋಗುತ್ತಾರೆ ಎಂಬ ಕುತೂಹಲ ಇತ್ತು. ಆದರೆ ಮಾಳು ನಿಪ್ಪನಾಳ್ ಎಲಿಮಿನೇಟ್ ಆಗಿ ಸ್ಪಂದನಾ ಸೇಫ್ ಆಗಿದ್ದಾರೆ. ಮಾಳು ಅವರು ಮನೆಯಲ್ಲಿ ಚೆನ್ನಾಗಿ ಆಡದೇ ಇದ್ದುದು ಮತ್ತು ಕಡಿಮೆ ವೋಟ್‌ಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ಅಶ್ವಿನಿ ಗೌಡ ಮತ್ತು ರಘು ನಡುವೆ ಆತ್ಮೀಯ ಬಾಂಧವ್ಯ ಬೆಳೆಯುತ್ತಿದೆ. ಅಶ್ವಿನಿ ರಘುಗೆ “ಅಣ್ಣ” ಎಂದು ಕರೆಯದೇ ಇರುವುದು ಮತ್ತು ಇಬ್ಬರ ನಡುವಿನ ಕೆಮಿಸ್ಟ್ರಿ ಮನೆಯ ಹೈಲೈಟ್ ಆಗಿದೆ. ಗೆಸ್ಟ್ ಅನುಪಮಾ ಗೌಡ ಮುಂದೆಯೂ ಇಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಗಿಲ್ಲಿ ನಟ ಈ ವಾರ ಕ್ಯಾಪ್ಟನ್ ಆಗಿ ಮಿಂಚುತ್ತಿದ್ದಾರೆ. ಸೀಸನ್ ಫೈನಲ್ ಹತ್ತಿರವಾಗುತ್ತಿದ್ದಂತೆ ಡ್ರಾಮಾ ಮತ್ತು ಟ್ವಿಸ್ಟ್‌ಗಳು ಹೆಚ್ಚಾಗುತ್ತಿವೆ. ಮುಂದಿನ ಎಪಿಸೋಡ್‌ಗಳಲ್ಲಿ ಯಾರು ಸೇಫ್, ಯಾರು ಔಟ್ ಎಂಬುದನ್ನು ನೋಡೋಣ.





