Bigg Boss Kannada 12 ಮನೆಯಲ್ಲಿ ಅರ್ಧ ಸೀಸನ್ ಮುಗಿದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ ರಜತ್, ಮನೆಗೆ ಕಾಲಿಟ್ಟ ಕ್ಷಣದಿಂದಲೇ ವಾತಾವರಣ ಬದಲಿಸಿದ್ದಾರೆ. ವಿಶೇಷವಾಗಿ ನಾಮಿನೇಶನ್ ಪ್ರಕ್ರಿಯೆ ವೇಳೆ ರಜತ್ ಬಳಕೆ ಮಾಡಿದ ಕಠಿಣ ಪದಗಳು ಹಲವು ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡಿದ್ದು, ಅವರ ವರ್ತನೆ ಬಗ್ಗೆ ಮನೆಯೊಳಗೆ ಹೊಸ ಚರ್ಚೆಗೆ ಚಾಲನೆ ನೀಡಿದೆ.
ನಾಮಿನೇಶನ್ ದಿನ: ರಜತ್‌ನಿಂದ ಕೆಟ್ಟ ಪದಬಳಕೆ
ಈ ವಾರದ ನಾಮಿನೇಶನ್ ನಲ್ಲಿ ಸ್ಪರ್ಧಿಯನ್ನು ನಾಮಿನೇಟ್ ಮಾಡಿದ ಬಳಿಕ ಅವರನ್ನು ನೀರಿಗೆ ತಳ್ಳಬೇಕಾಗಿತ್ತು. ಆದರೆ ಈ ಟಾಸ್ಕ್ ಸಮಯದಲ್ಲಿ ರಜತ್ “ಸಡೆ, ವೇಸ್ಟ್, ನನ್ ಮಗ” ಎಂಬ ರೀತಿಯ ಪದಗಳನ್ನು ಬಳಸಿದ್ದು ಮನೆಯ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.
ಧ್ರುವಂತ್, ಅಶ್ವಿನಿ ಗೌಡ ಸೇರಿದಂತೆ ಹಲವರು ರಜತ್‌ನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಗೆ ಹೊಸತನ ತರುವ ಬದಲು ಗದ್ದಲ, ಜಗಳ ಮತ್ತು ಅವಮಾನಕಾರಿ ಪದಗಳ ಬಳಕೆಯಿಂದಲೇ ರಜತ್ ತಮ್ಮ ಹಾದಿ ಪ್ರಾರಂಭಿಸಿದ್ದಾರೆ ಎಂಬ ಟೀಕೆ ಕೇಳಿಬಂದಿದೆ.
ಸ್ಪಂದನಾ vs ರಜತ್ – ಮುಖಾಮುಖಿ ಘರ್ಷಣೆ
ಸ್ಪಂದನಾ ಅವರು ರಜತ್ ಅವರನ್ನು ನಾಮಿನೇಟ್ ಮಾಡಿದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆಯಿತು. ಸ್ಪಂದನಾ, “ಇಷ್ಟು ದಿನ ನೀನು ಏನು ಮಾಡಿದ್ರಿ? ಏನೂ ಮಾಡ್ಲಿಲ್ಲದೇ ಇದ್ದೀಯಾ?” ಎಂದು ಕೇಳಿದಾಗ ರಜತ್ ಪ್ರತಿಕ್ರಿಯಿಸಿದರು.
“ನೀನು ಸುಮ್ಮನೇ ಬಂದಿರೋದು! ಟಾಸ್ಕ್‌ಗಳಲ್ಲಿ ಅದ್ಭುತವಾಗಿ ಏನಾದರೂ ಮಾಡಿದ್ದೀಯಾ? ನಿನ್ನಿಗೇನು ಮಾತನಾಡೋ ಹಕ್ಕು?” ಎಂದು ರಜತ್ ಧಿಡೀರ್ ಕೌಂಟರ್ ಕೊಟ್ಟರು. “ನಾನು ಆಟ ಶುರು ಮಾಡಿ ಒಂದು ವಾರವಾಯ್ತು. ಆದರೆ ಇಲ್ಲಿಯವರೆಗೂ ನಡೆದದ್ದು ಏನು?” ಎಂದು ಸ್ಪಂದನಾಗೆ ಪ್ರಶ್ನೆ ಮಾಡಿದರು.
ಅಶ್ವಿನಿ–ರಜತ್
ಅಶ್ವಿನಿ ಗೌಡ ಮತ್ತು ರಜತ್ ನಡುವಿನ ಘರ್ಷಣೆ ಈ ವಾರದ ಮತ್ತೊಂದು ಹೈಲೈಟ್ ಆಗಿದೆ. ಅಶ್ವಿನಿ, “ನಿನ್ನ ಮಾತುಗಳು ತುಂಬಾ ಕೀಳುಮಟ್ಟದವು” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಜತ್ ಕೂಡ ಹಿಂದೆ ಸರಿಯದೇ “ನೀನು ಕಣೇ ಕಚಡ” ಎಂದು ತಿರುಗೇಟು ನೀಡಿದರು.
ಗಿಲ್ಲಿ ಟಾರ್ಗೆಟ್ ಮಾಡಿದ ಅಶ್ವಿನಿ
ಗಿಲ್ಲಿ–ಅಶ್ವಿನಿ ಕೂಡ ಈ ವಾರ ಬದಲಾಗಿದೆ. ಗಿಲ್ಲಿ, ಅಶ್ವಿನಿ ಅವರ ವರ್ತನೆ ಬಗ್ಗೆ, “ಜಾನ್ವಿಯನ್ನು ತೆಗೆದುಕೊಂಡು ಫೂಟೇಜ್ ಹುಡುಕುತ್ತಿದ್ದಳು. ಅವರು ಹೋದ ಬಳಿಕ ಮಂಕಾಗಿಬಿಟ್ಟಳು. ಬದಲಾಗುತ್ತೇನೆ ಎಂದಾದರೂ, ಯಾವುದೇ ಬದಲಾವಣೆ ತೋರಲಿಲ್ಲ. ಮತ್ತೆ ಹಳೆಯ ಶೈಲಿಗೆ ಮರಳಿದ್ದಾಳೆ” ಎಂದು ಹೇಳಿ ಗಟ್ಟಿಯಾಗಿ ಟಾರ್ಗೆಟ್ ಮಾಡಿದರು.





