ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಇದೀಗ ಅತ್ಯಂತ ದೊಡ್ಡ ಟ್ವಿಸ್ಟ್ ಒಂದು ನಡೆದಿದೆ. ಮನೆಯ ಜನರಿಗೆಲ್ಲಾ “ಕುಚಿಕು ಗೆಳಯ” ಎಂದೇ ಖ್ಯಾತರಾಗಿದ್ದ ರಘು ಹಾಗೂ ಗಿಲ್ಲಿ ನಟ ನಡುವೆ ಬಿರುಕು ಮೂಡಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ರಘು ಅವರು ತಮ್ಮ ಅತ್ಯಂತ ಹತ್ತಿರದ ಸ್ನೇಹಿತ ಗಿಲ್ಲಿಯನ್ನೇ ನಾಮಿನೇಷನ್‌ಗೆ ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಗಿಲ್ಲಿಯ ಬೆನ್ನಿಗೆ ಚೂರಿ ಚುಚ್ಚಿ ನಾಮಿನೇಟ್ ಮಾಡುವ ದೃಶ್ಯವನ್ನು ನೋಡಿ ವೀಕ್ಷಕರು “ಬಾಹುಬಲಿ” ಸಿನಿಮಾದ ಕಟ್ಟಪ್ಪ-ಬಾಹುಬಲಿ ಸೀನ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದೆಲ್ಲ ಹೇಗೆ ಶುರುವಾಯ್ತು?
ಧನುಷ್‌ಗೆ ಬಿಗ್ ಬಾಸ್ ನೀಡಿದ್ದ ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗೆ ರ್ಯಾಂಕಿಂಗ್ ಕೊಡಬೇಕಿತ್ತು. ಧನುಷ್ ಗಿಲ್ಲಿಗೆ ಎರಡನೇ ಸ್ಥಾನ ಕೊಟ್ಟಿದ್ದು ರಘುವಿಗೆ ಅಸಮಾಧಾನ ಉಂಟು ಮಾಡಿತ್ತು. “ನನ್ನ ಗೆಳಯನಿಗೆ ಎರಡು ಸ್ಥಾನವೇಕೆ?” ಎಂದು ರಘು ಕೋಪಗೊಂಡರು. ಅಲ್ಲಿಂದಲೇ ಎರಡು ದಿನಗಳಿಂದಲೂ ರಘು-ಗಿಲ್ಲಿ ನಡುವೆ ಮಾತಿನ ಚಕಮಕಿ ಶುರುವಾಯ್ತು. ಮೊದಲು ಧ್ರುವಂತ್‌ಗೆ ನಾಮಿನೇಟ್ ಮಾಡಿದ ರಘು, ಎರಡನೇ ಆಯ್ಕೆಯಾಗಿ ಗಿಲ್ಲಿಯನ್ನೇ ಆರಿಸಿದರು.
ಚೂರಿ ಟಾಸ್ಕ್‌ನಲ್ಲಿ ಬಾಹುಬಲಿ ಮ್ಯಾಜಿಕ್ ನಾಮಿನೇಷನ್ ಟಾಸ್ಕ್‌ನಲ್ಲಿ ಮಾಳು ಬಳಿ ಇದ್ದ ಚೂರಿ ತೆಗೆದುಕೊಂಡು ರಘು ನೇರವಾಗಿ ಗಿಲ್ಲಿಯ ಬೆನ್ನಿಗೆ ಚುಚ್ಚಿ ನಾಮಿನೇಟ್ ಮಾಡಿದರು. ಆ ಕ್ಷಣವನ್ನು ನೋಡಿ ಫ್ಯಾನ್ಸ್‌ಗೆ “ಕಟ್ಟಪ್ಪ ಬಾಹುಬಲಿಯ ಬೆನ್ನಿಗೆ ಖಡ್ಗ ಹಾಕಿದ ಸೀನ್” ನೆನಪಾಯ್ತು. “ಕಟ್ಟಪ್ಪ ನೀನು ಏಕೆ ಹೀಗೆ ಮಾಡಿದೆ?” ಎಂಬ ಡೈಲಾಗ್‌ಗಳು ಕಾಮೆಂಟ್ ಸೆಕ್ಷನ್‌ನಲ್ಲಿ ತುಂಬಿಹೋಗಿವೆ.
ಗಿಲ್ಲಿಯ ಕಣ್ಣೀರು, ಆಕ್ರೋಶ ಚೂರಿ ಚುಚ್ಚಿದ ತಕ್ಷಣ ಗಿಲ್ಲಿ ಭಾವುಕರಾದರು. “ಮನೆಯಿಂದ ಹೊರಗೆ ಹೋಗಬೇಕಾದರೆ ಒಳ್ಳೆಯವರ ಜೊತೆ ಫ್ರೆಂಡ್‌ಶಿಪ್ ಮಾಡ್ರಪ್ಪ… ಗೊತ್ತಿರೋವರೇ ಹೀಗೆ ಮಾಡಿದ್ರೆ ನಾವು ಎಲ್ಲಿಗೆ ಹೋಗೋದು?” ಎಂದು ರಘುವನ್ನೇ ಪ್ರಶ್ನಿಸಿದರು. ನಂತರ ಆಕ್ರೋಶದಲ್ಲಿ, “ನನ್ನ ಡ್ರಾಯರ್‌ಗೆ ಕೈ ಹಾಕೋದ್ದಕ್ಕೆ ನೀನ್ಯಾರು ಅಂತಿದ್ರೆ ನೀನೇ ತಪ್ಪಿತಸ್ಥ ಆಗ್ತಿದ್ದೆ. ಬಟ್ಟೆ ಎಸೆದಿದ್ದು ಅದಕ್ಕಿಂತ ದೊಡ್ಡ ತಪ್ಪು. ಟಾಸ್ಕ್‌ಗಳಲ್ಲಿ ನಾನೂ ಆಡಿದೀನಿ, ನೀವು ಸೋತಿದ್ದೀರಿ” ಎಂದು ಗಿಲ್ಲಿ ಗುಡುಗಿದರು.
ರಘು ಕೂಡ ಸುಮ್ಮನಿರಲಿಲ್ಲ. “ಇನ್ನು ಮುಂದೆ ನನ್ನ ಪಕ್ಕ ಕೂರಬೇಡ” ಎಂದು ಗಿಲ್ಲಿಗೆ ಎಚ್ಚರಿಕೆ ಕೊಟ್ಟರು. ಆದರೆ ಗಿಲ್ಲಿ ಕೊನೆಗೆ ಭಾವುಕವಾಗಿ, “ನೀನಂದ್ರೆ ನನಗಿಷ್ಟ… ನೀನು ನನ್ನ ಫ್ರೆಂಡ್… ಕುಚಿಕುನಾ ಬಿಟ್ಟುಕೊಡೋದಿಲ್ಲ” ಎಂದು ಕಣ್ಣೀರಿಟ್ಟರು.
ಫ್ಯಾನ್ಸ್ ಬೇಸರ, ಆಕ್ರೋಶ ರಘುವಿನ ಈ ನಡೆಗೆ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಕಾರಣವೇ ಇಲ್ಲದೇ ಗಿಲ್ಲಿಯ ಮೇಲೆ ಕಿರಿಕಿರಿ”, “ಇಬ್ಬರೂ ಒಟ್ಟಿಗಿದ್ದಾಗಲೇ ಮನೆ ಕಲರ್‌ಫುಲ್ ಇತ್ತು, ಈಗ ಯಾಕೆ ಹೀಗೆ?”, “ರಘು ಓವರ್ ಆಕ್ಟಿಂಗ್ ಮಾಡ್ತಿದ್ದಾನೆ” ಎಂಬ ಕಾಮೆಂಟ್‌ಗಳು ಹರಿದಾಡುತ್ತಿವೆ.
ಇನ್ನೊಂದೆಡೆ ಗಿಲ್ಲಿಯನ್ನು ಬೆಂಬಲಿಸುವವರು “ಗಿಲ್ಲಿ ಯಾವಾಗಲೂ ನಿಜವಾದ ಸ್ನೇಹಿತನಂತೆ ವರ್ತಿಸಿದ್ದಾನೆ, ರಘು ಗೇಮಿಗೋಸ್ಕರ ಮಾಡ್ತಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ವೇಳೆ ಗಿಲ್ಲಿ-ಕಾವ್ಯ ಫ್ರೆಂಡ್‌ಶಿಪ್ ಬಗ್ಗೆ ರಾಶಿಕಾ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. “ಒಬ್ಬನೇ ವ್ಯಕ್ತಿಗೆ ಸ್ಟ್ಯಾಂಡ್ ತಗೊಳ್ಳೋದು ಸರಿಯಲ್ಲ” ಎಂದು ಕ್ಯಾಮೆರಾ ಮುಂದೆ ಹೇಳಿದ್ದಕ್ಕೆ ಕಾವ್ಯ ಆಕ್ರೋಶಗೊಂಡು “ತಾಕತ್ತಿರುವವರು ಬೇರೆಯವರ ಜೊತೆ ಫ್ರೆಂಡ್‌ಶಿಪ್ ಮಾಡಿ ತೋರಿಸಲಿ” ಎಂದು ಗುಡುಗಿದ್ದಾರೆ.





