• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಟೋಮೊಬೈಲ್

ಬೆಂಗಳೂರಿನಲ್ಲಿ ಮೇಳೈಸಿದ ‘ವಿಂಟೇಜ್’ ಗತ್ತು: ಹಳೆಯ ನೆನಪುಗಳನ್ನು ಮರುಕಳಿಸಿದ ಜಾವಾ-ಯೆಜ್ಡಿ ದಿನಾಚರಣೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 13, 2026 - 11:41 am
in ಆಟೋಮೊಬೈಲ್
0 0
0
ಮುನ್ಸೂಚನೆ (7)

ಬೆಂಗಳೂರು: ಮೋಟಾರ್‌ಸೈಕಲ್ ಜಗತ್ತಿನ ಅತಿ ದೊಡ್ಡ ಮತ್ತು ಸುದೀರ್ಘ ಸಂಪ್ರದಾಯಗಳಲ್ಲಿ ಒಂದಾಗಿರುವ ‘ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ’ವನ್ನು ಭಾನುವಾರ (ಜುಲೈ 12)ರಂದು ಅದ್ದೂರಿಯಾಗಿ ಆಚರಿಸಲಾಯಿತು. ಬೆಂಗಳೂರಿನಲ್ಲಿಯೂ ನೂರಾರು ಯೆಜ್ಡಿ ಪ್ರಿಯರು 24ನೇ ಆವೃತ್ತಿಯ ಈ ಸಂಭ್ರಮದಲ್ಲಿ ಪಾಲ್ಗೊಂಡರು.

ರಿಚ್‌ಮಂಡ್‌ ಟೌನ್‌ನ ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌ ಮೈದಾನಕ್ಕೆ ಬೈಕ್‌ ರೈಡಿಂಗ್‌ ಮೂಲಕ ಬಂದು ಸೇರಿದ ನೂರಾರು ರೈಡರ್‌ಗಳು, ಇಡೀ ದಿನವನ್ನು ಹಬ್ಬದ ರೀತಿಯಲ್ಲಿ ಕಳೆದರು. ಹಿರಿ-ಕಿರಿಯರು ಇಲ್ಲಿಗೆ ಬಂದಿದ್ದ, ಪ್ರದರ್ಶನಕ್ಕೆ ಇಟ್ಟಿದ್ದ ಹಳೆಯ ಕ್ಲಾಸಿಕ್‌ ಯೆಜ್ಡಿ ಬೈಕ್‌ಗಳನ್ನು ಕಂಡು ಪುಳಕಿತಗೊಂಡರು. ಅವುಗಳ ಜೊತೆ ಫೋಟೋ ತೆಗೆಸಿಕೊಂಡು, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

RelatedPosts

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ‘ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’! ಬೆಲೆ ಎಷ್ಟು?

ಹೊಸ ‘ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್’ ಬೈಕ್‌ ಬಿಡುಗಡೆ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ! ದರ ಎಷ್ಟು?

ಗುಡ್ ನ್ಯೂಸ್‌ : ಕಡಿಮೆ ಸಾಮರ್ಥ್ಯದ ಫೋನ್‌ಗಳಿಗಾಗಿ ಬರ್ತಿದೆ BGMI LITE, ಶೀಘ್ರದಲ್ಲೇ ಪ್ರೀ-ರಿಜಿಸ್ಟ್ರೇಷನ್ ಆರಂಭ!

ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ ಎಸ್‌ಯುವಿ!

ADVERTISEMENT
ADVERTISEMENT

ಜಾವಾ ಮತ್ತು ಯೆಜ್ಡಿ ಬೈಕ್ ಮಾಲೀಕರ ಒಂದು ಸಣ್ಣ ಗುಂಪಿನಿಂದ ಪ್ರಾರಂಭವಾದ ಈ ಆಚರಣೆ ಇಂದು ಜಾಗತಿಕ ಮಟ್ಟಕ್ಕೆ ಹಬ್ಬಿದೆ. ಬೈಕಿಂಗ್, ಪರಂಪರೆ ಮತ್ತು ಸಮುದಾಯದ ಮೇಲಿನ ಪ್ರೀತಿಯ ಮೂಲಕ ಇದು ಹಲವು ತಲೆಮಾರುಗಳ ರೈಡರ್‌ಗಳನ್ನು ಬೆಸೆಯುತ್ತಿದೆ.

ಪ್ರತಿ ವರ್ಷ ಜುಲೈ ಎರಡನೇ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ. ದಶಕಗಳ ಹಿಂದಿನ ಹಳೆಯ ವಿಂಟೇಜ್ ಜಾವಾ ಮತ್ತು ಯೆಜ್ಡಿ ಬೈಕ್‌ಗಳು ಇಂದಿನ ಆಧುನಿಕ ಬೈಕ್‌ಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ರಸ್ತೆಯಲ್ಲಿ ಸಾಗುವುದೇ ಈ ದಿನದ ವಿಶೇಷವಾಗಿದೆ. ಕೇವಲ ಬೈಕ್‌ಗಳ ಪ್ರದರ್ಶನ ಮಾತ್ರವಲ್ಲದೆ, ಬೈಕಿಂಗ್ ಮೇಲಿನ ಅದೇ ಹಳೆಯ ಒಲವು ಈ ಎರಡೂ ತಲೆಮಾರುಗಳನ್ನು ಒಟ್ಟಿಗೆ ಸೇರಿಸುತ್ತದೆ.

ಗಡಿಗಳನ್ನು ಮೀರಿದ 7,500+ ಸವಾರರ ಸಂಭ್ರಮ

ಈ ವರ್ಷದ ಆಚರಣೆಯು ಎಂದಿಗಿಂತಲೂ ಹೆಚ್ಚು ಅದ್ಧೂರಿಯಾಗಿತ್ತು. ಭಾರತದ 150ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಈ ಆಚರಣೆಯಲ್ಲಿ 40ಕ್ಕೂ ಹೆಚ್ಚು ಬೈಕ್ ಕ್ಲಬ್‌ಗಳ ಜೊತೆಗೆ ಬರೋಬ್ಬರಿ 7,500ಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಂಡು ಇತಿಹಾಸ ನಿರ್ಮಿಸಿದರು.

ಇಷ್ಟೇ ಅಲ್ಲದೆ, ಗಡಿಗಳನ್ನು ದಾಟಿ ವಿಶ್ವದ 11 ದೇಶಗಳಿಗೂ ಈ ಸಂಭ್ರಮ ಹಬ್ಬಿತ್ತು. ಅಲ್ಲಿನ ರೈಡರ್‌ಗಳು ಸ್ಥಳೀಯ ರೈಡ್‌ಗಳು, ಸಮುದಾಯ ಕೂಟಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಈ ದಿನವನ್ನು ಆಚರಿಸಿದರು.

ಕೇವಲ ಬೈಕ್‌ ರೈಡ್‌ ಮಾತ್ರವಲ್ಲ. ತಲೆಮಾರುಗಳಿಂದ ಜಾವಾ-ಯೆಜ್ಡಿ ಉತ್ಸಾಹವನ್ನು ಜೀವಂತವಾಗಿರಿಸಿರುವ ಪರಸ್ಪರ ಸ್ನೇಹ, ನೆನಪುಗಳು ಮತ್ತು ಕಥೆಗಳನ್ನು ರೈಡರ್‌ಗಳು ಇಲ್ಲಿ ಮೆಲುಕು ಹಾಕಿದರು. ಜಗತ್ತಿನಾದ್ಯಂತ ಇರುವ ಜಾವಾ ಸಮುದಾಯಗಳು ಭಾರತದ ರೈಡಿಂಗ್ ಕ್ಲಬ್‌ಗಳೊಂದಿಗೆ ಒಂದೇ ವೇದಿಕೆಯಡಿ ಕೈಜೋಡಿಸಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ʼಇದು ಸವಾರರಿಂದ, ಸವಾರರಿಗಾಗಿಯೇ ಇರುವ ಹಬ್ಬʼ

ಈ ಆಚರಣೆಯ ಕುರಿತು ಮಾತನಾಡಿದ ‘ಕ್ಲಾಸಿಕ್ ಲೆಜೆಂಡ್ಸ್’ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಇಪ್ಪತ್ತನಾಲ್ಕು ವರ್ಷಗಳ ಹಿಂದೆ, ತಾವು ಇಷ್ಟಪಡುವ ಮೋಟಾರ್‌ಸೈಕಲ್‌ಗಳನ್ನು ಸಂಭ್ರಮಿಸಲು ಮುಂದಾದ ಸವಾರರ ಒಂದು ಸಣ್ಣ ಪ್ರಯತ್ನದಿಂದ ಈ ‘ಅಂತಾರಾಷ್ಟ್ರೀಯ ಜಾವಾ-ಯೆಜ್ಡಿ ದಿನ’ ಶುರುವಾಯಿತು. ಇಂದು, ಇದು ದೇಶ-ವಿದೇಶಗಳ ಗಡಿ ಮತ್ತು ತಲೆಮಾರುಗಳನ್ನು ಮೀರಿದ ಜಾಗತಿಕ ಸಂಪ್ರದಾಯವಾಗಿ ಬೆಳೆದಿದೆ. ಈ ಆಚರಣೆ ಸಂಪೂರ್ಣವಾಗಿ ಬೈಕ್ ಸವಾರರಿಗೆ ಸೇರಿದ್ದು ಎಂಬುದು ಇದರ ದೊಡ್ಡ ವೈಶಿಷ್ಟ್ಯ. ಪ್ರತಿಯೊಂದು ರೈಡ್, ಪ್ರತಿಯೊಂದು ಕೂಟ ಮತ್ತು ಹಂಚಿಕೊಂಡ ಪ್ರತಿಯೊಂದು ಕಥೆಯು ಈ ಪರಂಪರೆಯನ್ನು ಜೀವಂತವಾಗಿರಿಸುತ್ತದೆ. ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಿರುವ ಈ ಚಳುವಳಿಯ ಭಾಗವಾಗಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ” ಎಂದು ಸಂತಸ ಹಂಚಿಕೊಂಡರು.

ಭಾರತ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿಷ್ಠಿತ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳನ್ನು ಮರುಪರಿಚಯಿಸುವ ಉದ್ದೇಶದೊಂದಿಗೆ ‘ಕ್ಲಾಸಿಕ್ ಲೆಜೆಂಡ್ಸ್’ ಕಂಪನಿಯನ್ನು ಸ್ಥಾಪಿಸಲಾಗಿದ್ದು, ಸದ್ಯ ಈ ಕಂಪನಿಯು ಜಾವಾ, ಯೆಜ್ಡಿ ಮತ್ತು ಬಿಎಸ್‌ಎನಂತಹ ಐತಿಹಾಸಿಕ ಬ್ರ್ಯಾಂಡ್‌ಗಳನ್ನು ಹೊಂದಿದೆ. ಅತ್ಯುತ್ತಮ ಬೈಕ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವ ಮೂಲಕ ಗ್ರಾಹಕರಿಗೆ ನೈಜ ಮೋಟಾರ್‌ಸೈಕ್ಲಿಂಗ್ ಲೈಫ್‌ಸ್ಟೈಲ್ ಅನುಭವವನ್ನು ನೀಡುವುದು ಹಾಗೂ ಕ್ಲಾಸಿಕ್ ಬೈಕ್‌ಗಳ ಮಾರುಕಟ್ಟೆಗೆ ಮರುಜೀವ ತುಂಬುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (52)

ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಡ್ತೇನೆ: ಕಣ್ಣೀರಾಕಿದ ಬಿ.ನಾಗೇಂದ್ರ

by ಶಾಲಿನಿ ಕೆ. ಡಿ
August 28, 2026 - 6:44 pm
0

Your paragraph text (51)

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ

by ಶಾಲಿನಿ ಕೆ. ಡಿ
August 28, 2026 - 6:17 pm
0

Your paragraph text (50)

ಮ್ಯಾಗ್ನಸ್ ಕಾರ್ಲ್‌ಸೆನ್ ಜೊತೆ ಚೆಸ್ ಆಡುವ ಅವಕಾಶ: ಬೆಂಗಳೂರಿನ ಯುವಕರಿಗೆ ಬಂಪರ್ ಆಫರ್!

by ಶಾಲಿನಿ ಕೆ. ಡಿ
August 28, 2026 - 5:56 pm
0

Your paragraph text (49)

ಜೈಲರ್-2 ಫಸ್ಟ್ ಸಾಂಗ್‌‌‌‌‌ ಔಟ್..ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2026 - 5:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (23)
    ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ‘ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’! ಬೆಲೆ ಎಷ್ಟು?
    August 27, 2026 | 0
  • Untitled design 2026 08 20T163128.679
    ಹೊಸ ‘ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್’ ಬೈಕ್‌ ಬಿಡುಗಡೆ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ! ದರ ಎಷ್ಟು?
    August 20, 2026 | 0
  • Untitled design 2026 08 19T143333.242
    ಗುಡ್ ನ್ಯೂಸ್‌ : ಕಡಿಮೆ ಸಾಮರ್ಥ್ಯದ ಫೋನ್‌ಗಳಿಗಾಗಿ ಬರ್ತಿದೆ BGMI LITE, ಶೀಘ್ರದಲ್ಲೇ ಪ್ರೀ-ರಿಜಿಸ್ಟ್ರೇಷನ್ ಆರಂಭ!
    August 19, 2026 | 0
  • Untitled design 2026 08 17T164323.807
    ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ ಎಸ್‌ಯುವಿ!
    August 17, 2026 | 0
  • ಅರ್ಷದ್ (5)
    ವಾಹನ ಸವಾರರಿಗೆ ಶಾಕ್: ಎಮಿಷನ್ ಟೆಸ್ಟ್ ಶುಲ್ಕ ಧಿಡೀರ್ ಹೆಚ್ಚಳ
    August 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version