ಆಟೋ ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಟೊಯೋಟಾ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಕಾರುಗಳನ್ನು ಭವಿಷ್ಯದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಅದರ ಭಾಗವಾಗಿ ದೆಹಲಿಯ ಭಾರತದ ಮಂಟಪದಲ್ಲಿ ನಡೆಯುತ್ತಿರುವ 2025ನೇ ಸಾಲಿನ ‘ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ’ದಲ್ಲಿ ಮಲ್ಟಿ ಪಾತ್ ವೇ ಎನ್ನುವ ವಿನೂತನ ಕಲ್ಪನೆಯಲ್ಲಿ ನಾಲ್ಕು ಅತ್ಯಾ ಧುನಿಕ ಕಾರುಗಳನ್ನು ಪ್ರದರ್ಶಿಸಿದೆ.
ಅತ್ಯಾಕರ್ಷಕ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಗ್ರಾಹಕ ಸ್ನೇಹಿಯಾದ, ಪರಿಸರಕ್ಕೆ ಪೂರಕವಾಗಿರುವ ಕಾರುಗಳ ಉತ್ಪಾದನೆಗೆ ಕಂಪನಿ ಮುಂದಾಗಿದೆ. ಈ ಕಾರುಗಳು ದೇಶದ ಮಾರುಕಟ್ಟೆಗೆ ಇನ್ನೂ ಕಾಲಿಟ್ಟಿಲ್ಲ. ಶೀಘ್ರದಲ್ಲೇ ಗ್ರಾಹಕರನ್ನು ತಲುಪಲು ಕಂಪನಿ ಕೆಲಸ ಆರಂಭಿಸಿದೆ.
ಈ ಹೊಸ ಕಾರುಗಳು ಶೂನ್ಯ ಕಾರ್ಬನ್ ಹೊರ ಸೂಸುವಿಕೆ, ಎಥನಾಲ್ ಬ್ಯಾಟರಿ ಹೈಬ್ರಿಡ್, ಪ್ಲಗ್ ಇನ್ ಹೈಬ್ರಿಡ್ ಹೈಡೋಜನ್ ಎಂಜಿನ್, ಕಡಿಮೆ ಪ್ರಮಾಣದ ಪೆಟ್ರೋಲ್ ಬಳಕೆಯ ವಿಶೇಷತೆ ಹೊಂದಿವೆ.
ಈ ಹೊಸ ಅನ್ವೇಷಣೆಯ ವಿಶೇಷತೆಗಳೇನು?
ಟೊಯೋಟಾ ಕಂಪನಿಯ ವಿನೂತನ ಕಲ್ಪನೆಯ ಈ ಮಲ್ಟಿಪಾತ್ ವೇನಲ್ಲಿ ಭಿನ್ನ ವಿನ್ಯಾಸದ ಕಾರುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅವು ಗಳಲ್ಲಿ ‘ಅರ್ಬನ್ ಬ್ಯಾಟರಿ ಎಲೆಕ್ಟಿಕಲ್ ವೆಹಿಕಲ್’ ಸಂಪೂರ್ಣ ಎಲೆಕ್ಟಿಕ್ ವಾಹನವಾಗಿದೆ. ‘ಹೈಲಕ್ಸ್ ಪ್ಯೂಯಲ್ ಸೆಲ್ ಎಲೆಕ್ನಿಕ್ ವೆಹಿಕಲ್’ ಇದು ಸಂಪೂರ್ಣ ಹೈಡೋಜನ್ ವಾಹನವಾಗಿದ್ದು ಶೂನ್ಯ ಕಾರ್ಬನ್ ಹೊರ ಸೂಸುವಿಕೆ ಕಲ್ಪನೆ ಹೊಂದಿದೆ.
ಪ್ರಿಯಸ್ (ಪ್ಲಗ್ ಇನ್ ಹೈಬ್ರಿಡ್ಎಲೆಕ್ನಿಕ್ ವೆಹಿಕಲ್) ಇದು ಇವಿ ವಾಹನಗಳ ವಿಧಾನಗಳನ್ನು ತೋರಿಸುತ್ತದೆ. ಟೊಯೋಟಾದ ಹೈಬ್ರಿಡ್ ಸಿಸ್ಟಮ್‌ಗಳನ್ನು ಹೊಂದಿರುವ ಹೈಕ್ರಾಸ್ ಕಟ್ ಸೆಕ್ಷನ್ (ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟಿಕಲ್) ಪ್ಲೆಕ್ಸಿ ಪ್ಯುಯೆಲ್ ಹೈಬ್ರಿಡ್ ಎಲೆಕ್ಟಿಕ್ ಕಾರುಗಳು ಮತ್ತು ಅವುಗಳ ಎಂಜಿನ್ ಆಂತರಿಕ ಭಾಗಗಳು ಪ್ರದರ್ಶನಗೊಂಡವು.
‘ಸರ್ವರಿಗೂ ಸಂತೋಷ’ ಎನ್ನುವ ಕಲ್ಪನೆ ಯೊಂದಿಗೆ ಟೊಯೋಟಾ ಕೆಲಸ ಆರಂಭಿಸಿದೆ. ಇನ್ನು ಹೈಬ್ರಿಡ್ ವಲಯದಲ್ಲಿಯೂ ತನ್ನ ಪಾರುಪತ್ಯವನ್ನು ಮೆರೆಯುತ್ತಿದ್ದು. ಈ ವಲಯವು ಟೊಯೋಟಾದ ಹೈಬ್ರಿಡ್ ಎಲೆಕ್ಟಿಕ್ ವಾಹನಗಳನ್ನು ಪ್ರದರ್ಶಿಸುತ್ತಿದ್ದು, ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್, ಹೈರೈಡರ್, ವೆಲ್‌ಫೈರ್ ಪ್ರದರ್ಶನದಲ್ಲಿದ್ದವು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc