ಜ್ಯೋತಿಷ್ಯ ಶಾಸ್ತ್ರವು ನಮ್ಮ ಜೀವನದಲ್ಲಿ ಸಂಭವಿಸಲಿರುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುವ ಪ್ರಾಚೀನ ವಿಜ್ಞಾನ. ಇಂದಿನ ನಿತ್ಯ ಪಂಚಾಂಗದ ಪ್ರಕಾರ, ಪ್ರತಿ ರಾಶಿಯವರ ಜೀವನದ ವಿವಿಧ ಅಂಶಗಳಾದ ಕಾರ್ಯ, ಆರೋಗ್ಯ, ಆರ್ಥಿಕತೆ ಮತ್ತು ಕುಟುಂಬ ಜೀವನದಲ್ಲಿ ಮಹತ್ವದ ಬದಲಾವಣೆಗಳು ಎದುರಾಗಲಿವೆ. ಈ ಭವಿಷ್ಯವಾಣಿಯನ್ನು ಅರಿತುಕೊಂಡು ಸೂಚನೆಗಳನ್ನು ಪಾಲಿಸಿದರೆ, ಜೀವನದ ಸವಾಲುಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯ.
ಮೇಷ (Aries): ಕೃಷಿ ಮತ್ತು ಪಾಲುದಾರರ ವ್ಯವಹಾರದಲ್ಲಿ ಸ್ವಲ್ಪ ಒತ್ತಡ ಕಡಿಮೆಯಾಗಲಿದೆ. ಕಾನೂನು ಸಂಬಂಧಿ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಆದರೆ, ಮಕ್ಕಳ ಜೊತೆ ವಾಗ್ವಾದದ ಸಾಧ್ಯತೆ ಇದ್ದು, ಮನಸ್ಸನ್ನು ಶಾಂತಗೊಳಿಸುವ ಪ್ರಯತ್ನ ಅಗತ್ಯ.
ವೃಷಭ (Taurus): ಸಂಬಂಧಗಳಲ್ಲಿ ಸುಧಾರಣೆ ಕಾಣಲಿದೆ. ಮಕ್ಕಳಿಂದ ಪ್ರಶಂಸೆ ಮತ್ತು ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಮಧ್ಯಸ್ತಿಕೆಯಿಂದ ಕಲಹ ಪರಿಹಾರವಾಗಲಿದೆ.
ಮಿಥುನ (Gemini): ಈ ದಿನ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅನುಕೂಲಕರ. ಆದರೆ, ಆರ್ಥಿಕ ವಿಚಾರಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಕುಟುಂಬದಲ್ಲಿ ಜೀವನಸಂಗಾತಿಯ ಆರೋಗ್ಯಕ್ಕೆ ಗಮನ ಕೊಡಬೇಕಾಗಬಹುದು.
ಕರ್ಕಾಟಕ (Cancer): ಹೊಸ ಅವಕಾಶಗಳು ದೊರಕಲಿದ್ದರೂ, ನಿರ್ಧಾರ ತೆಗೆದುಕೊಳ್ಮುವಾಗ ಗೊಂದಲ ಉಂಟಾಗಬಹುದು. ಆರ್ಥಿಕ ವ್ಯವಹಾರಗಳಲ್ಲಿ ವೈಮನಸ್ಯದ ಸಾಧ್ಯತೆ ಇದೆ. ಪರರಿಗೆ ಸಹಾಯ ಮಾಡುವುದರಿಂದ ಮನಶ್ಶಾಂತಿ ದೊರೆಯಲಿದೆ.
ಸಿಂಹ (Leo): ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಿಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಅನುಕೂಲ. ಉದ್ಯಮ ವಿಸ್ತರಣೆಗೆ ಯೋಜನೆ ರೂಪಿಸಬಹುದು.
ಕನ್ಯಾ (Virgo): ಕೃಷಿಕರಿಗೆ ಲಾಭದಾಯಕ ದಿನ. ಅತಿಥಿ ಆಗಮನದಿಂದ ಮನೆಯಲ್ಲಿ ಸಂತೋಷ. ವೃತ್ತಿ ಜೀವನದಲ್ಲಿ ನಿಮ್ಮ ಜ್ಞಾನದ ಪ್ರದರ್ಶನ ಯಶಸ್ವಿ ಆಗಲಿದೆ.
ತುಲಾ (Libra): ಜೊತೆಗಾರರ ಸಹಕಾರದಿಂದ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯ. ಕಾನೂನು ಸಂಬಂಧಿ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಬೇಕು. ದುಸ್ಸಾಧ್ಯ ಕಾರ್ಯಗಳನ್ನು ಬಿಡುವುದು ಒಳ್ಳೆಯದು.
ವೃಶ್ಚಿಕ (Scorpio): ಹೊಸ ಯೋಜನೆಗಳಿಗೆ ಹೂಡಿಕೆ ಮಾಡಲು ಉತ್ತಮ ದಿನ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಆದರೆ, ನಿಮ್ಮ ಮಾತುಗಳ ಮೇಲೆ ನಿಯಂತ್ರಣ ಅಗತ್ಯ.
ಧನು (Sagittarius): ಮಕ್ಕಳ ನಿರ್ಧಾರಗಳನ್ನು ಒಪ್ಪಿಕೊಳ್ಳಲು ಪ್ರಯತ್ನಿಸಿ. ಇತರರ ಕೆಂಗಣ್ಣಿನ ಪರಿಣಾಮ ಎದುರಾಗಬಹುದು. ಆರೋಗ್ಯದಲ್ಲಿ ಸಣ್ಣ ತೊಂದರೆಗಳು ಕಾಣಿಸಿಕೊಳ್ಳಬಹುದು.
ಮಕರ (Capricorn): ದಣಿವಿನ ಭಾವನೆ ಹೆಚ್ಚಿರುವ ದಿನ. ಮಕ್ಕಳ ವಿಚಾರದಲ್ಲಿ ನಿಮ್ಮ ದೃಷ್ಟಿಕೋನ ಬದಲಾಗಲಿದೆ. ಕೆಲಸದಲ್ಲಿ ನಿಷ್ಠೆಯಿಂದ ಮುಂದುವರೆದರೆ ಉತ್ತಮ ಫಲ ದೊರೆಯಲಿದೆ.
ಕುಂಭ (Aquarius): ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಹಳೆಯ ವಿಚಾರಗಳನ್ನು ಮರೆತು ಹೊಸತನದ ದಿಕ್ಕಿನಲ್ಲಿ ಮುನ್ನಡೆಯಲು ಪ್ರಯತ್ನಿಸಿ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು ತಲೆದೋರಬಹುದು.
ಮೀನ (Pisces): ವಿಶ್ರಾಂತಿ ತೆಗೆದುಕೊಳ್ಳಲು ಉತ್ತಮ ದಿನ. ಅನಗತ್ಯ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳದೇ ಇರಲು ಜಾಗರೂಕರಾಗಿರಿ. ಕಾರ್ಯಸ್ಥಳ ಬದಲಾವಣೆಯ ಸಾಧ್ಯತೆ ಇದೆ.