ಇಂದಿನ ರಾಶಿಫಲ:ನಿಮ್ಮ ರಾಶಿಗೆ ಇಂದು ಶುಭವೇ ? ಅಶುಭವೇ..?

Untitled design (1)

ಜ್ಯೋತಿಷ್ಯ ಶಾಸ್ತ್ರವು ನಮ್ಮ ಜೀವನದಲ್ಲಿ ಸಂಭವಿಸಲಿರುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುವ ಪ್ರಾಚೀನ ವಿಜ್ಞಾನ. ಇಂದಿನ ನಿತ್ಯ ಪಂಚಾಂಗದ ಪ್ರಕಾರ, ಪ್ರತಿ ರಾಶಿಯವರ ಜೀವನದ ವಿವಿಧ ಅಂಶಗಳಾದ ಕಾರ್ಯ, ಆರೋಗ್ಯ, ಆರ್ಥಿಕತೆ ಮತ್ತು ಕುಟುಂಬ ಜೀವನದಲ್ಲಿ ಮಹತ್ವದ ಬದಲಾವಣೆಗಳು ಎದುರಾಗಲಿವೆ. ಈ ಭವಿಷ್ಯವಾಣಿಯನ್ನು ಅರಿತುಕೊಂಡು ಸೂಚನೆಗಳನ್ನು ಪಾಲಿಸಿದರೆ, ಜೀವನದ ಸವಾಲುಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯ.

ಮೇಷ (Aries): ಕೃಷಿ ಮತ್ತು ಪಾಲುದಾರರ ವ್ಯವಹಾರದಲ್ಲಿ ಸ್ವಲ್ಪ ಒತ್ತಡ ಕಡಿಮೆಯಾಗಲಿದೆ. ಕಾನೂನು ಸಂಬಂಧಿ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಆದರೆ, ಮಕ್ಕಳ ಜೊತೆ ವಾಗ್ವಾದದ ಸಾಧ್ಯತೆ ಇದ್ದು, ಮನಸ್ಸನ್ನು ಶಾಂತಗೊಳಿಸುವ ಪ್ರಯತ್ನ ಅಗತ್ಯ.

ವೃಷಭ (Taurus): ಸಂಬಂಧಗಳಲ್ಲಿ ಸುಧಾರಣೆ ಕಾಣಲಿದೆ. ಮಕ್ಕಳಿಂದ ಪ್ರಶಂಸೆ ಮತ್ತು ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಮಧ್ಯಸ್ತಿಕೆಯಿಂದ ಕಲಹ ಪರಿಹಾರವಾಗಲಿದೆ.

ಮಿಥುನ (Gemini): ಈ ದಿನ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅನುಕೂಲಕರ. ಆದರೆ, ಆರ್ಥಿಕ ವಿಚಾರಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಕುಟುಂಬದಲ್ಲಿ ಜೀವನಸಂಗಾತಿಯ ಆರೋಗ್ಯಕ್ಕೆ ಗಮನ ಕೊಡಬೇಕಾಗಬಹುದು.

ಕರ್ಕಾಟಕ (Cancer): ಹೊಸ ಅವಕಾಶಗಳು ದೊರಕಲಿದ್ದರೂ, ನಿರ್ಧಾರ ತೆಗೆದುಕೊಳ್ಮುವಾಗ ಗೊಂದಲ ಉಂಟಾಗಬಹುದು. ಆರ್ಥಿಕ ವ್ಯವಹಾರಗಳಲ್ಲಿ ವೈಮನಸ್ಯದ ಸಾಧ್ಯತೆ ಇದೆ. ಪರರಿಗೆ ಸಹಾಯ ಮಾಡುವುದರಿಂದ ಮನಶ್ಶಾಂತಿ ದೊರೆಯಲಿದೆ.

ಸಿಂಹ (Leo): ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಿಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಅನುಕೂಲ. ಉದ್ಯಮ ವಿಸ್ತರಣೆಗೆ ಯೋಜನೆ ರೂಪಿಸಬಹುದು.

ಕನ್ಯಾ (Virgo): ಕೃಷಿಕರಿಗೆ ಲಾಭದಾಯಕ ದಿನ. ಅತಿಥಿ ಆಗಮನದಿಂದ ಮನೆಯಲ್ಲಿ ಸಂತೋಷ. ವೃತ್ತಿ ಜೀವನದಲ್ಲಿ ನಿಮ್ಮ ಜ್ಞಾನದ ಪ್ರದರ್ಶನ ಯಶಸ್ವಿ ಆಗಲಿದೆ.

ತುಲಾ (Libra): ಜೊತೆಗಾರರ ಸಹಕಾರದಿಂದ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯ. ಕಾನೂನು ಸಂಬಂಧಿ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಬೇಕು. ದುಸ್ಸಾಧ್ಯ ಕಾರ್ಯಗಳನ್ನು ಬಿಡುವುದು ಒಳ್ಳೆಯದು.

ವೃಶ್ಚಿಕ (Scorpio): ಹೊಸ ಯೋಜನೆಗಳಿಗೆ ಹೂಡಿಕೆ ಮಾಡಲು ಉತ್ತಮ ದಿನ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಆದರೆ, ನಿಮ್ಮ ಮಾತುಗಳ ಮೇಲೆ ನಿಯಂತ್ರಣ ಅಗತ್ಯ.

ಧನು (Sagittarius): ಮಕ್ಕಳ ನಿರ್ಧಾರಗಳನ್ನು ಒಪ್ಪಿಕೊಳ್ಳಲು ಪ್ರಯತ್ನಿಸಿ. ಇತರರ ಕೆಂಗಣ್ಣಿನ ಪರಿಣಾಮ ಎದುರಾಗಬಹುದು. ಆರೋಗ್ಯದಲ್ಲಿ ಸಣ್ಣ ತೊಂದರೆಗಳು ಕಾಣಿಸಿಕೊಳ್ಳಬಹುದು.

ಮಕರ (Capricorn): ದಣಿವಿನ ಭಾವನೆ ಹೆಚ್ಚಿರುವ ದಿನ. ಮಕ್ಕಳ ವಿಚಾರದಲ್ಲಿ ನಿಮ್ಮ ದೃಷ್ಟಿಕೋನ ಬದಲಾಗಲಿದೆ. ಕೆಲಸದಲ್ಲಿ ನಿಷ್ಠೆಯಿಂದ ಮುಂದುವರೆದರೆ ಉತ್ತಮ ಫಲ ದೊರೆಯಲಿದೆ.

ಕುಂಭ (Aquarius): ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಹಳೆಯ ವಿಚಾರಗಳನ್ನು ಮರೆತು ಹೊಸತನದ ದಿಕ್ಕಿನಲ್ಲಿ ಮುನ್ನಡೆಯಲು ಪ್ರಯತ್ನಿಸಿ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಗಳು ತಲೆದೋರಬಹುದು.

ಮೀನ (Pisces): ವಿಶ್ರಾಂತಿ ತೆಗೆದುಕೊಳ್ಳಲು ಉತ್ತಮ ದಿನ. ಅನಗತ್ಯ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳದೇ ಇರಲು ಜಾಗರೂಕರಾಗಿರಿ. ಕಾರ್ಯಸ್ಥಳ ಬದಲಾವಣೆಯ ಸಾಧ್ಯತೆ ಇದೆ.

Exit mobile version