ಧುರಂಧರ್ ದಿ ರಿವೆಂಜ್ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಕಿಂಗ್ ಕಾಂಗ್ ಆಗಿ ಅಬ್ಬರಿಸಿ, ಆರ್ಭಟಿಸುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸಿದೆ ಈ ಇಂಡಿಯನ್ ಮೂವಿ. ರಣ್ವೀರ್-ಆದಿತ್ಯ ಧರ್ ಆಟಕ್ಕೆ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಕೂಡ ಭೇಷ್ ಅಂದಿದ್ರು. ಅಷ್ಟೇ ಅಲ್ಲ, ಇನ್ಸ್‌ಟಾ ಸ್ಟೋರಿ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ರು. ಆದ್ರೆ ಅದ್ರಿಂದ ಆಗಿರೋ ಎಫೆಕ್ಟ್ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- ಧುರಂಧರ್ ರಿವ್ಯೂ ಎಡವಟ್.. ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?
- ಪೋಸ್ಟ್ ಬಳಿಕ ಕೊಹ್ಲಿನ 7 ಮಿಲಿಯನ್ ಮಂದಿ ಅನ್‌ಫಾಲೋ
- ಪ್ರೊಪಗಾಂಡ ಎಫೆಕ್ಟ್.. ವಿರಾಟ್ ಕೊಹ್ಲಿ ನಡೆಗೆ ನೆಟ್ಟಿಗರು ಬೇಸರ
- ಆದ್ರೆ ಕಿಂಗ್ ಕೊಹ್ಲಿ ಪೋಸ್ಟ್ ನಂತ್ರ ಧುರಂಧರ್ ಕಲೆಕ್ಷನ್ ಡಬಲ್
ಧುರಂಧರ್ ಸೀಕ್ವೆಲ್ ಸಿನಿಮಾ ತೆರೆಕಂಡು ಇಂದಿಗೆ ಮೂರು ವಾರಗಳಾಯ್ತು. ಇಂದಿಗೂ ಬಾಕ್ಸ್ ಆಫೀಸ್‌ನಲ್ಲಿ ನಿಂತಿಲ್ಲ ರಣ್ವೀರ್ ಸಿಂಗ್ ಆರ್ಭಟ. ಯೆಸ್.. ಕೇವಲ 21 ದಿನದಲ್ಲಿ ಈ ಸಿನಿಮಾ ಸುಮಾರು 1653 ಕೋಟಿಗೂ ಅಧಿಕ ಮೊತ್ತ ಗಳಿಸಿದೆ. ಇದು ನಿಜಕ್ಕೂ ಆ ಸಿನಿಮಾದ ಕಥೆ, ಪಾತ್ರಗಳು, ನಿರ್ದೇಶನ ಹಾಗೂ ಮೇಕಿಂಗ್ ಗತ್ತು, ಗಮ್ಮತ್ತಿನ ಪ್ರತಿಫಲ ಅಂದ್ರೆ ತಪ್ಪಾಗಲ್ಲ. ಅಂಥದ್ದೊಂದು ಮೈಂಡ್ ಬ್ಲೋಯಿಂಗ್ ಮೂವಿ ನೀಡಿದ ಗರಿಮೆ ನಿರ್ದೇಶಕ ಆದಿತ್ಯ ಧರ್‌ಗೆ ಸಲ್ಲುತ್ತೆ.
ಇಡೀ ದೇಶವೇ ಈ ಸಿನಿಮಾನ ಕೊಂಡಾಡ್ತಿದೆ. ದುಬೈನಿಂದ ಸಾಕಷ್ಟು ಮಂದಿ ಇಂಡಿಯಾಗೆ ಬಂದು ಧುರಂಧರ್‌ನ ನೋಡಿಕೊಂಡು ಹೋಗ್ತಿದ್ದಾರೆ. ಇದರ ನಡುವೆ ಸಾಕಷ್ಟು ಟೀಕೆಗಳು ಕೂಡ ಕೇಳಿಬಂದಿವೆ. ವಿರಾಟ್ ಕೊಹ್ಲಿ ತಮ್ಮ ಇನ್ಸ್‌ಟಾದಲ್ಲಿ ಒಂದು ಪೋಸ್ಟ್ ಮಾಡೋಕೆ ಕೋಟ್ಯಂತರ ರೂಪಾಯಿ ಪಡೀತಾರೆ. ಆದ್ರೆ ಆತ ಸಿನಿಮಾ ನೋಡಿ ಮೆಚ್ಚಿಕೊಂಡು, ಯಾವುದೇ ನಿರೀಕ್ಷೆಯಿಲ್ಲದೆ ಇತ್ತೀಚೆಗೆ ನಾ ನೋಡಿದ ಭಾರತೀಯ ಚಿತ್ರರಂಗದ ಬೆಸ್ಟ್ ಸಿನಿಮಾ ಅಂದ್ರು. ಆ ಪೋಸ್ಟ್ ಬಳಿಕ ಸಿನಿಮಾದ ಕಲೆಕ್ಷನ್ ದಿನಕ್ಕೆ 8 ಕೋಟಿಯಿಂದ 20 ಕೋಟಿಗೆ ಏರಿಕೆ ಆಯ್ತು.
ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ಕಿಂಗ್ ಕೊಹ್ಲಿ ಪ್ರೊಪಗಾಂಡ ಮೂವಿಯೊಂದನ್ನ ಪ್ರಮೋಟ್ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಅವ್ರ ಫಾಲೋವರ್ಸ್ ಸಂಖ್ಯೆಯಲ್ಲಿ ದಿಢೀರ್ ಇಳಿಕೆ ಕಂಡು ಬಂದಿದೆ. ಹೌದು.. ಧುರಂಧರ್ ಚಿತ್ರದ ರಿವ್ಯೂ ಪೋಸ್ಟ್ ಹಾಕೋಕೆ ಮುನ್ನ ಕೊಹ್ಲಿಗೆ 283 ಮಿಲಿಯನ್ ಫಾಲೋವರ್ಸ್ ಇದ್ದರು. ಆದ್ರೆ ಆ ಪೋಸ್ಟ್ ನಂತ್ರ ಆ ಫಾಲೋವರ್ಸ್ ಸಂಖ್ಯೆ 276ಕ್ಕೆ ಇಳಿಕೆ ಆಗಿದೆ. ಅಲ್ಲಿಗೆ ಬರೋಬ್ಬರಿ 7 ಮಿಲಿಯನ್ ಮಂದಿ ಫಾಲೋವರ್ಸ್ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿಯನ್ನ ಅನ್‌ಫಾಲೋ ಮಾಡಿದ್ದಾರೆ.
ಓ ಮೈ ಗಾಡ್ ಒಂದೇ ಒಂದು ಸಿನಿಮಾ ಪೋಸ್ಟ್ ಇಷ್ಟೆಲ್ಲಾ ಬದಲಾವಣೆಗಳಿಗೆ ಮುನ್ನುಡಿ ಬರೆದುಬಿಡ್ತಾ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದ್ರಲ್ಲೂ ಯಾವುದೇ ರಾಜಕೀಯ ಪಕ್ಷದ ಪರ ಅಥ್ವಾ ರಾಜಕಾರಣಿ ಪದ ಗುರ್ತಿಸಿಕೊಳ್ಳದ ವಿರಾಟ್, ಇದೇ ಮೊದಲ ಬಾರಿ ತನ್ನ ಡೆಲ್ಲಿ ಹುಡ್ಗ ಡೈರೆಕ್ಟ್ ಮಾಡಿರೋ ಸಿನಿಮಾ ಬಗ್ಗೆ ನಾಲ್ಕು ಒಳ್ಳೆಯ ಪದಗಳನ್ನ ಬರೆದುಕೊಂಡಿದ್ದೇ ತಪ್ಪಾಯ್ತಾ ಅಂತ ತಲೆಕೆಡಿಸಿಕೊಳ್ಳುವಂತಾಗಿದೆ. ಅದೇನೇ ಇರಲಿ, ಧುರಂಧರ್ ಚೆನ್ನಾಗಿದೆ ಅಥ್ವಾ ಚೆನ್ನಾಗಿಲ್ಲ ಅನ್ನೋದು ಕೊಹ್ಲಿಯ ವೈಯಕ್ತಿಕ ಅಭಿವ್ಯಕ್ತಿ ಸ್ವಾತಂತ್ರ್ಯ. ಅದನ್ನ ಪ್ರಶ್ನಿಸೋ ಹಕ್ಕು ಯಾರಿಗೂ ಇಲ್ಲ. ಆದ್ರೆ ಅವ್ರನ್ನ ಫಾಲೋ ಮಾಡ್ಬೇಕು ಅಥ್ವಾ ಮಾಡಬಾರದು ಅನ್ನೋದು ಕೂಡ ಅವರವರ ವಿವೇಚನೆಗೆ ಬಿಟ್ಟಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





