ದೀಪಾವಳಿ ಹಬ್ಬಕ್ಕೆ ತೆರೆಗೆ ಬರೋಕೆ ಸಜ್ಜಾಗ್ತಿರೋ ರಾಕಿಂಗ್‌ಸ್ಟಾರ್-ರಣ್‌ಬೀರ್ ರಾಮಾಯಣ ಸಿನಿಮಾದ 700 ಕೋಟಿ ಬ್ಯುಸಿನೆಸ್ ಡೀಲ್‌ನ ನೋ ಅಂದಿದ್ದಾರೆ ನಿರ್ಮಾಪಕರು. ರಿಲೀಸ್‌ಗೂ ಮೊದಲೇ 700 ಕೋಟಿ ವ್ಯವಹಾರನ ಕೈ ಬಿಟ್ಟಿದ್ಯಾಕೆ ನಮಿತ್ ಮಲ್ಹೋತ್ರಾ ಅಂತೀರಾ..? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ.
ಹನುಮ ಜಯಂತಿ ವಿಶೇಷ ಇತ್ತೀಚೆಗೆ ಯಶ್ ಹಾಗೂ ರಣ್‌ಬೀರ್ ಕಪೂರ್ ನಟನೆಯ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಟೀಸರ್ ಬಿಡುಗಡೆ ಆಯಿತು. ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆಗಳು, ಒಂದಷ್ಟು ಟೀಕೆ, ಟಿಪ್ಪಣಿಗಳು ಕೂಡ ಬಂದವು. ಆದ್ರೆ ಅವುಗಳ ಹೊರತಾಗಿ ರಾಮಾಯಣ ದೇಶ, ವಿದೇಶಗಳಲ್ಲಿ ಸದ್ದು ಮಾಡ್ತಿದೆ. ಮೊದಲು ಲಾಸ್ ಏಂಜಲೀಸ್ ನಂತ್ರ ಮುಂಬೈನಲ್ಲಿ ಸುದ್ದಿಗೋಷ್ಠಿಗಳನ್ನ ನಡೆಸೋ ಮೂಲಕ ಟೀಸರ್ ಬಿಡುಗಡೆ ಮಾಡಿದ ಟೀಂ, ಅಲ್ಲೆಲ್ಲಾ ಶಹಬ್ಬಾಸ್ ಅನಿಸಿಕೊಂಡಿದೆ.
700 Cr ಆಫರ್ ಕೈ ಬಿಟ್ಟಿದ್ಯಾಕೆ ರಾಮಾಯಣ ಪ್ರೊಡ್ಯೂಸರ್..?
ಪ್ರತಿಷ್ಠಿತ ಓಟಿಟಿ ಕಂಪನಿ ನೀಡಿದ ಡೀಲ್‌ಗೆ ನೋ ಎಂದ ನಮಿತ್
ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಸಾರಥ್ಯದಲ್ಲಿ ತಯಾರಾಗ್ತಿರೋ ಈ ಸಿನಿಮಾದ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ. ನಿರ್ಮಾಪಕ ನಮಿತ್ ಮಲ್ಹೋತ್ರಾ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಜೊತೆಗೂಡಿ ಈ ಸಿನಿಮಾನ ನಿರ್ಮಾಣ ಮಾಡ್ತಿರೋದು ವಿಶೇಷ. ಟೆಕ್ನಿಕಲಿ ರಾಮಾಯಣ ಟೀಸರ್ ಅಷ್ಟಾಗಿ ಪಕ್ವವಾಗಿಲ್ಲ ಅನ್ನೋ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ 700 ಕೋಟಿ ಓಟಿಟಿ ರೈಟ್ಸ್ ಡೇಲ್‌ಗೆ ಸಾಕ್ಷಿ ಆಗಿದೆ ರಾಮಾಯಣ.
ಮಹಾಕಾವ್ಯ ರಾಮಾಯಣವನ್ನ ಈ ಜನರೇಷನ್ ಮಂದಿಗೆ ತಲುಪಿಸಬೇಕು ಅನ್ನೋ ನಿಮಿತ್ ಮಲ್ಹೋತ್ರಾ ಆಶಯ ಬಹಳ ದೊಡ್ಡದಿದೆ. ಅದೇ ಕಾರಣದಿಂದ ಸಿನಿಮಾನ ಮಾಸ್ಟರ್‌ಪೀಸ್ ಆಗಿಸೋ ನಿಟ್ಟಿನಲ್ಲಿ ಸಾಕಷ್ಟು ಮಾಸ್ಟರ್‌ಮೈಂಡ್ಸ್ ಜೊತೆ ಕೆಲಸ ಮಾಡ್ತಿದ್ದಾರೆ. ಈ ವರ್ಷದ ದೀಪಾವಳಿಗೆ ರಾಮಾಯಣ ಮೊದಲ ಭಾಗ ಹಾಗೂ ಮುಂದಿನ ವರ್ಷ ದೀಪಾವಳಿಗೆ 2ನೇ ಭಾಗ ತೆರೆಗೆ ತರ್ತಿದ್ದಾರೆ. ಆದ್ರೆ ಎರಡೂ ಭಾಗಗಳಿಗಾಗಿ 700 ಕೋಟಿ ರೂಪಾಯಿ ಆಫರ್ ಮಾಡಿರೋ ಓಟಿಟಿ ಕಂಪನಿಗೆ ನಮಿತ್ ನೋ ಅಂದಿದ್ದಾರೆ.
1000 ಕೋಟಿ ನಿರೀಕ್ಷೆಯಲ್ಲಿ ರಾಕಿಂಗ್ ಸ್ಟಾರ್-ರಣ್‌ಬೀರ್ ಚಿತ್ರ
ದೀಪಾವಳಿಗೆ ‘ರಾಮಾಯಣ’ ಮೊದಲ ಭಾಗ ಗ್ರ್ಯಾಂಡ್ ರಿಲೀಸ್
ನಮಿತ್ ಮಲ್ಹೋತ್ರಾ ನಿರೀಕ್ಷೆ 1000 ಕೋಟಿ ಇದೆ. ಸದ್ಯ 700 ಕೋಟಿಯೇ ಭಾರತೀಯ ಚಿತ್ರರಂಗದ ಅತಿ ದುಬಾರಿ ಓಟಿಟಿ ರೈಟ್ಸ್ ಡೀಲ್ ಆಗಲಿದ್ದು, ಅದನ್ನೂ ಮೀರಿ ನಿರೀಕ್ಷೆ ಮಾಡ್ತಿದೆ ಚಿತ್ರತಂಡ. ಅದಕ್ಕೆ ಪುಷ್ಪ, ಕೆಜಿಎಫ್, ಬಾಹುಬಲಿ, ಧುರಂಧರ್, ಕಾಂತಾರ ಚಿತ್ರಗಳು ಸಹ ಕಾರಣವಾಗಿವೆ. ಯಾಕಂದ್ರೆ ಮೊದಲ ಭಾಗ ರಿಲೀಸ್ ಬಳಿಕ ಆ ಚಿತ್ರಗಳ ಕ್ರೇಜ್ ದುಪ್ಪಟ್ಟು ಆಯ್ತು. ಬ್ಯುಸಿನೆಸ್ ಕೂಡ ಡಬಲ್ ಆಯ್ತು. ಸದ್ಯ ನಮಿತ್ ಮಲ್ಹೋತ್ರಾ ಸ್ಟ್ರಾಟಜಿ ಕೂಡ ಅದೇ ಆಗಿದೆ. ರಾಮಾಯಣ ಮೊದಲ ಭಾಗ ರಿಲೀಸ್ ಬಳಿಕ, ಅದ್ರ ಸಕ್ಸಸ್‌ನಿಂದ ನಿರೀಕ್ಷೆಗೂ ಮೀರಿದ ಆಫರ್‌ಗಳು ಬರಲಿವೆ ಅನ್ನೋ ಆಲೋಚನೆಯಲ್ಲಿದ್ದಾರೆ. ಸದ್ಯಕ್ಕೆ ಡಿಜಿಟಲ್ ರೈಟ್ಸ್‌ಗೆ ಬಂದ ಆ ಆಫರ್‌ನ ರಿಜೆಕ್ಟ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ನಮ್ಮ ಯಶ್ ನಟಿಸಿ, ಸಹ ನಿರ್ಮಾಣ ಕೂಡ ಮಾಡ್ತಿರೋ ರಾಮಾಯಣ ಸಿನಿಮಾಗೆ ಹೀಗೆ ರಿಲೀಸ್‌ಗೂ ಮೊದಲೇ ಮೇಕಿಂಗ್ ಹಂತದಲ್ಲಿ ಡಿಮ್ಯಾಂಡ್ ಹೆಚ್ಚಿರೋದು ಖುಷಿಯ ವಿಚಾರ. ಇದು ಬ್ರ್ಯಾಂಡ್ ವ್ಯಾಲ್ಯೂ ಕೂಡ ಹೌದು. ಕೆಜಿಎಫ್, ಅನಿಮಲ್ ಚಿತ್ರಗಳಿಂದ ಯಶ್-ರಣ್‌ಬೀರ್ ಸದ್ಯ ಸೆನ್ಸೇಷನಲ್ ಸ್ಟಾರ್‌ಗಳಾಗಿ ರಾರಾಜಿಸ್ತಿದ್ದಾರೆ.





